Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 41:19 - ಕನ್ನಡ ಸತ್ಯವೇದವು C.L. Bible (BSI)

19 ನೆಡುವೆನು ಅಡವಿಯಲ್ಲಿ ದೇವದಾರು ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಮರುಭೂಮಿಯಲ್ಲಿ ದೇವದಾರು, ಜಾಲಿಮರ, ಸುಗಂಧ ಒಲೀವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ದೇವದಾರು ಕಸ್ತೂರಿಜಾಲಿ ಸುಗಂಧ ಒಲೀವ ಮರಗಳನ್ನು ಅಡವಿಯಲ್ಲಿ ನೆಡುವೆನು, ತುರಾಯಿ ತಪಸಿ ತಿಲಕ ವೃಕ್ಷಗಳನ್ನು ಅರಣ್ಯದಲ್ಲಿ ತೋಪಾಗಿ ಬೆಳೆಯಿಸುವೆನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಮರುಭೂಮಿಯ ಮೇಲೆ ಮರಗಳು ಬೆಳೆಯುವವು. ಅಲ್ಲಿ ದೇವದಾರು, ಆಲೀವ್, ಕಸ್ತೂರಿಜಾಲಿ, ತುರಾಯಿ, ತಪಸಿ ಮತ್ತು ತಿಲಕ ವೃಕ್ಷಗಳು ಇರುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಮರುಭೂಮಿಯಲ್ಲಿ ದೇವದಾರು, ಜಾಲೀಮರ, ಸುಗಂಧ, ಓಲಿವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 41:19
16 ತಿಳಿವುಗಳ ಹೋಲಿಕೆ  

ಬೆಳೆಯುವುದು ಮುಳ್ಳಿಗೆ ಬದಲಾಗಿ ದೇವದಾರು, ದತ್ತೂರಿಗೆ ಪ್ರತಿಯಾಗಿ ಸುಗಂಧದ ಮರವು. ಉಳಿದಿರುತ್ತದೆ ಆ ವನವು ಶಾಶ್ವತ ಗುರುತಾಗಿ ಸರ್ವೇಶ್ವರ ಸ್ವಾಮಿಯ ನಾಮಸ್ಮರಣೆಗಾಗಿ.”


ಆನಂದಿಸಲಿ ಅರಣ್ಯವೂ ಮರುಭೂಮಿಯೂ ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು.


ಬರುವುದು ನಿನ್ನಲ್ಲಿಗೆ ಲೆಬನೋನಿನ ವೈಭವವು ಅದರ ತುರಾಯಿ, ಅಗಸೆ, ತಿಲಕ ಈ ಮರಗಳಾವುವು. ಅಲಂಕರಿಸುವುವು ನನ್ನ ಪವಿತ್ರಾಲಯವನು ಮಹಿಮೆಪಡಿಸುವೆನು ನನ್ನ ಪಾದಪೀಠದ ಮಂದಿರವನು.


ಬುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.


ಸದ್ಧರ್ಮಿಗಳಾಗಿರುವರು ನಿನ್ನ ಜನರೆಲ್ಲರು ಆಗುವರವರು ನಾಡಿಗೆ ಶಾಶ್ವತ ಬಾಧ್ಯಸ್ಥರು ನನ್ನ ಮಹಿಮೆಗಾಗಿ ನಾ ನೆಟ್ಟ ಸಸಿಗಳವರು ನನ್ನ ಕೈಗಳು ಸೃಷ್ಟಿಸಿದ ಪ್ರಜೆಗಳವರು.


ಮುಂಬರುವ ಕಾಲದಲಿ ಬೇರೂರುವುದು ಯಕೋಬ ಸಂತಾನ. ಚಿಗುರಿ ಹೂ ಬಿಡುವುದು ಇಸ್ರಯೇಲ್ ಮನೆತನ, ಆ ವೃಕ್ಷಫಲದಿಂದ ತುಂಬಿರುವುದು ಜಗದೆಲ್ಲ ಜನ.


ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”


ದುಃಖಿತರೆಲ್ಲರಿಗೆ ಸಾಂತ್ವನ ಸಾರಲೆಂದೇ ಕಳುಹಿಸಿದನಾತ ನನ್ನನು. ಸಿಯೋನಿನ ಶೋಕಾರ್ತರಿಗೆ ಬರಿಬೂದಿಗೆ ಬದಲು ಶಿರೋಭೂಷಣ, ದುಃಖತಾಪದ ಬದಲು ಆನಂದ ತೈಲ, ಸೊರಗಿದ್ದ ಮನಕೆ ಮೆಚ್ಚಿಕೆಯ ಮೇಲ್ವಸ್ತ್ರ ಒದಗಿಸಲೆಂದೇ ನನ್ನನ್ನು ಕಳುಹಿಸಿದನಾತ. ನೆಟ್ಟಿಹನು ಇವರನು ಸರ್ವೇಶ್ವರ ತನ್ನ ಮಹಿಮೆಯಾಗಿ ಹೆಸರ ಪಡೆವರಿವರು ‘ನೀತಿವೃಕ್ಷ’ಗಳೆಂಬುದಾಗಿ.


ಸರ್ವೇಶ್ವರನಾದ ನಾನು ಸಂತೈಸದೆ ಬಿಡೆನು ಸಿಯೋನನ್ನು, ಉದ್ಧರಿಸುವೆನು ಆ ಹಾಳುಬಿದ್ದ ಸ್ಥಳಗಳೆಲ್ಲವನು. ಮಾರ್ಪಡಿಸುವೆನು ಕಾಡುನೆಲವನು ಏದೆನ್ ಉದ್ಯಾನದಂತೆ ಮರುಭೂಮಿಯನು, ದೇವತೆಗಳ ಉದ್ಯಾನವಾಗುವಂತೆ ಹರ್ಷೋಲ್ಲಾಸ, ಸ್ತುತಿಸ್ತೋತ್ರ, ಮಧುರಗಾನ ಅಲ್ಲಿ ನೆಲೆಸುವಂತೆ.


ಆದರೆ ದೇವರು ಉನ್ನತಲೋಕದಿಂದ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು; ಫಲಭರಿತ ಭೂಮಿ ಸಮೃದ್ಧ ಅರಣ್ಯವಾಗಿ ಮಾರ್ಪಡುವುದು.


ಇಗೋ, ನೂತನ ಕಾರ್ಯವನು ನಾನೆಸಗುವೆ ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೇ? ಮಾರ್ಗವನ್ನು ಏರ್ಪಡಿಸುವೆ ಮರುಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ.


ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ". ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.”


ರಾತ್ರಿಯಲ್ಲಿ ನನಗೆ ಈ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನೇರಿದ್ದ ಒಬ್ಬ ವ್ಯಕ್ತಿ ತಗ್ಗಿನಲ್ಲಿರುವ ಸುಗಂಧ ವೃಕ್ಷಗಳ ನಡುವೆ ನಿಂತಿದ್ದಾನೆ. ಅವನ ಹಿಂದೆ ಕೆಂಪು, ನಸುಗೆಂಪು ಮತ್ತು ಬಿಳಿಯ ಕುದುರೆಗಳಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು