Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:11 - ಕನ್ನಡ ಸತ್ಯವೇದವು C.L. Bible (BSI)

11 ವಿಗ್ರಹಾರಾಧಕರೆಲ್ಲರೂ ಆಶಾಭಂಗಪಡುವರು. ಅದನ್ನು ಕೆತ್ತಿದವರು ಕೇವಲ ಮನುಷ್ಯ ಮಾತ್ರರು. ಅವರೆಲ್ಲರು ಇಲ್ಲಿಗೆ ಕೂಡಿಬರಲಿ; ನಿಶ್ಚಯವಾಗಿ ಅವರು ಹೆದರಿ ಲಜ್ಜೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ವಿಗ್ರಹ ಶರಣರೆಲ್ಲಾ ಆಶಾಭಂಗಪಡುವರು, ಅದನ್ನು ಕೆತ್ತಿದವರು ಮನುಷ್ಯಮಾತ್ರದವರೇ. ಅವರೆಲ್ಲರು ಒಟ್ಟುಗೂಡಿಕೊಂಡು ನಿಲ್ಲಲಿ. ಅವರು ಒಟ್ಟಿಗೆ ಹೆದರಿಕೊಂಡು ಲಜ್ಜೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ವಿಗ್ರಹಶರಣರೆಲ್ಲಾ ಆಶಾಭಂಗಪಡುವರು; ಅದನ್ನು ಕೆತ್ತಿದವರು ಮನುಷ್ಯಮಾತ್ರದವರೇ; ಅವರೆಲ್ಲರು ಕೂಡಿ ನಿಲ್ಲಲಿ, ಒಟ್ಟಿಗೆ ಹೆದರಿಕೊಂಡು ಲಜ್ಜೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಕುಶಲಕರ್ಮಿಗಳು ಆ ದೇವರುಗಳನ್ನು ಮಾಡಿದರು. ಆ ಕುಶಲಕರ್ಮಿಗಳೆಲ್ಲಾ ಜನರೇ, ಅವರು ದೇವರುಗಳಲ್ಲ. ಆ ದೇವರುಗಳೆಲ್ಲಾ ಒಟ್ಟಾಗಿ ಸೇರಿ ತಮ್ಮೊಳಗೆ ಮಾತಾಡಿಕೊಂಡರೆ ಆಗ ಅವುಗಳಿಗೆ ನಾಚಿಕೆಯೂ ಭಯವೂ ಉಂಟಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅವನೂ, ಅವನ ಸಂಗಡಿಗರೂ ನಾಚಿಕೆಗೆ ಒಳಗಾಗುವರು ಮತ್ತು ಆ ಕೆತ್ತನೆಯ ಕೆಲಸದವರು ಮನುಷ್ಯ ಮಾತ್ರದವರೇ. ಅವರೆಲ್ಲರೂ ಒಟ್ಟುಗೂಡಿ ನಿಂತುಕೊಳ್ಳಲಿ. ಅವರು ಭಯಪಟ್ಟು, ಒಟ್ಟಿಗೆ ಲಜ್ಜೆಪಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:11
22 ತಿಳಿವುಗಳ ಹೋಲಿಕೆ  

ಆದರೆ, ಕೆತ್ತಿದ ವಿಗ್ರಹಗಳಲ್ಲಿ ಭರವಸೆಯಿಡುವವರು : “ನೀವೇ ನಮ್ಮ ದೇವರು"ಗಳು ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು; ಅವಮಾನಕ್ಕೆ ಈಡಾಗುವರು ಹಿಂಜರಿದು.


ಮೂರ್ತಿಗಳನು ಮಾಡುವವರೆಲ್ಲರು ಈಡಾಗುವರು ನಾಚಿಕೆಗೆ ಮಾನಭಂಗಪಟ್ಟು ಒಟ್ಟಿಗೆ ಮುಳುಗುವರವರು ಅವಮಾನದೊಳಗೆ.


ನೀವು ಬಯಸಿದ ಎಲ್ಲಾ ಮರಗಳನ್ನು ಪೂಜಿಸಿದ್ದಕ್ಕಾಗಿ ಹೇಸುವಿರಿ: ಪವಿತ್ರ ವನಗಳನ್ನು ನಿರ್ಮಿಸಿದ್ದಕ್ಕಾಗಿ ನಾಚಿಕೆಪಡುವಿರಿ.


ನಾಚಲಿ ವ್ಯರ್ಥವಿಗ್ರಹಗಳನು ಪೂಜಿಸಿ ಹಿಗ್ಗುವವರು I ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು II


ಇದರ ಮುಂದೆ ಜನರು ತಿಳುವಳಿಕೆಯಿಲ್ಲದ ಪಶುಪ್ರಾಯರು ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು ಪ್ರತಿಯೊಬ್ಬ ಅಕ್ಕಸಾಲಿಗನು. ಪೊಳ್ಳು, ಶ್ವಾಸವಿಲ್ಲದವುಗಳು, ಅವನು ಎರಕಹೊಯ್ದ ಪುತ್ತಳಿಗಳು.


ಇದರ ಮುಂದೆ ತಿಳುವಳಿಕೆಯಿಲ್ಲದ ಪಶುಪ್ರಾಯರು ಜನರೆಲ್ಲರು. ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು ಪ್ರತಿಯೊಬ್ಬ ಅಕ್ಕಸಾಲಿಗನು. ಅವನು ಎರಕ ಹೊಯ್ದ ವಿಗ್ರಹಗಳು ಟೊಳ್ಳು, ಶ್ವಾಸವಿಲ್ಲದವುಗಳು.


ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು,” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಕೊಲ್ಲಿಸಿದನು.


ವಿಗ್ರಹಗಳನ್ನು ಕೆತ್ತುವವರೆಲ್ಲರು ನಿರರ್ಥಕರು; ಅವರ ಇಷ್ಟಬೊಂಬೆಗಳು ಏತಕ್ಕೂ ಬಾರವು; ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.


ಇಗೋ, ನನ್ನ ಭಕ್ತರು ಊಟಮಾಡುವರು, ನೀವಾದರೋ ಹಸಿದಿರುವಿರಿ. ನನ್ನ ಭಕ್ತರು ಪಾನಮಾಡುವರು, ನೀವಾದರೋ ದಾಹಗೊಳ್ಳುವಿರಿ. ನನ್ನ ಭಕ್ತರು ಉಲ್ಲಾಸಗೊಳ್ಳುವರು; ನೀವಾದರೋ ಲಜ್ಜೆಗೊಳ್ಳುವಿರಿ.


ಅಲ್ಲಿ ಮಾನವರ ಕೈಯಿಂದ ಮಾಡಲಾದ ಮರ ಮತ್ತು ಕಲ್ಲಿನ ದೇವರುಗಳನ್ನು ಪೂಜಿಸುವಿರಿ; ಅವುಗಳಿಂದ ನೋಡುವುದಕ್ಕಾಗಲಿ, ಕೇಳುವುದಕ್ಕಾಗಲಿ, ತಿನ್ನಲಿಕ್ಕಾಗಲಿ, ಮೂಸುವುದಕ್ಕಾಗಲಿ ಆಗದು.


ಈಗ ಎಫ್ರಯಿಮರ ಪಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ಬೆಳ್ಳಿಬಂಗಾರವನ್ನು ಕರಗಿಸಿ ಇಷ್ಟಬಂದಂತೆ ಬೊಂಬೆಗಳನ್ನು ಮಾಡಿಕೊಂಡಿದ್ದಾರೆ. ಅವೆಲ್ಲವು ಶಿಲ್ಪಿಗಳ ಕೈಕೆಲಸವೇ ಹೊರತು ಮತ್ತೇನು ಅಲ್ಲ. ಇಂಥ ವಿಗ್ರಹಗಳನ್ನು ಪೂಜೆಗಾಗಿ ಪ್ರತಿಷ್ಠಾಪನೆಮಾಡುತ್ತಾರೆ. ಬುದ್ಧಿಜೀವಿಗಳಾದ ಇವರು ಬಸವನಿಗೆ ಮುದ್ದಿಡುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು