ಯೆಶಾಯ 34:13 - ಕನ್ನಡ ಸತ್ಯವೇದವು C.L. Bible (BSI)13 ಅಲ್ಲಿನ ಅರಮನೆಗಳಲ್ಲಿ ಕಳ್ಳಬಳ್ಳಿಗಳೂ ಕೋಟೆಗಳಲ್ಲಿ ಮುಳ್ಳುಗಿಳ್ಳುಗಳೂ ಹಬ್ಬಿಕೊಳ್ಳುವುವು. ಅದು ಮರಿಗಳಿಗೆ ಗುಹೆಯಾಗಿಯೂ ಗೂಬೆಗಳಿಗೆ ಗೂಡಾಗಿಯೂ ಇರುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಅಲ್ಲಿನ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವವು, ಅದರ ಕೋಟೆಗಳಲ್ಲಿ ಮುಳ್ಳುಗಿಡಗಳೂ, ದತ್ತೂರಿಯೂ ಹಬ್ಬಿಕೊಳ್ಳುವವು. ಅದು ನರಿಗಳಿಗೆ ಗುಹೆಯಾಗಿಯೂ, ಉಷ್ಟ್ರಪಕ್ಷಿಗಳಿಗೆ ನಿವಾಸವಾಗಿಯೂ ಇರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಅಲ್ಲಿನ ಅರಮನೆಗಳಲ್ಲಿ ದಬ್ಬೆಗಳ್ಳಿಗಳೂ ಕೋಟೆಗಳಲ್ಲಿ ಮುಳ್ಳುಗಿಳ್ಳುಗಳೂ ಹಬ್ಬಿಕೊಳ್ಳುವವು; ಅದು ನರಿಗಳಿಗೆ ಹಕ್ಕೆಯಾಗಿಯೂ ಉಷ್ಟ್ರಪಕ್ಷಿಗಳಿಗೆ ಎಡೆಯಾಗಿಯೂ ಇರುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಮುಳ್ಳುಗಿಡಗಳು ಅಲ್ಲಿಯ ಸುಂದರವಾದ ಬಂಗಲೆಗಳಲ್ಲಿ ಬೆಳೆಯುವವು. ಕಾಡುನಾಯಿಗಳೂ ಗೂಬೆಗಳೂ ಆ ಮನೆಗಳಲ್ಲಿ ವಾಸಿಸುವವು. ಕಾಡುಪ್ರಾಣಿಗಳು ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವವು. ಅಲ್ಲಿ ಬೆಳೆಯುವ ಎತ್ತರವಾದ ಹುಲ್ಲುಗಳಲ್ಲಿ ಉಷ್ಟ್ರಪಕ್ಷಿಗಳು ವಾಸಮಾಡುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವುವು, ಅದರ ಕೋಟೆಗಳಲ್ಲಿ ಮುಳ್ಳುಪೊದೆಗಳು ಇರುವುವು. ಅದು ನರಿಗಳ ನಿವಾಸವೂ, ಗೂಬೆಗಳಿಗೆ ಸ್ಥಾನವೂ ಆಗುವುದು. ಅಧ್ಯಾಯವನ್ನು ನೋಡಿ |
ಇಸ್ರಯೇಲಿನ ಜೀವಂತ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಶ್ಚಯವಾಗಿ ಹೇಳುತ್ತೇನೆ - ಸೊದೋಮಿನ ಗತಿಯೇ ಮೋವಾಬಿನ ಗತಿ ಆಗುವುದು. ಗೊಮೋರಾದ ದುರ್ಗತಿಯೇ ಅಮ್ಮೋನ್ಯರಿಗೆ ಸಂಭವಿಸುವುದು. ಈ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯನಾಶನಕ್ಕೆ ಈಡಾಗುವುವು. ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು; ಅಳಿದುಳಿದ ನನ್ನ ಜನರಿಗೆ ಅವು ಸೊತ್ತಾಗುವುವು.”