Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 43:1 - ಕನ್ನಡ ಸತ್ಯವೇದವು C.L. Bible (BSI)

1 ಈಗಲಾದರೋ ಯಕೋಬ ವಂಶವೇ, ಇಸ್ರಯೇಲ್ ಸಂತಾನವೇ ಕೇಳು : ನಿನ್ನನ್ನು ಸೃಷ್ಟಿಸಿದ, ರೂಪಿಸಿದ ಸರ್ವೇಶ್ವರನ ನುಡಿಯನ್ನು ಕೇಳು; “ಭಯಪಡಬೇಡ, ನಿನ್ನನ್ನು ರಕ್ಷಿಸಿದಾತ ನಾನಲ್ಲವೆ? ನಿನ್ನನ್ನು ಹೆಸರು ಹಿಡಿದು ಕರೆದಾತ ನಾನಲ್ಲವೆ? ನೀನು ನನ್ನವನೇ ಅಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಈಗಲಾದರೋ, ಯಾಕೋಬನ ವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ ರೂಪಿಸಿದವನಾದ ಯೆಹೋವನು ಹೀಗೆನ್ನುತ್ತಾನೆ, “ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಈಗಲಾದರೋ, ಯಾಕೋಬವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ ರೂಪಿಸಿದವನಾದ ಯೆಹೋವನು ಹೀಗನ್ನುತ್ತಾನೆ - ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರುಹಿಡಿದು ಕರೆದೆನಲ್ಲಾ; ನೀನು ನನ್ನವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯಾಕೋಬೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಇಸ್ರೇಲೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಈಗ ಆತನು ಹೇಳುವುದೇನೆಂದರೆ: “ಭಯಪಡಬೇಡ. ನಾನೇ ನಿನ್ನನ್ನು ರಕ್ಷಿಸಿದ್ದೇನೆ. ನಾನು ನಿನಗೆ ಹೆಸರಿಟ್ಟೆನು. ನೀನು ನನ್ನವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಈಗಲಾದರೋ ಯಾಕೋಬನ ವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ, ರೂಪಿಸಿದ ಯೆಹೋವ ದೇವರು ಹೇಳುವುದೇನೆಂದರೆ: “ಹೆದರಬೇಡ, ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 43:1
49 ತಿಳಿವುಗಳ ಹೋಲಿಕೆ  

ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು I ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು I ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು II


ಹಾಕುವೆನಾ ಮೂರನೇ ಭಾಗದವರನ್ನು ಬೆಂಕಿಗೆ, ಶೋಧಿಸುವೆನು ಅವರನ್ನು ಬೆಳ್ಳಿಯ ಹಾಗೆ. ಶುದ್ಧೀಕರಿಸುವೆನು ಬಂಗಾರದ ಹಾಗೆ. ಕಿವಿಗೊಡುವೆ ನನ್ನ ಹೆಸರೆತ್ತಿ ಪ್ರಾರ್ಥಿಸುವವರಿಗೆ. ಹೇಳುವೆನು, ‘ಇವರೇ ನನ್ನ ಪ್ರಜೆಯೆಂದು. ಹೇಳುವರವರು ‘ಸರ್ವೇಶ್ವರನೇ ನಮ್ಮ ದೇವ’ ಎಂದು.


ಕರೆತರುವೆ ಈ ಪರಿ ನನ್ನ ನಾಮಧಾರಿಗಳೆಲ್ಲರನು ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿದವರನು.


ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟನು.


ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: :ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅದರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ ಸಕಲ ದೇಶ, ಭಾಷೆ, ಕುಲಗೋತ್ರಗಳಿಂದ ಕೊಂಡುಕೊಂಡಿರುವೆ ಮಾನವರನು ನಿನ್ನ ರಕ್ತದಿಂದ.


ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದ್ದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ.


ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನು.”


ಸರ್ವೇಶ್ವರ ಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ.


ಆದರೆ ದೇವರು ಹಾಕಿದಂಥ ಸುಸ್ಥಿರವಾದ ಅಸ್ತಿವಾರವನ್ನು ಯಾರಿಂದಲೂ ಕದಲಿಸಲಾಗದು. ಅದರಲ್ಲಿ “ತನ್ನವರು ಯಾರು ಎಂದು ಪ್ರಭು ಅರಿತಿದ್ದಾರೆ; ಮತ್ತು ತಾನು ಪ್ರಭುವಿನವನೆಂದು ಹೇಳಿಕೊಳ್ಳುವವರೆಲ್ಲರೂ ದುರ್ಮಾರ್ಗದಿಂದ ದೂರವಿರಲಿ,” ಎಂದು ಲಿಖಿತವಾಗಿದೆ.


ನಿನ್ನನ್ನು ಸೃಷ್ಟಿಸಿದ ಸರ್ವೇಶ್ವರ ನಾನೆ ತಾಯ ಗರ್ಭದಿಂದ ನಿನ್ನನ್ನು ರೂಪಿಸಿದವನು ನಾನೆ ಅಂದಿನಿಂದ ನಿನಗೆ ನೆರವಾಗುತ್ತಾ ಬಂದವನು ನಾನೆ. ಭಯಪಡಬೇಡ, ನನ್ನ ದಾಸ ಯಕೋಬನೇ, ಅಂಜಬೇಡ, ನಾನು ಆರಿಸಿಕೊಂಡ ಯೆಶುರೂನೇ.


ಸರ್ವೇಶ್ವರ ಇಂತೆನ್ನುತ್ತಾರೆ : “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ.


“ನಾನು ಪುನಃ ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದೆ; ಆಗ ನಾನು ನನ್ನ ಹೊದಿಕೆಯ ಸೆರಗನ್ನು ನಿನಗೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡೆ. ಆದ್ದರಿಂದ ನೀನು ನನ್ನವಳಾದೆ; ಇದು ಸರ್ವೇಶ್ವರನಾದ ದೇವರ ನುಡಿ.


ಅವರನ್ನು ಬಿಡಿಸಬಲ್ಲವನು ಬಲಿಷ್ಠನು. ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದೇ ಆತನ ನಾಮಧೇಯ. ಆತನೇ ಅವರ ವ್ಯಾಜ್ಯವನ್ನು ಜಯಿಸಿ, ನಾಡಿಗೆ ಶಾಂತಿಯನ್ನು ತಂದು, ಬಾಬಿಲೋನಿಯದವರಿಗೆ ಕಳವಳವನ್ನುಂಟುಮಾಡುವನು.”


ಅದಕ್ಕೆ ಸರ್ವೇಶ್ವರ, “ನಿನ್ನ ಕೋರಿಕೆಯಂತೆ ಮಾಡುವೆನು. ಏಕೆಂದರೆ ನೀನು ನನ್ನ ಅನುಗ್ರಹಕ್ಕೆ ಪಾತ್ರನು; ನಿನ್ನನ್ನು ಹೆಸರಿಡಿದು ಗುರುತಿಸಿದ್ದೇನೆ,” ಎಂದು ಮೋಶೆಗೆ ಹೇಳಿದರು.


ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇವರು ನನ್ನ ಜನರು; ನಾನು ಕಾರ್ಯತತ್ಪರನಾಗುವ ದಿನದಂದು ಅವರು ನನಗೆ ಸ್ವಕೀಯಜನರಾಗಿರುವರು. ತಂದೆಯೊಬ್ಬನು ತನಗೆ ಸೇವೆಮಾಡುವ ಮಗನನ್ನು ಕಾಪಾಡುವಂತೆ ನಾನು ಅವರನ್ನು ಕಾಪಾಡುವೆನು.


ಆದುದರಿಂದ ಗೆಳೆಯರೇ, ಧೈರ್ಯದಿಂದಿರಿ. ನನಗೆ ದೇವರಲ್ಲಿ ವಿಶ್ವಾಸವಿದೆ; ನನಗೆ ತಿಳಿಸಿದಂತೆಯೇ ಎಲ್ಲವೂ ನಡೆದೇ ತೀರುವುದು.


ಸರ್ವೇಶ್ವರನಾದ ನಾನು ದೂರದಿಂದ ಅದಕ್ಕೆ ದರ್ಶನಕೊಟ್ಟು: ‘ನಾನು ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದ. ಈ ಕಾರಣದಿಂದ ನಿನ್ನನ್ನು ಆಕರ್ಷಿಸಿಕೊಂಡಿದ್ದೇನೆ ಅಚಲ ಪ್ರೇಮದಿಂದ.


ಅವನು ಯಕೋಬನಿಗೆ, “ಇನ್ನು ಮೇಲೆ ನೀನು ಯಕೋಬ ಎನಿಸಿಕೊಳ್ಳುವುದಿಲ್ಲ; ದೇವರ ಸಂಗಡ ಹಾಗು ಮನುಷ್ಯರ ಸಂಗಡ ಹೋರಾಡಿ ಗೆದ್ದವನಾದ್ದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರುಂಟಾಗುವುದು,” ಎಂದು ಹೇಳಿದನು.


ಮುಂದಣ ಸಂತತಿಗಿದು ಶಾಸನವಾಗಿರಲಿ I ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ II


ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ, ಸ್ವಕೀಯ ಪ್ರಜೆಯಾದರು ಆ ಯಕೋಬ ವಂಶಜರು ಆತನಿಗೆ.


ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೇ.


“ಸರ್ವೇಶ್ವರನಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರೆ ಅಲ್ಲವೆ?


‘ಪವಿತ್ರ ಪ್ರಜೆ’ ಎನಿಸಿಕೊಳ್ಳುವುದು ನಿಮ್ಮ ಜನತೆ ‘ಸರ್ವೇಶ್ವರ ಸ್ವಾಮಿಯೇ ಉದ್ಧರಿಸಿದ ಜನತೆ’. ನಿನ್ನ ಹೆಸರೋ, ‘ಪ್ರಾಪ್ತ ನಗರಿ’ ಪತಿ ವರಿಸಿ ಕೈ ಬಿಡದ ಪುರಿ.


ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರ ಸ್ವಾಮಿಯೆ ನುಡಿದಿಹನು : “ನಿನಗೆ ಕ್ಷೇಮ‍ಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರ ಸ್ವಾಮಿ ದೇವರು ನಾನು.


ಅಬ್ರಹಾಮ, ಇಸಾಕ, ಯಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.”


ನೀ ಬಿಡುಗಡೆ ಮಾಡಿದ ಜನರನ್ನು ನಡೆಸಿಕೊಂಡೆ ಪ್ರೀತಿಯಿಂದ ನಿನ್ನ ಶ್ರೀನಿವಾಸದ ತನಕ ಅವರನ್ನು ಬರಮಾಡಿದೆ ಶಕ್ತಿಯಿಂದ.


ನೀವೇ ನಮ್ಮ ತಂದೆ. ಅಬ್ರಹಾಮನು ನಮ್ಮನ್ನು ಅರಿಯದೆ ಇರಬಹುದು, ಇಸ್ರಯೇಲನು ನಮ್ಮನ್ನು ಗುರುತಿಸದೆ ಇರಬಹುದು, ಆದರೆ ಸರ್ವೇಶ್ವರಾ, ನೀವೇ ನಮ್ಮ ತಂದೆ, ನಮ್ಮ ಉದ್ಧಾರಕ; ಆದಿಯಿಂದ ಇರಲು ಅದುವೇ ನಿಮ್ಮ ನಾಮಾಂಕಿತ.


ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಗಾಳಿ ತೀವ್ರವಾಗಿತ್ತು. ಕಟ್ಟಕಡೆಗೆ ನಾವು ಬದುಕುವ ಆಶೆಯನ್ನೇ ತೊರೆಯಬೇಕಾಯಿತು.


ಭಯಭೀತಿ ಅವರನ್ನು ಆವರಿಸಿದೆ ನಿನ್ನ ಭುಜಬಲ ನೋಡಿ ಸ್ತಬ್ದರಾಗಿಹರವರು ಕಲ್ಲಿನಂತೆ.


ಮರಗಳ ರೆಂಬೆಕೊಂಬೆಗಳು ಒಣಗಿ ಮುರಿದುಹೋಗಿವೆ. ಹೆಂಗಸರ ಕೈಗೆ ಒಲೆಪಾಲಾಗುವ ಸೌದೆಯಾಗಿವೆ. ಈ ಪ್ರಜೆಗಳು ಮಂದಮತಿಗಳೇ ಸರಿ. ಈ ಕಾರಣ, ಸೃಷ್ಟಿಕರ್ತನು ಇವರನ್ನು ಕರುಣಿಸನು. ನಿರ್ಮಿಸಿದಾತನು ಇವರಿಗೆ ದಯೆ ತೋರಿಸನು.


ಭಯಪಡಬೇಡ, ನಾನಿರುವೆ ನಿನ್ನ ಸಂಗಡ ಕರೆತರುವೆ ನಿನ್ನ ಸಂತತಿಯನ್ನು ಮೂಡಣದಿಂದ ಒಟ್ಟುಗೂಡಿಸುವೆ ನಿನ್ನವರನ್ನು ಪಡುವಣದಿಂದ.


ಹೊರಡಿರಿ ಬಾಬಿಲೋನ್ ನಗರದಿಂದ, ಓಡಿರಿ ಕಸ್ದೀಯರ ಕಡೆಯಿಂದ ಪ್ರಚುರಪಡಿಸಿರಿ ಹರ್ಷಧ್ವನಿಯಿಂದ, ಪ್ರಕಟಿಸಿರಿ ಭೂಮಿಯ ಕಟ್ಟಕಡೆಯ ತನಕ, ಈ ಪರಿ ತಿಳಿಸಿರಿ : “ಸರ್ವೇಶ್ವರ, ತಮ್ಮ ದಾಸ ಯಕೋಬನ ಉದ್ಧಾರಕ".


ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ, ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ, ಬಿಡುಗಡೆ ಮಾಡಿರುವನು ಸರ್ವೇಶ್ವರ ಜೆರುಸಲೇಮನು ತಂದಿರುವನು ತನ್ನ ಜನರಿಗೆ ಸಮಾಧಾನವನು.


ಆ ಜನರ ಕಷ್ಟದುಃಖಗಳಲ್ಲಿ ಸಂರಕ್ಷಿಸಿದರು. ದಯೆಯಿಂದಲೂ ಪ್ರೀತಿಯಿಂದಲೂ ಅವರಿಗೆ ಬಿಡುಗಡೆ ನೀಡಿದರು. ಪುರಾತನ ಕಾಲದಲ್ಲೆಲ್ಲಾ ಅವರನ್ನು ಎತ್ತಿ ಹೊತ್ತು ಆದರಿಸಿದರು.


ಬಳಿಕ ಆ ವ್ಯಕ್ತಿ ನನಗೆ, “ಅತಿಪ್ರಿಯನೇ, ಭಯಪಡಬೇಡ. ನಿನಗೆ ಶಾಂತಿಸಮಾಧಾನವಿರಲಿ! ಧೈರ್ಯತಂದುಕೊ! ಧೈರ್ಯತಂದುಕೊ!” ಎಂದು ಹೇಳಿದ. ಅವನ ಈ ಮಾತನ್ನು ಕೇಳಿದ ಕೂಡಲೆ ನಾನು ಧೈರ್ಯದಿಂದ, “ಎನ್ನೊಡೆಯಾ, ಮಾತಾಡು. ನನಗೆ ಧೈರ್ಯತುಂಬಿರುವೆ,” ಎಂದು ಅರಿಕೆಮಾಡಿದೆ.


ದುರಾಚಾರಿಗಳೇ, ಅವಿವೇಕಿಗಳೇ, ಸರ್ವೇಶ್ವರನ ಬಗ್ಗೆ ಹೀಗೆ ವರ್ತಿಸಬಹುದೇ? ಆತ ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೆ? ನಿಮ್ಮನ್ನೊಂದು ರಾಷ್ಟ್ರವಾಗಿ ಸ್ಥಾಪಿಸಿದವನಲ್ಲವೆ?


“ತೃಪ್ತಿಯಾಗಿ ತಿಂದನು ಯಕೋಬನು, ಕೊಬ್ಬಿಹೋದನು ಆ ಯೆಶೂರನು; ತೊರೆದುಬಿಟ್ಟನು ತನ್ನ ಪೊರೆಬಂಡೆಯನು ಮರೆತುಬಿಟ್ಟನು ತನ್ನ ಸೃಷ್ಟಿಕರ್ತನನು.


ಸರ್ವೇಶ್ವರ ಇಸ್ರಯೇಲಿನ ಪರಮಪಾವನ ಸ್ವಾಮಿ, ಅದರ ಸೃಷ್ಟಿಕರ್ತ. ಆ ಸರ್ವೇಶ್ವರನ ನುಡಿಯಿದು : “ನನ್ನ ಮಕ್ಕಳ ಬಗ್ಗೆ ನೀ ಕೇಳುವುದೆಂತು? ನನ್ನ ಕೈಯ ಕೃತಿಗಳ ಬಗ್ಗೆ ನೀ ವಿಧಿಸುವುದೆಂತು?


ಮಾಡುವೆನು ನಿನ್ನ ಹಿಂಸಕರು ಸ್ವಮಾಂಸವನ್ನು ತಿನ್ನುವಂತೆ ಅಮಲೇರುವರು ಸ್ವಂತ ರಕ್ತವನ್ನು ಕುಡಿದು ದ್ರಾಕ್ಷಾರಸದಂತೆ. ಅರಿವರು ನರಮಾನವರೆಲ್ಲರು ಇಂತು : ನಾನೇ ಸರ್ವೇಶ್ವರ, ನಿನ್ನ ರಕ್ಷಕ, ನಿನ್ನ ನಿನ್ನ ವಿಮೋಚಕನೆಂದು; ನಾನೇ ಯಕೋಬ ವಂಶದ ಬಲಾಢ್ಯ ದೇವನೆಂದು.


ಆಕಾಶವನು ಹರಡಿ ಭೂಮಿಯನು ಸ್ಥಾಪಿಸಿದಾ ನಿನ್ನ ಸೃಷ್ಟಿಕರ್ತ ಸರ್ವೇಶ್ವರನನು ಮರೆತುಬಿಟ್ಟೆಯಾ? ನಾಶಮಾಡಲು ಹವಣಿಸುವ ಹಿಂಸಕನ ಕ್ರೋಧಕೆ ನೀ ಎಡೆಬಿಡದೆ ದಿನವೆಲ್ಲ ಅಂಜುತ್ತಿರಬೇಕೆ? ಆ ಹಿಂಸಕನ ಕ್ರೋಧವು ಈಗ ಹೋದುದೆಲ್ಲಿಗೆ?


ನಿನ್ನನ್ನು ಕೂಗಿಕೊಂಡಾಗ ಸಮೀಪಕ್ಕೆ ಬಂದೆ “ಭಯಪಡಬೇಡ” ಎಂದು ಅಭಯನೀಡಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು