Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 40:10 - ಕನ್ನಡ ಸತ್ಯವೇದವು C.L. Bible (BSI)

10 ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇಗೋ, ಕರ್ತನಾದ ಯೆಹೋವನು ಶೂರನಾಗಿ ಬರುವನು, ತನ್ನ ಭುಜಬಲದಿಂದಲೇ ಆಳುವನು. ಇಗೋ, ಆತನ ಕ್ರಿಯಾಲಾಭವು ಆತನೊಂದಿಗಿದೆ, ಆತನ ಶ್ರಮದ ಫಲವು ಆತನ ಮುಂದೆಯೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಹಾ, ಕರ್ತನಾದ ಯೆಹೋವನು ಶೂರನಾಗಿ ಬರುವನು, ತನ್ನ ಭುಜಬಲದಿಂದಲೇ ಆಳುವನು; ಇಗೋ, ಆತನ ಕ್ರಿಯಾಲಾಭವು ಆತನೊಂದಿಗಿದೆ, ಆತನ ಶ್ರಮದ ಫಲವು ಆತನ ಮುಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಇಗೋ, ನನ್ನ ಒಡೆಯನಾದ ಯೆಹೋವನು ಬಲಸಾಮರ್ಥ್ಯಗಳೊಡನೆ ಬರುತ್ತಿದ್ದಾನೆ. ಆತನು ತನ್ನ ಪರಾಕ್ರಮದಿಂದ ಎಲ್ಲಾ ಜನರನ್ನು ಆಳುವನು. ಆತನು ತನ್ನ ಜನರಿಗೆ ಪ್ರತಿಫಲಗಳನ್ನು ತರುವನು. ಅವರ ಸಂಬಳವು ಆತನ ಕೈಯಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಇಗೋ, ಸಾರ್ವಭೌಮ ಯೆಹೋವ ದೇವರು ಬಲದೊಂದಿಗೆ ಬರುವರು. ಅವರ ತೋಳು ತಮಗೋಸ್ಕರ ಆಳುವುದು. ಅವರ ಬಹುಮಾನವು ಅವರ ಸಂಗಡ ಅವರ ಪ್ರತಿಫಲವು ಅವರ ಮುಂದೆಯೂ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 40:10
32 ತಿಳಿವುಗಳ ಹೋಲಿಕೆ  

“ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ. ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ಕೊಡಲಾಗುವ ಪ್ರತಿಫಲವು ನನ್ನ ಕೈಯಲ್ಲೇ ಇದೆ.


ಇಗೋ, ಸಮೀಪಿಸುತ್ತಿದೆ ನೀವು ಮುಕ್ತಿಹೊಂದುವದಿನ ಆತನೊಂದಿಗಿದೆ ಆತ ನೀಡುವ ಬಹುಮಾನ ಆತನ ಮುಂದಿದೆ ಆತ ಗಳಿಸಿದ ವರಮಾನ. ಇದನು ತಿಳಿಯಹೇಳಿರಿ ಸಿಯೋನೆಂಬಾಕೆಗೆ ಸರ್ವೇಶ್ವರನ ಆಜ್ಞೆಯಿದು ಜಗದ ದಿಗಂತದವರೆಗೆ.


ಅವರು ಯಜ್ಞದ ಕುರಿಮರಿಯ ಮೇಲೆ ಯುದ್ಧಮಾಡುವರು. ಆದರೆ ಯಜ್ಞದ ಕುರಿಮರಿಗೆ ಜಯವಾಗುವುದು. ಆ ಕುರಿಮರಿಯು ಒಡೆಯರಿಗೆಲ್ಲಾ ಒಡೆಯನೂ ರಾಜಾಧಿರಾಜನೂ ಆಗಿರುವುದೇ ಇದಕ್ಕೆ ಕಾರಣ. ದೇವರ ಕರೆ ಹೊಂದಿದವರೂ ದೇವರು ಆಯ್ದುಕೊಂಡವರೂ ಆದ ಪ್ರಾಮಾಣಿಕ ಅನುಯಾಯಿಗಳು ಆ ಜಯದಲ್ಲಿ ಪಾಲುಗಾರರಾಗುವರು,” ಎಂದನು.


ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ.


ಇಂತೆಂದುಕೊಂಡೆ ನಾನಾಗ : ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ.


ಸತ್ಯವು ಅದೃಶ್ಯವಾಗಿದೆ. ಕೇಡನ್ನು ಕೈಬಿಟ್ಟವನೇ ಖೂನಿಗೆ ಗುರಿಯಾಗುತ್ತಾನೆ.”


ಪಾಪಮಾಡುವವನು ಸೈತಾನನ ಸಂತಾನದವನು. ಸೈತಾನನು ಆದಿಯಿಂದಲೂ ಪಾಪಮಾಡಿದವನೇ. ಅವನ ದುಷ್ಕೃತ್ಯಗಳನ್ನು ವಿನಾಶಗೊಳಿಸಲೆಂದೇ ದೇವರ ಪುತ್ರ ಕಾಣಿಸಿಕೊಂಡಿದ್ದು.


ಇದನ್ನು ಕುರಿತೇ, ‘ಸಿಯೋನ್ ನಗರಿಯೇ, ಅಂಜಬೇಡ. ಇಗೋ ನೋಡು; ಹೇಸರಗತ್ತೆಯನ್ನೇರಿ ಬರುತ್ತಿರುವನು ನಿನ್ನ ಅರಸನು’ ಎಂದಿದೆ ಪವಿತ್ರಗ್ರಂಥ.


ನ್ಯಾಯತೀರಿಸುವನು ಪ್ರಭು ಸಕಲ ಜನಾಂಗಗಳಲಿ I ಛೇಧಿಸುವನು ಶತ್ರುಗಳ ಶಿರಸನು ರಣರಂಗದಲಿ I ತುಂಬಿಸುವನು ಹೆಣಗಳನು ಎಲ್ಲೆಡೆಗಳಲಿ II


ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು.


ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಅವರು ಯೇಸುವನ್ನು ಎದುರುಗೊಳ್ಳಲು ಹೊರಟರು. ‘ಸರ್ವೇಶ್ವರನ ನಾಮದಲ್ಲಿ ಬರುವಾತನಿಗೆ ಜಯಜಯವಾಗಲಿ ! ಇಸ್ರಯೇಲಿನ ಅರಸನಿಗೆ ಶುಭವಾಗಲಿ !’ ಎಂದು ಘೋಷಿಸುತ್ತಾ ಅವರನ್ನು ಸ್ವಾಗತಿಸಿದರು.


ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ ಹಂಚಿಕೊಳ್ಳುವನು ಸೂರೆಯನ್ನು ಬಲಿಷ್ಠರ ಸಂಗಡ ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.


“ನಿನ್ನ ಕಾರ್ಯಗಳೆನಿತೋ ಚೇತೋಹಾರಿ I ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II


ಅನಂತರ ಶ್ವೇತವರ್ಣದ ಒಂದು ಮಹಾಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.


ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.”


ಇದೋ, ಸರ್ವೇಶ್ವರ ಸ್ವಾಮಿ ಬಳಿ ಮಹಾ ಬಲಿಷ್ಠನೊಬ್ಬನು ಇದ್ದಾನೆ. ಆತನು ರಭಸವಾಗಿರುವ ಕಲ್ಮಳೆಯಂತೆ, ವಿನಾಶಕರವಾದ ಬಿರುಗಾಳಿಯಂತೆ, ಕೊಚ್ಚಿ ಹರಿಯುವ ತುಂಬು ಪ್ರವಾಹದಂತೆ ಬರುವನು. ಆ ನಗರ ನೆಲಕ್ಕೆ ಕುಸಿದುಬಿದ್ದು ನೆಲಸಮವಾಗುವಂತೆ ಮಾಡುವನು.


ಸರ್ವೇಶ್ವರಾ, ನಮಗೆ ಕೃಪೆತೋರಿ. ನಿಮಗಾಗಿ ಕಾದಿದ್ದೇವೆ. ದಿನದಿಂದ ದಿನಕ್ಕೆ ನಮಗೆ ಬೆಂಬಲವಾಗಿರಿ. ಆಪತ್ಕಾಲದಲ್ಲಿ ನಮಗೆ ರಕ್ಷಣೆ ನೀಡಿರಿ.


ಹತ್ತಿರದಲ್ಲೇ ಇದೆ ನಾ ನೀಡುವ ಮುಕ್ತಿ ಸಿಗುವದು ನನ್ನಿಂದ ವಿಮೋಚನಾ ಶಕ್ತಿ ನ್ಯಾಯ ನೀಡುವೆನು ರಾಷ್ಟ್ರಗಳಿಗೆ ನನ್ನ ಭುಜಬಲದಿಂದ ನನ್ನನ್ನು ನಿರೀಕ್ಷಿಸಿಕೊಂಡಿರುವರು ಜನರು ದೂರದೇಶಗಳಿಂದ ಕಾದಿರುವರು ಆ ಭುಜಬಲ ಸಾಧನೆಗಾಗಿ ನಂಬಿಕೆಯಿಂದ.


ಸರ್ವೇಶ್ವರ ಸ್ವಾಮಿ ಇದನ್ನು ನೋಡಿದ್ದಾರೆ. ನ್ಯಾಯವೇ ಇಲ್ಲದ್ದನ್ನು ಕಂಡು ಖಿನ್ನರಾಗಿದ್ದಾರೆ. ಮುಂದೆ ಬಂದು ಉದ್ಧಾರಮಾಡಬಲ್ಲ ವ್ಯಕ್ತಿ ಯಾರೂ ಇಲ್ಲದಿರುವುದನ್ನು ಅರಿತು ಸ್ತಬ್ಧರಾಗಿದ್ದಾರೆ. ಎಂತಲೇ, ಅವರು ಸ್ವಂತ ಶಕ್ತಿಯನ್ನು ಪ್ರಯೋಗಿಸಿ ಜಯಪ್ರದರಾಗುವರು. ನ್ಯಾಯನೀತಿಯೇ ಅವರಿಗೆ ಆಧಾರ.


ಅವರವರ ಕೃತ್ಯಗಳಿಗೆ ತಕ್ಕಂತೆ ದೂರದ ನಾಡುಗಳವರೆಗೂ ಮುಯ್ಯಿ ತೀರಿಸುವರು. ವಿರೋಧಿಗಳಿಗೆ ಪ್ರತೀಕಾರ ಎಸಗುವರು; ಶತ್ರುಗಳಿಗೆ ಸೇಡನ್ನು ತೀರಿಸುವರು.


ಸುತ್ತಲು ನೋಡಿದೆ, ಯಾರು ಇರಲಿಲ್ಲ ಸಹಾಯಮಾಡಲು ನನಗೆ ಒತ್ತಾಸೆಗೆ ಒಬ್ಬನೂ ಇಲ್ಲದ್ದನ್ನು ಕಂಡು ಸ್ತಬ್ಧನಾದೆ. ಆಗ ನನ್ನ ಭುಜಬಲವೇ ಜಯಕ್ಕೆ ಅಡಿಪಾಯವಾಯಿತು.


ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯದರ್ಶನ ಆಯಿತು. ಅದರಲ್ಲಿ ಸರ್ವೇಶ್ವರ ಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ".


ಸರ್ವೇಶ್ವರ ಹೀಗೆನ್ನುತ್ತಾರೆ: “ನಿಲ್ಲಿಸು ನಿನ್ನ ಗೋಳಾಟವನ್ನು ಒರಸು ನಿನ್ನ ಕಣ್ಗಳಿಂದ ನೀರನ್ನು. ನಿನ್ನ ಪ್ರಯಾಸ ಸಾರ್ಥಕವಾಗುವುದು ಶತ್ರುವಿನ ದೇಶದಿಂದ ನಿನ್ನ ಮಕ್ಕಳು ಹಿಂದಿರುಗುವರು. ಸರ್ವೇಶ್ವರನಾದ ನನ್ನ ನುಡಿ ಇದು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು