Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 40:4 - ಕನ್ನಡ ಸತ್ಯವೇದವು C.L. Bible (BSI)

4 ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು, ಮಲೆನಾಡು ಬಯಲು ಸೀಮೆಯಾಗುವುದು. ಒರಟಾದ ನೆಲವು ಸಮವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು, ಮಲೆನಾಡು ಬೈಲುಸೀಮೆಯಾಗುವದು, ಕೊರಕಲ ನೆಲವು ಸಮವಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ತಗ್ಗುಗಳನ್ನು ಸಮತಟ್ಟು ಮಾಡಿರಿ. ಎಲ್ಲಾ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಿರಿ. ಕೊರಕಲು ರಸ್ತೆಗಳನ್ನು ನೆಟ್ಟಗೆ ಮಾಡಿರಿ. ಏರುತಗ್ಗು ನೆಲವನ್ನು ಸಮಗೊಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಪ್ರತಿಯೊಂದು ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು. ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು. ಒರಟಾದ ನೆಲವು ಸಮವಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 40:4
18 ತಿಳಿವುಗಳ ಹೋಲಿಕೆ  

ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು; ಬೆಟ್ಟಗುಡ್ಡಗಳು ಮಟ್ಟವಾಗಬೇಕು; ಅಂಕುಡೊಂಕಾದವು ನೆಟ್ಟಗಾಗಬೇಕು; ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿನ್ನ ರುಮಾಲನ್ನು ಕಿತ್ತುಬಿಡು, ಕಿರೀಟವನ್ನು ತೆಗೆದುಹಾಕು. ಎಲ್ಲವೂ ಮೊದಲಿದ್ದ ಹಾಗೆ ಇರುವುದಿಲ್ಲ; ಕೆಳಗಿರುವುದನ್ನು ಮೇಲೆ ಸೇರಿಸಲಾಗುವುದು, ಮೇಲಿರುವುದನ್ನು ಕೆಳಕ್ಕಿಳಿಸಲಾಗುವುದು.


“ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು.


ನಿನ್ನ ಮುಂದೆ ಸಾಗುವೆನು ನಾನು ಸಮಮಾಡುವೆನು ಬೆಟ್ಟಗುಡ್ಡಗಳನು ಒಡೆದುಹಾಕುವೆನು ಕಂಚಿನ ಕದಗಳನು ಮುರಿದುಬಿಡುವೆನು ಕಬ್ಬಿಣದ ಅಗುಳಿಗಳನು.


ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲಿ, ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು ತಗ್ಗಾದುದನು ಎತ್ತರಪಡಿಸುವವನು ಹಸುರಾದುದನು ಒಣಗಿಸುವವನು ಒಣಗಿದುದನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು ಇದ ನುಡಿದವ ನಾನು, ನುಡಿದುದನು ನಡೆಸುವವ ನಾನು.”


ಎತ್ತುವನಾತ ದೀನರನು ಧೂಳಿಂದ, ದರಿದ್ರರನು ತಿಪ್ಪೆಯಿಂದ. ಕುಳ್ಳರಿಸುವನವರನು ಅಧಿಪತಿಗಳ ಸಮೇತ ಅನುಗ್ರಹಿಸುವನು ಹಕ್ಕಾಗಿ ಆ ಮಹಿಮಾಸನ. ಕಾರಣ-ಭೂಮಿಯ ಆಧಾರಸ್ತಂಭಗಳು ಸರ್ವೇಶ್ವರನವೇ ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ.


ಘೋಷಿಸಲಿ ಮರುಭೂಮಿಯೂ ಅದರ ನಗರಗಳೂ ಕೇದಾರಿನವರೂ ಗ್ರಾಮನಿವಾಸಿಗಳೂ ಜಯಘೋಷಮಾಡಲಿ ಸೆಲ ಪಟ್ಟಣದವರೂ ಸಂತೋಷದಿಂದ ಹರ್ಷಧ್ವನಿಗೈಯಲಿ ಆ ಪರ್ವತದ ತುತ್ತತುದಿಗಳಿಂದ.


ಅವರ ಮಾರ್ಗ ಅಂಕು, ಅವರ ನಡತೆ ಡೊಂಕು.


ಇಗೋ, ಈ ವಾಣಿಯನ್ನು ಕೇಳಿ : “ಸರ್ವೇಶ್ವರ ಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ ಅರಣ್ಯದಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲಿ.


ಗೋಚರವಾಗುವುದಾಗ ಸರ್ವೇಶ್ವರ ಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರ ಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ.”


ಸಮದಾರಿಯಾಗಿಸುವೆನು ನನ್ನ ಬೆಟ್ಟಗುಡ್ಡಗಳನು ಎತ್ತರಿಸುವೆನು ನನ್ನ ರಾಜಮಾರ್ಗಗಳನು.


ಅಡ್ಡಿ ಅಡಚಣೆಗಳು ಬೆಟ್ಟದಂತಿದ್ದರೂ ನೀನು ದೇವಾಲಯವನ್ನು ಕಟ್ಟುವೆ. ಅಂತ್ಯದಲ್ಲಿ ಕಲಶವನ್ನು ಸ್ಥಾಪಿಸುವಾಗ ಜನರು ‘ಎಷ್ಟು ರಮ್ಯ! ಎಷ್ಟು ಸುಂದರ!’ ಎಂದು ಉದ್ಗರಿಸುವರು.”


ಹೊರಟುಬನ್ನಿ, ಹಾದುಬನ್ನಿ, ಪುರದ್ವಾರವನು ಬರಲಿರುವ ಜನರಿಗೆ ಸರಿಮಾಡಿರಿ ಹಾದಿಯನು ಎತ್ತರಿಸಿ ಹೆದ್ದಾರಿಯನು, ತೆಗೆದುಹಾಕಿ ಕಲ್ಲುಗಳನು ಹಾರಿಸಿ ಧ್ವಜವನು, ನೀಡಿ ರಾಷ್ಟ್ರಗಳಿಗೆ ಸೂಚನೆಯನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು