ಯೆಶಾಯ 41:26 - ಕನ್ನಡ ಸತ್ಯವೇದವು C.L. Bible (BSI)26 ಈ ಘಟನೆಯನ್ನು ಅರುಹಿದವನಾರು ಅದು ನೆರವೇರುವ ಮುಂದೆ? ಇದನ್ನು ಮುನ್ನ ತಿಳಿಸಿದವನಾರು ನಮಗೆ ಗೊತ್ತಾಗುವಂತೆ? ತಿಳಿಸಿದ್ದರೆ ಹೇಳುತ್ತಿದ್ದೆವು ಅವನು ಸತ್ಯವಂತನೆಂದೆ. ಆದರೆ ಇದನ್ನು ತಿಳಿಸಿದವನಿಲ್ಲ ಮುನ್ನ ತಿಳಿಸಬಲ್ಲವನಾರೂ ಇಲ್ಲ ನಿಮ್ಮಿಂದ ಮಾತೊಂದನ್ನು ಕೇಳಿದವನಾರೂ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಕಾರ್ಯವು ನಡೆಯುವುದಕ್ಕೆ ಮೊದಲು ಇವರಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಸಮಯಕ್ಕೆ ಮೊದಲೇ “ಅವನು ಸತ್ಯವಂತನು” ಎಂದು ಯಾರು ಮುಂತಿಳಿಸಿದ್ದಾರೆ? ಯಾರೂ ಏನನ್ನೂ ತಿಳಿಸಬಲ್ಲವರಲ್ಲ, ಏನನ್ನೂ ಹೇಳತಕ್ಕವರಲ್ಲ, ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಕಾರ್ಯವು ನಡೆಯುವದಕ್ಕೆ ಮುಂಚೆ [ಇವರಲ್ಲಿ] ಯಾವನು ಅದನ್ನು ಅರುಹಿದ್ದಾನೆ? ಅರುಹಿದ್ದರೆ [ಅವನು ನಿಜ ದೇವರೆಂದು] ನಮಗೆ ಗೊತ್ತಾಗುವದು; ಯಾವನು ಮುಂತಿಳಿಸಿದ್ದಾನೆ? ತಿಳಿಸಿದ್ದರೆ ಅವನನ್ನು ಸತ್ಯವಂತನೆನ್ನುವೆವು. ಯಾರೂ ಏನನ್ನೂ ತಿಳಿಸಬಲ್ಲವರಲ್ಲ, ಏನನ್ನೂ ಹೇಳತಕ್ಕವರಲ್ಲ, ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 “ಇವುಗಳು ಸಂಭವಿಸುವ ಮೊದಲೇ ಇವುಗಳನ್ನು ತಿಳಿಸಿದಾತನನ್ನೇ ದೇವರೆಂದು ಕರೆಯಬೇಕು. ನಿಮ್ಮ ವಿಗ್ರಹಗಳಲ್ಲಿ ಯಾವದಾದರೂ ನಮಗೆ ಇದನ್ನು ತಿಳಿಸಿತೋ? ಯಾವ ವಿಗ್ರಹವೂ ನಮಗೆ ಇವುಗಳ ವಿಷಯದಲ್ಲಿ ತಿಳಿಸಲಿಲ್ಲ. ಆ ವಿಗ್ರಹಗಳು ಒಂದು ಮಾತನ್ನಾದರೂ ಹೇಳಲಿಲ್ಲ; ಮತ್ತು ನೀವು ಹೇಳಿದ್ದನ್ನು ಆ ಸುಳ್ಳುದೇವರುಗಳು ಕೇಳಿಸಿಕೊಳ್ಳುವದೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ, ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಹೌದು, ಯಾರೂ ತೋರಿಸುವವನಿಲ್ಲ, ತಿಳಿಸುವವನು ಒಬ್ಬನೂ ಇಲ್ಲ. ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ. ಅಧ್ಯಾಯವನ್ನು ನೋಡಿ |