Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 40:7 - ಕನ್ನಡ ಸತ್ಯವೇದವು C.L. Bible (BSI)

7 ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆಹೋವನ ಶ್ವಾಸವು ಅದರ ಮೇಲೆ ಬೀಸುವುದರಿಂದ ಹುಲ್ಲು ಒಣಗಿ ಹೋಗುವುದು, ಹೂವು ಬಾಡಿ ಹೋಗುವುದು. ನಿಶ್ಚಯವಾಗಿ ಜನರು ಹುಲ್ಲೇ ಹುಲ್ಲು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಯೆಹೋವನ ಶ್ವಾಸವು ಅದರ ಮೇಲೆ ಬೀಸುವದರಿಂದ ಹುಲ್ಲು ಒಣಗಿಹೋಗುವದು, ಹೂವು ಬಾಡಿ ಹೋಗುವದು. ಜನವು ಹುಲ್ಲೇ ಹುಲ್ಲು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೆಹೋವನ ಕಡೆಯಿಂದ ಒಂದು ಬಲವಾದ ಗಾಳಿಯು ಹುಲ್ಲಿನ ಮೇಲೆ ಬೀಸಿತು. ಆ ಹುಲ್ಲು ಒಣಗಿಹೋಯಿತು. ಕಾಡಿನ ಪುಷ್ಪವು ಬಾಡಿಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಯೆಹೋವ ದೇವರ ಶ್ವಾಸವು ಅದರ ಮೇಲೆ ಬೀಸುವುದರಿಂದ, ಹುಲ್ಲು ಒಣಗಿಹೋಗುವುದು. ಹೂವು ಉದುರಿ ಹೋಗುವುದು. ಮಾನವರೆಲ್ಲರೂ ಹುಲ್ಲೇ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 40:7
15 ತಿಳಿವುಗಳ ಹೋಲಿಕೆ  

ಇದ್ದಿಲನು ಹೊತ್ತಿಸಲು ಅದರ ಉಸಿರೇ ಸಾಕು ಅದರ ಬಾಯಿಂದ ಹೊರಹೊಮ್ಮುವುದು ಜ್ವಾಲೆಯು.


ಅಂತೆಯೇ ಧನಿಕನಾದ ಸಹೋದರನು, ದೇವರು ತನ್ನನ್ನು ದೀನಸ್ಥಿತಿಗೆ ಇಳಿಸಿದಾಗ ಆನಂದಿಸಲಿ.


ಏಕೆಂದರೆ, ಧನಿಕರು ಹುಲ್ಲಿನ ಹೂವಿನಂತೆ ಗತಿಸಿಹೋಗುತ್ತಾರೆ. ಸೂರ್ಯನ ಸುಡುಬಿಸಿಲಿಗೆ ಹುಲ್ಲು ಒಣಗಿಹೋಗುತ್ತದೆ. ಅದರ ಹೂವು ಉದುರಿಹೋಗುವುದು, ಅದರ ಅಂದಚೆಂದವೂ ಹಾಳಾಗಿ ಹೋಗುತ್ತದೆ. ಅಂತೆಯೇ ಧನಿಕನು ತನ್ನ ವ್ಯವಹಾರಗಳಲ್ಲಿಯೇ ಕುಂದಿಹೋಗುತ್ತಾನೆ.


ಅಂಥವರು ದೇವರ ಉಸಿರಿನಿಂದಲೆ ನಾಶವಾಗುವರು ಆತನ ಸಿಟ್ಟಿನಿಂದಲೆ ಸತ್ತುಹೋಗುವರು.


ಅರಳಿ ಬಾಡುವನು ಹೂವಿನಂತೆ ನಿಲ್ಲದೆ ಓಡುವನು ನೆರಳಿನಂತೆ.


ಮನುಜರು ನೀ ಹರಿದೋಡಿಸುವ ಹೊಯಿಲು I ಇರುಳಿನ ಕನಸು, ಹಗಲಿನ ಗರಿಹುಲ್ಲು II


ಚಿಗುರಿ ಹೂಬಿಡುವುದದು ಬೆಳಗಿನಲಿ I ಸೊರಗಿ ತರಗಾಗುವುದು ಬೈಗಿನಲಿ II


ಬಿಸಿಲಿಗೆ ಬಾಡಿದ ಹುಲ್ಲಿನಂತಿದೆ ಎನ್ನೆದೆ I ತಿಂಡಿತೀರ್ಥವನುಣ್ಣಲೂ ನಾ ಮರೆತುಹೋದೆ II


ಬಿದ್ದುಹೋಗುವುದಾ ಹೂವು ಗಾಳಿಯ ಬಡಿತಕ್ಕೆ I ಅದರ ಗುರುತೂ ಇರದಲ್ಲಿ ಮರಳಿ ನೋಡಲಿಕ್ಕೆ II


ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ.


ಬಲವಿಲ್ಲದವರಾದರು ಆ ನಗರವಾಸಿಗಳು ನನ್ನ ನಿಮಿತ್ತವೆ, ಸಮಾನರಾದರು ಹೊಲದ ಸಸಿಗೆ, ಎಳೆಗರಿಕೆಗೆ, ಮಾಳಿಗೆ ಮೇಲಿನ ಹುಲ್ಲಿಗೆ. ಬೆಳೆಯುವುದಕ್ಕೆ ಮೊದಲೆ ತುತ್ತಾದರು ಬಿರುಗಾಳಿಯ ಹೊಡೆತಕ್ಕೆ.


ನೆಟ್ಟಕೂಡಲೇ, ಬಿತ್ತಿದಾಕ್ಷಣವೇ, ಭೂಮಿಯಲ್ಲಿ ಬೇರೂರುವಾಗಲೆ ಬಾಡುವುದು ಇವರ ಸಂತಾನ ಆತನ ಶ್ವಾಸದಿಂದಲೆ; ಬಡಿದು ಹೊಯ್ಯಲ್ಪಡುವುದು ಒಣಹುಲ್ಲಿನಂತೆ ಬಿರುಗಾಳಿಯಿಂದಲೆ.


“ನಾನೆ, ನಾನೆ ನಿನ್ನನು ಸಂತೈಸುವವನಾಗಿರೆ, ನೀ ಭಯಪಡುವುದೇಕೆ ಮರ್ತ್ಯನಾದ ಮಾನವನಿಗೆ? ನೀ ಹೆದರಿ ನಡುಗುವುದೇಕೆ ಹುಲುಮಾನವನಿಗೆ?


ನೀವು ನಿರೀಕ್ಷಿಸಿದ್ದು ಸಮೃದ್ಧಿ ಸುಗ್ಗಿ. ಆದರೆ ಸಿಕ್ಕಿದ್ದು ಕಿಂಚಿತ್ತು ಮಾತ್ರ; ಅದನ್ನು ಮನೆಗೆ ತಂದಾಗ ನಾನದನ್ನು ಗಾಳಿಗೆ ತೂರಿಬಿಟ್ಟೆ. ಇದಕ್ಕೆ ಕಾರಣವೇನು?” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. “ಕಾರಣವೇನೆಂದರೆ ನನ್ನ ಆಲಯ ಪಾಳುಬಿದ್ದಿರುವಾಗ ನಿಮ್ಮಲ್ಲಿ ಪ್ರತಿ ಒಬ್ಬನೂ ತನ್ನ ಸ್ವಂತ ಮನೆಯ ಕೆಲಸದಲ್ಲಿ ಮಗ್ನನಾಗಿದ್ದಾನೆ.


ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ I ಹೊಲದ ಹೂವಿನಂತೆ ಅವನ ಬೆಡಗು ಬಿನ್ನಾಣ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು