Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:15 - ಕನ್ನಡ ಸತ್ಯವೇದವು C.L. Bible (BSI)

15 ಅದರ ಒಂದು ಭಾಗ ಒಲೆಗಾಗುತ್ತದೆ, ಚಳಿ ಕಾಯಿಸಿಕೊಳ್ಳುವುದಕ್ಕೆ ಆಗುತ್ತದೆ, ರೊಟ್ಟಿ ಸುಡುವುದಕ್ಕಾಗುತ್ತದೆ. ಇನ್ನೊಂದು ಭಾಗದಿಂದ ದೇವತೆಯನ್ನು ಮಾಡಿ ಮನುಷ್ಯ ಪೂಜಿಸುತ್ತಾನೆ; ವಿಗ್ರಹ ಕೆತ್ತಿ ಅದಕ್ಕೆ ಅಡ್ಡಬೀಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅದು ಸೌದೆಗಾಗುವುದು. ಅದರಿಂದ ಬೆಂಕಿಯನ್ನು ಉರಿಸಿ ಚಳಿಕಾಯಿಸಿಕೊಳ್ಳುವನು. ಅವನು ಬೆಂಕಿಯನ್ನು ಹಚ್ಚಿ ರೊಟ್ಟಿಯನ್ನು ಸುಡುವನು. ಅದರಲ್ಲೇ ಒಂದು ದೇವರನ್ನು ಮಾಡಿಕೊಂಡು ಪೂಜಿಸುವನು, ವಿಗ್ರಹವನ್ನು ಮಾಡಿ ಅದಕ್ಕೆ ಅಡ್ಡಬೀಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅದು ಸೌದೆಗಾಗುವದು; ಅವನು ಸ್ವಲ್ಪ ತೆಗೆದು ಕಾಯಿಸಿಕೊಳ್ಳುವನು, ಉರಿಸಿ ರೊಟ್ಟಿಸುಡುವನು; ಅದರಲ್ಲೇ ಒಂದು ದೇವರನ್ನು ಮಾಡಿಕೊಂಡು ಪೂಜಿಸುವನು, ಬೊಂಬೆ ಕೆತ್ತಿ ಅಡ್ಡಬೀಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅವನು ಮರವನ್ನು ಕಡಿದು, ತನ್ನನ್ನು ಬೆಚ್ಚಗೆ ಮಾಡಲು ಅಗ್ಗಿಷ್ಟಿಕೆಗಾಗಿ ಉಪಯೋಗಿಸುತ್ತಾನೆ; ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಆಹಾರವನ್ನು ಬೇಯಿಸುತ್ತಾನೆ; ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾನೆ. ರೊಟ್ಟಿಯನ್ನು ಸುಡುತ್ತಾನೆ; ಉಳಿದ ಮರದ ತುಂಡಿನಿಂದ ಒಂದು ವಿಗ್ರಹವನ್ನು ಕೆತ್ತುತ್ತಾನೆ. ಆ ವಿಗ್ರಹಕ್ಕೆ ದೇವರೆಂದು ಹೇಳುತ್ತಾನೆ; ಆ ದೇವರು ಮನುಷ್ಯನು ತಯಾರಿಸಿದ ವಿಗ್ರಹ. ಆದರೆ ಅವನು ಆ ವಿಗ್ರಹದ ಮುಂದೆ ಅಡ್ಡಬೀಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆಗ ಅದು ಮನುಷ್ಯರು ಉರಿಸುವುದಕ್ಕಾಗುವುದು. ಏಕೆಂದರೆ ಅದರಿಂದ ಚಳಿಕಾಯಿಸಿಕೊಳ್ಳುತ್ತಾನೆ. ಅದನ್ನು ಬೆಂಕಿ ಹಚ್ಚಿ, ರೊಟ್ಟಿಯನ್ನು ಸುಡುತ್ತಾನೆ. ಅವನು ಅದರಿಂದ ಒಂದು ದೇವರನ್ನು ಮಾಡಿ, ಅದಕ್ಕೆ ನಮಸ್ಕರಿಸುತ್ತಾನೆ. ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡ ಬೀಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:15
10 ತಿಳಿವುಗಳ ಹೋಲಿಕೆ  

ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ, ತಾನು ತೆಗೆದುಕೊಂಡು ಬಂದಿದ್ದ ಸೇಯೀರಿನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ನಿಲ್ಲಿಸಿ, ಅವುಗಳಿಗೆ ಅಡ್ಡಬಿದ್ದು ಧೂಪಾರತಿ ಎತ್ತುತ್ತಿದ್ದನು.


ಆ ವಿಪತ್ತುಗಳಿಂದ ಸಾಯದೆ ಬದುಕಿದ್ದ ಜನರು ತಮ್ಮ ದುಷ್ಕೃತ್ಯಗಳನ್ನು ಬಿಟ್ಟು ದೇವರಿಗೆ ಅಭಿಮುಖರಾಗಲೇ ಇಲ್ಲ; ದೆವ್ವಾರಾಧನೆಯನ್ನು ತ್ಯಜಿಸಲಿಲ್ಲ; ನೋಡಲಾರದ, ಕೇಳಿಸಿಕೊಳ್ಳಲಾರದ ಮತ್ತು ನಡೆಯಲಾರದ ವಿಗ್ರಹಗಳನ್ನು ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಲ್ಲಿ ಮಾಡಿ ಪೂಜಿಸುವುದನ್ನು ಕೈಬಿಡಲಿಲ್ಲ.


“ಅಳಿದುಳಿದ ಅನ್ಯಜನರೇ, ನೆರೆದು ಬನ್ನಿ, ಒಟ್ಟಿಗೆ ನನ್ನ ಬಳಿಗೆ ಬನ್ನಿ. ತಮ್ಮ ಮರದ ಬೊಂಬೆಯನು ಹೊತ್ತು ತಿರುಗುವವರು ರಕ್ಷಿಸಲಾಗದ ದೇವತೆಗೆ ಮೊರೆಯಿಡುವ ಬುದ್ಧಿಹೀನರು.


ದೇವತೆಯನ್ನು ರೂಪಿಸುವವರು ಹಾಗೂ ನಿರರ್ಥಕ ಬೊಂಬೆಗಳನ್ನು ಎರಕಹೊಯ್ಯುವವರು ನಿಷ್ಪ್ರಯೋಜಕರು.


ಅಂಥ ನ್ಯಾಯಾಧಿಪತಿಗಳು ತೀರಿಹೋದ ನಂತರ ಇಸ್ರಯೇಲರು ಮತ್ತೆ ತಮ್ಮ ಹಿಂದಿನವರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಸೇವೆಮಾಡಿ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗಗಳನ್ನೂ ಹಠಮಾರಿತನವನ್ನೂ ಬಿಡಲೇ ಇಲ್ಲ.


ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುತ್ತಾನೆ, ತುರಾಯಿ ಅಲ್ಲೋನ್ ಮರಗಳನ್ನು ಆರಿಸಿಕೊಳ್ಳುತ್ತಾನೆ; ಅವುಗಳನ್ನು ವನವೃಕ್ಷಗಳ ನಡುವೆ ಬೆಳೆಸುತ್ತಾನೆ; ಪೀತದಾರ ಮರವನ್ನು ನೆಟ್ಟು, ಮಳೆ ಸುರಿದು ಬೆಳೆಯುವವರೆಗೂ ಕಾಯುತ್ತಾನೆ,


ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುತ್ತಾನೆ. ಅದು ಮಾಂಸ ಬೇಯಿಸಲಾಗುತ್ತದೆ, ಆ ಸುಟ್ಟ ಮಾಂಸದಿಂದ ಹಸಿವೆ ತೀರಿಸಿಕೊಳ್ಳುತ್ತಾನೆ. ಆ ಬೆಂಕಿಯಿಂದ ಮೈ ಬೆಚ್ಚಗಾಯಿತು,” ಎಂದುಕೊಳ್ಳುತ್ತಾನೆ.


ಉಳಿದ ಭಾಗದಿಂದ ತನ್ನ ದೇವತೆಯ ವಿಗ್ರಹವನ್ನು ಕೆತ್ತಿ, ಅದಕ್ಕೆ ಎರಗಿ ಅಡ್ಡಬೀಳುತ್ತಾನೆ; “ನೀನೇ ನನ್ನ ದೇವರು; ನನ್ನನ್ನು ರಕ್ಷಿಸು,” ಎಂದು ಪ್ರಾರ್ಥಿಸುತ್ತಾನೆ.


ಸುರಿಯುತ್ತಾರೆ ಜನರು ಚಿನ್ನವನ್ನು ಚೀಲದಿಂದ ತೂಗಿ ತೂಕಹಾಕುತ್ತಾರೆ ಬೆಳ್ಳಿಯನ್ನು ತಕ್ಕಡಿಯಿಂದ. ದೇವರನ್ನು ಮಾಡಿಸುತ್ತಾರೆ ಕೂಲಿಕೊಟ್ಟು ಅಕ್ಕಸಾಲಿಗನಿಂದ ಪೂಜಿಸುತ್ತಾರೆ ಅದನ್ನು ಸಾಷ್ಟಾಂಗ ನಮಸ್ಕಾರದಿಂದ.


ದೇಶದಲ್ಲಿ ವಿಗ್ರಹಗಳು ತುಂಬಿ ತುಳುಕುತ್ತಿವೆ. ಜನರು ತಮ್ಮ ಕೈಯಿಂದ ಮಾಡಿದ ವಿಗ್ರಹಗಳನ್ನೇ ಪೂಜಿಸುತ್ತಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು