ಯೆಶಾಯ 41:25 - ಕನ್ನಡ ಸತ್ಯವೇದವು C.L. Bible (BSI)25 ಹುರಿದುಂಬಿಸಿ ಕರೆತಂದಿರುವೆನು ಒಬ್ಬನನ್ನು ಉತ್ತರದಿಂದ ನನ್ನ ನಾಮವನ್ನು ಪ್ರಚುರಪಡಿಸಲು ಬಂದಿಹನಾತ ಪೂರ್ವದಿಂದ ಕುಂಬಾರನು ಜೇಡಿಮಣ್ಣನ್ನು ತುಳಿಯುವಂತೆ ತುಳಿಯುವನಾತ ರಾಜರನ್ನು ಮಣ್ಣಂತೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ನಾನು ಉತ್ತರ ದಿಕ್ಕಿನಿಂದ ಒಬ್ಬನನ್ನು ಎಬ್ಬಿಸಿ ಕರೆದು ತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿನಿಂದ ಬಂದಿದ್ದಾನೆ. ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಅವರ ಮೇಲೆ ಬಿದ್ದು ಕುಂಬಾರನು ಜೇಡಿಮಣ್ಣನ್ನು ತುಳಿಯುವ ಹಾಗೆ ತುಳಿಯುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ನಾನು ಬಡಗಲಿಂದ ಒಬ್ಬನನ್ನು ಎಬ್ಬಿಸಿ ಕರತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿಂದ ಬಂದಿದ್ದಾನೆ; ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಮೇಲೆ ಬಿದ್ದು ಕುಂಬಾರನು ಜೇಡಿಯನ್ನು ತುಳಿಯುವ ಹಾಗೆ ತುಳಿಯುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 “ಉತ್ತರದಿಕ್ಕಿನಲ್ಲಿರುವ ಒಬ್ಬ ಮನುಷ್ಯನನ್ನು ನಾನು ಎಚ್ಚರಪಡಿಸಿದೆನು. ಅವನು ಪೂರ್ವದಿಕ್ಕಿನಿಂದ ಬರುವನು. ನನ್ನ ನಾಮವನ್ನು ಅವನು ಆರಾಧಿಸುವನು. ಕುಂಬಾರನು ಜೇಡಿಮಣ್ಣನ್ನು ತುಳಿದು ಹದಗೊಳಿಸುವಂತೆ ಅವನು ಅರಸರುಗಳ ಮೇಲೆ ತುಳಿದಾಡುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 “ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇ. ಸೂರ್ಯೋದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸುವನು. ಅವನು ಜೇಡಿ ಮಣ್ಣಿನಂತೆಯೂ, ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಅವನು ಬರುವನು. ಅಧ್ಯಾಯವನ್ನು ನೋಡಿ |