Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 41:22 - ಕನ್ನಡ ಸತ್ಯವೇದವು C.L. Bible (BSI)

22 ಬನ್ನಿರಿ ಮುಂದಕ್ಕೆ ತಿಳಿಸಿ ಭವಿಷ್ಯತ್ತನು ನಮಗೆ. ವಿವರಿಸಿ ಗತಿಸಿದ ಘಟನೆಗಳು ಏನೇನೆಂದು; ಗ್ರಹಿಸುವೆವು ಅವುಗಳ ಪರಿಣಾಮವನ್ನು ಮನಸ್ಸಿಗೆ ತಂದು, ಇಲ್ಲವಾದರೆ ತಿಳಿಸಿ ನಮಗೆ ಸಂಭವಿಸಲಿರುವುದೇನೆಂದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ತಮ್ಮ ನ್ಯಾಯಗಳನ್ನು ಮುಂದಕ್ಕೆ ತರಲಿ, ಭವಿಷ್ಯತ್ತನ್ನು ನಮಗೆ ತಿಳಿಸಲಿ; ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಇಲ್ಲವೇ ಭವಿಷ್ಯತ್ತನ್ನು ತಿಳಿಸಿದರೆ ಗ್ರಹಿಸುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ತಮ್ಮ ನ್ಯಾಯಗಳನ್ನು ಮುಂದಕ್ಕೆ ತರಲಿ, ಭವಿಷ್ಯತ್ತನ್ನು ನಮಗೆ ತಿಳಿಸಲಿ; ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಗ್ರಹಿಸುವೆವು; ಅಥವಾ ಭವಿಷ್ಯತ್ತುಗಳನ್ನು ಅರುಹಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನಿಮ್ಮ ವಿಗ್ರಹಗಳು ನಮ್ಮ ಬಳಿಗೆ ಬಂದು ನಡೆಯುತ್ತಿರುವುದನ್ನು ತಿಳಿಸಲಿ. ಪ್ರಾರಂಭದಲ್ಲಿ ನಡೆದಿದ್ದೇನು? ಮುಂದೆ ನಡೆಯಲಿರುವುದೇನು? ನಮಗೆ ತಿಳಿಸಿರಿ. ನಾವು ಸೂಕ್ಷ್ಮವಾಗಿ ಕೇಳಿ ಭವಿಷ್ಯವನ್ನು ತಿಳಿದುಕೊಳ್ಳುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 “ವಿಗ್ರಹಗಳೇ, ಮುಂದೆ ಏನಾಗಲಿದೆ ಎಂದು ನಮಗೆ ಹೇಳಿ. ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು, ಅವುಗಳ ಪರಿಣಾಮವನ್ನು ಇಲ್ಲವೆ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 41:22
11 ತಿಳಿವುಗಳ ಹೋಲಿಕೆ  

ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ.


ಒಟ್ಟುಗೂಡಿ ಕೇಳಿ ನೀವೆಲ್ಲರು ಇದನ್ನು : ಆ ದೇವರುಗಳಲ್ಲಿ ಮುಂತಿಳಿಸಿದವನಾರು ಈ ಸಂಗತಿಯನು? ನನ್ನ ಪ್ರೀತಿಗೆ ಪಾತ್ರನಾದ ವ್ಯಕ್ತಿ ಸೈರಸನು ಕಸ್ದೀಯರ ಮೇಲೆ ಕೈಯೆತ್ತುವನು, ಈಡೇರಿಸುವನು ಬಾಬೆಲಿನಲ್ಲಿ ನನ್ನ ಇಷ್ಟಾರ್ಥವನು.


ಆರಂಭದಲ್ಲಿಯೇ ಅಂತ್ಯವನು ತಿಳಿಸಿದವನು ನಾನು ಭೂತಕಾಲದಲ್ಲಿಯೆ ಭವಿಷ್ಯವನು ಅರುಹಿದವನು ನಾನು. ಸ್ಥಿರವಿರುವುದು ನನ್ನ ಸಂಕಲ್ಪ, ನೆರವೇರುವುದು ನನ್ನ ಇಷ್ಟಾರ್ಥ


ನನಗೆ ಸಮಾನರು ಯಾರು? ರುಜುಪಡಿಸಲಿ, ನನ್ನ ಎದುರಿಗೆ ಬಂದು ವಾದಿಸಿ ಸ್ಥಿರಪಡಿಸಲಿ. ನರ ಸೃಷ್ಟಿಯಾದಂದಿನಿಂದ ನಡೆದುದೆಲ್ಲವನು ತಿಳಿಸಲಿ ಮುಂದಿನವುಗಳನು, ಭವಿಷ್ಯತ್ತುಗಳನು, ಈಗ ಊಹಿಸಿ ಹೇಳಲಿ.


ಅವರು, ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು.


ಅದು ಈಡೇರುವಾಗ ‘ಇರುವಾತನು ನಾನೇ’ ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ.


ಮುಂತಿಳಿಸಿದ ಸಂಗತಿಗಳಿದೋ ಈಡೇರಿವೆ ಹೊಸ ಸಂಗತಿಗಳನಿದೋ ಪ್ರಕಟಿಸುವೆ ಅವು ತಲೆದೋರುವುದಕ್ಕೆ ಮುಂಚೆಯೇ ನಿಮಗೆ ತಿಳಿಸುವೆ.”


ಈ ಘಟನೆಯನ್ನು ಅರುಹಿದವನಾರು ಅದು ನೆರವೇರುವ ಮುಂದೆ? ಇದನ್ನು ಮುನ್ನ ತಿಳಿಸಿದವನಾರು ನಮಗೆ ಗೊತ್ತಾಗುವಂತೆ? ತಿಳಿಸಿದ್ದರೆ ಹೇಳುತ್ತಿದ್ದೆವು ಅವನು ಸತ್ಯವಂತನೆಂದೆ. ಆದರೆ ಇದನ್ನು ತಿಳಿಸಿದವನಿಲ್ಲ ಮುನ್ನ ತಿಳಿಸಬಲ್ಲವನಾರೂ ಇಲ್ಲ ನಿಮ್ಮಿಂದ ಮಾತೊಂದನ್ನು ಕೇಳಿದವನಾರೂ ಇಲ್ಲ.


“ಕೇಳು, ಎಲೈ ಯಕೋಬ ಮನೆತನವೇ, ನಿನಗೆ ತಿಳಿಸಿದೆ ಈವರೆಗೆ ನಡೆದ ಸಂಗತಿಗಳನು ಪೂರ್ವದಲೇ. ಹೌದು ಪ್ರಕಟಿಸಿದೆ ನಾನು, ಹೊರಡಿಸಿದೆ ನನ್ನ ಬಾಯಿಂದಲೇ ಕೈಗೂಡುವಂತೆ ಮಾಡಿದೆ ನಾನವುಗಳನು ಕೂಡಲೆ.


“ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು