Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:10 - ಕನ್ನಡ ಸತ್ಯವೇದವು C.L. Bible (BSI)

10 ದೇವತೆಯನ್ನು ರೂಪಿಸುವವರು ಹಾಗೂ ನಿರರ್ಥಕ ಬೊಂಬೆಗಳನ್ನು ಎರಕಹೊಯ್ಯುವವರು ನಿಷ್ಪ್ರಯೋಜಕರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ದೇವತೆಯನ್ನು ರೂಪಿಸುವವರೂ, ವ್ಯರ್ಥವಿಗ್ರಹವನ್ನು ಎರಕ ಹೊಯ್ಯುವವರೂ ಎಂಥವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ದೇವತೆಯನ್ನು ರೂಪಿಸುವವರೂ ವ್ಯರ್ಥವಿಗ್ರಹವನ್ನು ಎರಕ ಹೊಯ್ಯುವವರೂ ಎಂಥವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಈ ಸುಳ್ಳುದೇವರುಗಳನ್ನು ಮಾಡಿದವರ್ಯಾರು? ಇಂಥ ಉಪಯೋಗವಿಲ್ಲದ ವಿಗ್ರಹಗಳನ್ನು ಮಾಡಿದವರ್ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ದೇವರನ್ನು ರೂಪಿಸಿದವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಎಂಥವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:10
12 ತಿಳಿವುಗಳ ಹೋಲಿಕೆ  

ಸೌತೆ ತೋಟದ ಬೆದರುಗಂಬದಂತಿರುವ ಈ ಬೊಂಬೆಗಳು ಮಾತನಾಡಲಾರವು. ಅವನ್ನು ಹೊತ್ತುಕೊಂಡು ಹೋಗಬೇಕು, ಅವು ನಡೆಯಲಾರವು. ಅವುಗಳಿಗೆ ನೀವು ಅಂಜಬೇಕಾಗಿಲ್ಲ, ಅವು ಕೇಡುಮಾಡಲಾರವು; ಮೇಲುಮಾಡಲಿಕ್ಕೂ ಸಾಮರ್ಥ್ಯವಿಲ್ಲದಿರುವುವು.”


ಕೆತ್ತನೆಯ ವಿಗ್ರಹದಿಂದ ಪ್ರಯೋಜನ ಏನು? ಅದು ಕೇವಲ ಮಾನವನ ಕೃತಿ, ಸುಳ್ಳು ಕಣಿಗಾಗಿ ಇಟ್ಟುಕೊಂಡ ಎರಕದ ಗೊಂಬೆ. ಅದನ್ನು ನಿರ್ಮಿಸಿದಾತನಿಗೆ ಅದು ಯಾವ ಅಭಯವನ್ನು ತಾನೇ ತಂದೀತು? ಅದು ಬಾಯ್ದೆರೆಯಲಾಗದ ಮೂಕ ಬೊಂಬೆಯಷ್ಟೆ.


ಪೌಲ ಎಂಬವನು ಏನು ಮಾಡುತ್ತಿರುವನೆಂದು ನೀವು ನೋಡಿದ್ದೀರಿ ಹಾಗೂ ಕೇಳಿದ್ದೀರಿ; ಕೈಯಿಂದ ಮಾಡಿದ ಆಕೃತಿಗಳು ದೇವರೇ ಅಲ್ಲವೆಂದು ಇಲ್ಲಿ ಎಫೆಸದಲ್ಲೂ ಹೆಚ್ಚುಕಡಿಮೆ ಇಡೀ ಏಷ್ಯದಲ್ಲೂ ಪ್ರಚಾರಮಾಡುತ್ತಿದ್ದಾನೆ; ಮಾತ್ರವಲ್ಲ, ಅನೇಕ ಜನರನ್ನು ಮನವೊಲಿಸಿ ಮಾರ್ಪಡಿಸಿಬಿಟ್ಟಿದ್ದಾನೆ.


ವಿಗ್ರಹಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ: ವಿಗ್ರಹಗಳಿಗೆ ನಿಜವಾದ ಅಸ್ತಿತ್ವವಿಲ್ಲ. ದೇವರು ಒಬ್ಬರೇ ಹೊರತು ಬೇರೆ ದೇವರಿಲ್ಲ. ಇದು ನಮಗೆ ತಿಳಿದ ವಿಷಯ.


ಅದರಂತೆಯೇ ಅವರನ್ನು ಹಿಡಿದುತರಲಾಯಿತು. ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಹಾಗು ಅಬೇದ್‍ನೆಗೋ ಎಂಬವರೇ, ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ?


ರಾಜ ನೆಬೂಕದ್ನೆಚ್ಚರನು 27 ಮೀಟರ್ ಎತ್ತರದ 3 ಮೀಟರ್ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ ಬಾಬಿಲೋನ್ ಸಂಸ್ಥಾನದ ‘ದೂರಾ’ ಎಂಬ ಬಯಲಿನಲ್ಲಿ ನಿಲ್ಲಿಸಿದನು.


ನಿಶ್ಚಯವಾಗಿ ಆ ದೇವತೆಗಳೆಲ್ಲ ಕ್ಷುದ್ರರೇ‍ ಅವರ ಕಾರ್ಯಗಳೆಲ್ಲ ಶೂನ್ಯವೇ ಆ ಎರಕದ ಬೊಂಬೆಗಳೆಲ್ಲಾ ಬರಿ ಗಾಳಿಯೆ !


ಬಹಳವಾಗಿ ಆಲೋಚಿಸಿ, ಕಡೆಗೆ ಬಂಗಾರದ ಎರಡು ಹೋರಿಕರುಗಳ ಮೂರ್ತಿಗಳನ್ನು ಮಾಡಿಸಿ, ಇಸ್ರಯೇಲರಿಗೆ, “ನೀವು ಜಾತ್ರೆಗಾಗಿ ಜೆರುಸಲೇಮಿಗೆ ಹೋದದ್ದು ಇನ್ನು ಸಾಕು. ಇಗೋ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರುಗಳು ಇಲ್ಲಿರುತ್ತವೆ,” ಎಂದು ಹೇಳಿ


ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ I ಅವು ಮಾನವನ ಕೈ ಕೆಲಸಗಳು ಮಾತ್ರ II


ವಿಗ್ರಹವಾದರೋ ಎರಕ ಹೊಯ್ಯಲ್ಪಟ್ಟಿತು ಶಿಲ್ಪಿಯಿಂದ ಅದಕ್ಕೆ ಬಡಿದಿರುವ ಚಿನ್ನದ ಕವಚ ಅಕ್ಕಸಾಲಿಗನಿಂದ ಅದಕ್ಕೆ ತೊಡಿಸಿರುವ ಬೆಳ್ಳಿಸರಪಣಿ ಆ ವಾಜನಿಂದ.


“ಹೇ ಸರ್ವೇಶ್ವರಾ, ನನ್ನ ಶಕ್ತಿಯೇ, ನನ್ನ ಕೋಟೆಯೇ, ಆಪತ್ತು ಕಾಲದಲ್ಲಿ ನನ್ನ ಆಶ್ರಯವೇ, ಜಗದ ಕಟ್ಟಕಡೆಯಿಂದ ಜನಾಂಗಗಳು ನಿಮ್ಮ ಸಮ್ಮುಖಕ್ಕೆ ಬರುವುವು. ‘ನಮ್ಮ ಪೂರ್ವಜರು ಪಾರಂಪರ್ಯವಾಗಿ ಪಡೆದವುಗಳು ನಿಶ್ಚಯವಾಗಿ ಅಬದ್ಧವಾದವುಗಳು, ಮಾಯರೂಪವಾದವುಗಳು ಹಾಗು ನಿಷ್ಪ್ರಯೋಜನವಾದವುಗಳು.


“ಅಳಿದುಳಿದ ಅನ್ಯಜನರೇ, ನೆರೆದು ಬನ್ನಿ, ಒಟ್ಟಿಗೆ ನನ್ನ ಬಳಿಗೆ ಬನ್ನಿ. ತಮ್ಮ ಮರದ ಬೊಂಬೆಯನು ಹೊತ್ತು ತಿರುಗುವವರು ರಕ್ಷಿಸಲಾಗದ ದೇವತೆಗೆ ಮೊರೆಯಿಡುವ ಬುದ್ಧಿಹೀನರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು