Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 41:14 - ಕನ್ನಡ ಸತ್ಯವೇದವು C.L. Bible (BSI)

14 ಸರ್ವೇಶ್ವರ ಇಂತೆನ್ನುತ್ತಾರೆ : “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಕ್ರಿಮಿಪ್ರಾಯದವನಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ, ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾಮಿಯು ನಿನಗೆ ವಿಮೋಚಕನು” ಎಂದು ಯೆಹೋವನು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಕ್ರಿವಿುಪ್ರಾಯವಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾವಿುಯು ನಿನಗೆ ವಿಮೋಚಕನು ಎಂದು ಯೆಹೋವನು ಅನ್ನುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನನಗೆ ಅಮೂಲ್ಯವಾದ ಯಾಕೋಬೇ, ಭಯಪಡಬೇಡ. ನನ್ನ ಪ್ರಿಯ ಇಸ್ರೇಲೇ, ಹೆದರಬೇಡ. ನಾನು ನಿಜವಾಗಿಯೂ ನಿನಗೆ ಸಹಾಯ ಮಾಡುತ್ತೇನೆ.” ಇದು ಯೆಹೋವನ ನುಡಿ. “ಇಸ್ರೇಲರ ಪರಿಶುದ್ಧನೂ ನಿನ್ನನ್ನು ರಕ್ಷಿಸುವಾತನೂ ಈ ಮಾತುಗಳನ್ನು ಹೇಳಿದ್ದಾನೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಹುಳುವಿನಂತಿರುವ ಯಾಕೋಬೇ, ಪುಟ್ಟ ಇಸ್ರಾಯೇಲೇ, ಭಯಪಡಬೇಡ. ನಾನೇ ನಿನಗೆ ಸಹಾಯ ಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾರಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 41:14
36 ತಿಳಿವುಗಳ ಹೋಲಿಕೆ  

“ಬಾಬಿಲೋನಿಯಗೆ ಕಳುಹಿಸುವೆ ಒಬ್ಬಾತನನು ನಿಮಗಾಗಿ ಮುರಿವನಾತ ಆ ಕಾರಾಗೃಹದ ಕಂಬಿಗಳನು ತುಂಡುತುಂಡಾಗಿ ಬಾಬಿಲೋನಿಯರ ಕೂಗಾಟವನು ಮಾರ್ಪಡಿಸುವೆನು ಗೋಳಾಟವನ್ನಾಗಿ.


ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ.


ಮನುಜ ನಾನು, ಕ್ರಿಮಿಕೀಟಕೆ ಸಮಾನನು I ಅಲಕ್ಷಿತನು, ಪರರಿಂದ ತಿರಸ್ಕೃತನು II


ಅವರನ್ನು ಬಿಡಿಸಬಲ್ಲವನು ಬಲಿಷ್ಠನು. ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದೇ ಆತನ ನಾಮಧೇಯ. ಆತನೇ ಅವರ ವ್ಯಾಜ್ಯವನ್ನು ಜಯಿಸಿ, ನಾಡಿಗೆ ಶಾಂತಿಯನ್ನು ತಂದು, ಬಾಬಿಲೋನಿಯದವರಿಗೆ ಕಳವಳವನ್ನುಂಟುಮಾಡುವನು.”


ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, ಹೃದಯಧ್ಯಾನ I ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯಧಾಮ II


ಇಂತಿರಲು ಹುಳುವಿನಂಥ ನರನು ಏತರವನು? ಕ್ರಿಮಿಯಂಥ ನರನು ಎಷ್ಟುಮಾತ್ರದವನು?”


ನಾನಂತು ಬಲ್ಲೆ, ನನ್ನ ಉದ್ಧಾರಕ ಜೀವಸ್ವರೂಪನೆಂದು ಕಡೆಯ ದಿನದಂದು ಧರೆಗಾತ ಇಳಿದುಬರುವನೆಂದು.


ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟನು.


ಮಾಡುವೆನು ನಿನ್ನ ಹಿಂಸಕರು ಸ್ವಮಾಂಸವನ್ನು ತಿನ್ನುವಂತೆ ಅಮಲೇರುವರು ಸ್ವಂತ ರಕ್ತವನ್ನು ಕುಡಿದು ದ್ರಾಕ್ಷಾರಸದಂತೆ. ಅರಿವರು ನರಮಾನವರೆಲ್ಲರು ಇಂತು : ನಾನೇ ಸರ್ವೇಶ್ವರ, ನಿನ್ನ ರಕ್ಷಕ, ನಿನ್ನ ನಿನ್ನ ವಿಮೋಚಕನೆಂದು; ನಾನೇ ಯಕೋಬ ವಂಶದ ಬಲಾಢ್ಯ ದೇವನೆಂದು.


ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರ ಸ್ವಾಮಿಯೆ ನುಡಿದಿಹನು : “ನಿನಗೆ ಕ್ಷೇಮ‍ಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರ ಸ್ವಾಮಿ ದೇವರು ನಾನು.


ನಮ್ಮ ಉದ್ಧಾರಕನ ನಾಮಧೇಯ ಸೇನಾಧೀಶ್ವರ ಸರ್ವೇಶ್ವರ ಆತನೇ ಇಸ್ರಯೇಲರಿಗೆ ಪರಮಪವಿತ್ರ.


ತಾಯ ಗರ್ಭದಿಂದ ರೂಪಿಸಿ ನಿನ್ನನು ಹೊರತಂದ ಸರ್ವೇಶ್ವರ ಹೇಳಿಹನು ಇದನ್ನು : “ಸರ್ವವನು ಸೃಷ್ಟಿಸಿದ ಸರ್ವೇಶ್ವರನು ನಾನೆ ಗಗನಮಂಡಲವನು ವಿಸ್ತರಿಸಿದವನು ನಾನೆ ಭೂಮಂಡಲವನು ಹರಡಿದವನು ನಾನೆ ನನಗಾಗ ನೆರವಾಗಲು ಯಾರಾದರೂ ಇದ್ದರೆ?


ಇಂತೆನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ, ಇಸ್ರಯೇಲರ ಅರಸ, ಅವರ ಉದ್ಧಾರಕ: “ಆದಿಯು ನಾನೇ, ಅಂತ್ಯವು ನಾನೇ, ನನ್ನ ಹೊರತು ದೇವರಾರು ಇಲ್ಲ ಬೇರೆ.


ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: :ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅದರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ ಸಕಲ ದೇಶ, ಭಾಷೆ, ಕುಲಗೋತ್ರಗಳಿಂದ ಕೊಂಡುಕೊಂಡಿರುವೆ ಮಾನವರನು ನಿನ್ನ ರಕ್ತದಿಂದ.


ಮರಕ್ಕೆ ತೂಗುಹಾಕಲಾದ ಪ್ರತಿ ಒಬ್ಬನೂ ಶಾಪಗ್ರಸ್ತನು,” ಎಂದು ಬರೆದಿರುವಂತೆ, ನಮಗೋಸ್ಕರ ಕ್ರಿಸ್ತಯೇಸು ಶಾಪಸ್ವರೂಪಿಯಾಗಿ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಶಾಪದಿಂದ ನಮ್ಮನ್ನು ಪಾರುಮಾಡಿದರು.


“ಪುಟ್ಟಮಂದೆಯೇ, ಭಯಪಡಬೇಡ. ನಿನ್ನ ತಂದೆ ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ.


ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ, ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು.”


ನೀವೇ ನಮ್ಮ ತಂದೆ. ಅಬ್ರಹಾಮನು ನಮ್ಮನ್ನು ಅರಿಯದೆ ಇರಬಹುದು, ಇಸ್ರಯೇಲನು ನಮ್ಮನ್ನು ಗುರುತಿಸದೆ ಇರಬಹುದು, ಆದರೆ ಸರ್ವೇಶ್ವರಾ, ನೀವೇ ನಮ್ಮ ತಂದೆ, ನಮ್ಮ ಉದ್ಧಾರಕ; ಆದಿಯಿಂದ ಇರಲು ಅದುವೇ ನಿಮ್ಮ ನಾಮಾಂಕಿತ.


ಮೊಲೆಯೂಡಿಸುವರು ಜನಾಧಿಪತಿಗಳು ನಿನಗೆ ಮೊಲೆಗೂಸಾಗುವೆ ನೀನು ಜನಾಂಗಗಳಿಗೆ. ಆಗ ತಿಳಿಯುವೆ ನಿನ್ನನುದ್ಧರಿಸಿದ ಸರ್ವೇಶ್ವರ ನಾನೆಂದು ನಿನ್ನ ವಿಮೋಚಕನು, ಯಕೋಬ್ಯರ ಪರಾಕ್ರಮಿಯು ನಾನೆಂದು.


ಸರ್ವೇಶ್ವರ ಸ್ವಾಮಿ ಜನರಿಗೆ ಹೀಗೆನ್ನುತ್ತಾರೆ : “ಸಿಯೋನಿಗೆ ಹಾಗೂ ಪಾಪವನ್ನು ತೊರೆದುಬಿಟ್ಟ ಯಕೋಬ್ಯರ ಬಳಿಗೆ ನಾನು ಉದ್ಧಾರಕನಾಗಿ ಬರುವೆನು.


ತಟ್ಟನೆ ಉಕ್ಕಿ ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ.


ಪೂರ್ತಿಯಾಗಿ ತಿರಸ್ಕೃತನಾದವನಿಗೆ ಅನ್ಯಜನಾಂಗಗಳಿಗೆ ಅಸಹ್ಯವಾದವನಿಗೆ ದರ್ಪಾಧಿಪತಿಗಳಿಗೆ ದಾಸನಾದವನಿಗೆ, ಇಸ್ರಯೇಲಿನ ವಿಮೋಚಕನು ಹಾಗೂ ಪರಮಪಾವನನು ಆದ ಸರ್ವೇಶ್ವರನು ಹೀಗೆಂದು ಹೇಳುವನು : “ಸರ್ವೇಶ್ವರ ಸ್ವಾಮಿಯ ಪ್ರಾಮಾಣಿಕತೆಯನ್ನೂ ಇಸ್ರಯೇಲಿನ ಪರಮ ಪಾವನನಿಂದ ನೀನು ಆಯ್ಕೆಯಾದುದನ್ನೂ ನಿನ್ನ ಅರಸರುಗಳು ಕಂಡು, ಎದ್ದುನಿಲ್ಲುವರು ನಿನಗೆ ಅಧಿಪತಿಗಳು ಅಡ್ಡಬೀಳುವರು.”


ಇಸ್ರಯೇಲಿನ ಬಗ್ಗೆ ಯೆಶಾಯನು ಹೀಗೆಂದು ಘೋಷಿಸಿದ್ದಾನೆ: “ಶೀಘ್ರದಲ್ಲೇ ಸರ್ವೇಶ್ವರ ವಿಶ್ವದ ಲೆಕ್ಕಾಚಾರವನ್ನು ಪೂರ್ತಿಯಾಗಿ ತೆಗೆದುಕೊಳ್ಳುವರು. ಇಸ್ರಯೇಲಿನ ಜನರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತರಾಗಿದ್ದರೂ ಅವರಲ್ಲಿ ಕೆಲವರೇ ಜೀವೋದ್ಧಾರವನ್ನು ಹೊಂದುವರು.”


“ನೀವು ಸಂಖ್ಯೆಯಲ್ಲಿ ಜನಾಂಗಗಳಿಗೆಲ್ಲಾ ಹೆಚ್ಚುಮಂದಿ ಎಂದು ಪ್ರೀತಿಸಿ, ಆಯ್ದುಕೊಳ್ಳಲಿಲ್ಲ; ನಿಜವಾಗಿಯೂ ನೀವು ಎಲ್ಲಾ ಜನಾಂಗಗಳಿಗಿಂತ ಅಲ್ಪಸಂಖ್ಯಾತರು.


ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ I ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ II


ನೆನೆದರಾಗ ದೇವರೇ ತಮಗಾಶ್ರಯ ದುರ್ಗವೆಂದು I ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು II


ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖದುಗುಡದ ಕಹಿ.


ಹೆದರಬೇಡ, ನಾನಿದ್ದೇನೆ ನಿನ್ನೊಂದಿಗೆ ಭಯಭ್ರಾಂತನಾಗಬೇಡ, ನಾನೇ ದೇವರು ನಿನಗೆ. ಶಕ್ತಿ ನೀಡುವೆ, ಸಹಾಯಮಾಡುವೆ ನಿನಗೆ ನನ್ನ ವಿಜಯಹಸ್ತದ ಆಧಾರ ಇದೆ ನಿನಗೆ.


ಪರಿಹರಿಸಿದೆ ನಿನ್ನ ದ್ರೋಹಗಳನ್ನು ಮಂಜಿನಂತೆ ಚದರಿಸಿದ್ದೇನೆ ನಿನ್ನ ಪಾಪಗಳನು ಮೋಡದಂತೆ ವಿಮೋಚಿಸಿದ್ದೇನೆ ನೀ ನನಗೆ ಅಭಿಮುಖನಾಗಬೇಕೆಂದೆ.”


“ನನ್ನ ದಾಸ ಯಕೋಬೇ, ಭಯಪಡಬೇಡ ಇಸ್ರಯೇಲೇ, ಅಂಜಬೇಡ, ಇಗೋ, ನಾನು ನಿನ್ನನ್ನು ಉದ್ಧರಿಸುವೆನು ದೂರದೇಶದಿಂದ ನಿನ್ನ ಸಂತಾನವನ್ನು ರಕ್ಷಿಸುವೆನು ಸೆರೆಹೋದ ಸೀಮೆಯಿಂದ. ಯಕೋಬು ಹಾಯಾಗಿ ಹಿಂತಿರುಗಿ ಬಾಳುವುದು ನೆಮ್ಮದಿಯಿಂದ. ಭಯಪಡಬೇಡ ನನ್ನ ದಾಸ ಯಕೋಬೇ, ನಾನಿದ್ದೇನೆ ನಿನ್ನೊಂದಿಗೆ.


ನಿನ್ನನ್ನು ಕೂಗಿಕೊಂಡಾಗ ಸಮೀಪಕ್ಕೆ ಬಂದೆ “ಭಯಪಡಬೇಡ” ಎಂದು ಅಭಯನೀಡಿದೆ.


ಆಮೇಲೆ ಅವನು ನನಗೆ, “ದಾನಿಯೇಲನೇ, ಭಯಪಡಬೇಡ! ಏಕೆಂದರೆ ನೀನು ನಿನ್ನ ದೇವರ ಮುಂದೆ ವಿನಮ್ರಪೂರ್ವಕವಾಗಿ (ದೈವಸಂಕಲ್ಪವನ್ನು) ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ ಮೊದಲನೆಯ ದಿನದಲ್ಲೇ ನಿನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು. ಆ ಪ್ರಾರ್ಥನೆಯ ನಿಮಿತ್ತವೇ ನಾನು ಬಂದಿದ್ದೇನೆ.


ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು! ನನ್ನದಲ್ಲ ನಾಶಮಾಡುವ ರೋಷವು.


ಆಮೇಲೆ ನಾಡನ್ನು ನಿಮಗೆ ಕೊಟ್ಟಿರುತ್ತೇನೆ. ಅದರಲ್ಲಿ ಕಾಡುಗಳಿದ್ದರೂ ನೀವು ಅವುಗಳನ್ನು ಕಡಿದು ಹಾಕಬಹುದು. ಅದಕ್ಕೆ ಸೇರಿರುವ ಬಯಲುಭೂಮಿ ನಿಮ್ಮದೇ. ಕಾನಾನ್ಯರು ಬಲಿಷ್ಠರು ಹಾಗೂ ಕಬ್ಬಿಣದ ರಥಗಳುಳ್ಳವರು. ಆದರೂ ನೀವು ಅವರನ್ನು ಹೊರದೂಡಬಲ್ಲಿರಿ,” ಎಂದು ಉತ್ತರ ಕೊಟ್ಟನು.


ಅಸ್ಸೀರಿಯದ ಅರಸನಿಂದ ಬಂದಿರುವ ಸೇನಾಪತಿ ಆಡಿದ ಮಾತುಗಳನ್ನು ನಿನ್ನ ದೇವರಾದ ಸರ್ವೇಶ್ವರ ಕೇಳಿದ್ದಾರೆ. ಆ ಸೇನಾಪತಿ ತನ್ನ ಒಡೆಯನ ಹೆಸರಿನಲ್ಲಿ ಜೀವಸ್ವರೂಪರಾದ ಆ ದೇವರನ್ನು ದೂಷಿಸಿದ್ದಾನೆ. ಅವನಿಗೆ ತಕ್ಕ ದಂಡನೆಯಾಗಬೇಕು. ಹೀಗಿರಲು ಅಳಿದುಳಿದಿರುವ ಜನರಿಗಾಗಿ ದೇವರನ್ನು ನೀನು ಪ್ರಾರ್ಥನೆ ಮಾಡಬೇಕೆಂದು ಹಿಜ್ಕೀಯ ಕೇಳಿಕೊಂಡಿದ್ದಾನೆ,’ ಎಂದು ತಿಳಿಸಿ.”


ನಿನ್ನ ದೇವರಾದ ಸರ್ವೇಶ್ವರ ನಾನು, ಇಸ್ರಯೇಲರ ಪರಮಪಾವನ ಸ್ವಾಮಿ, ನಿನ್ನ ರಕ್ಷಕ ನಾನು. ಈಡುಮಾಡಿದ್ದೇನೆ ಈಜಿಪ್ಟನ್ನು ನಿನ್ನ ವಿಮೋಚನೆಗಾಗಿ ಕೊಟ್ಟಿದ್ದೇನೆ ಸುಡಾನ್ ಸೆಬಾ ನಾಡುಗಳನ್ನು ನಿನಗೆ ಈಡಾಗಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು