Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 33:19 - ಕನ್ನಡ ಸತ್ಯವೇದವು C.L. Bible (BSI)

19 ನಿಮಗೆ ತಿಳಿಯಲಾಗದ ಅನ್ಯಭಾಷೆಯನ್ನು, ನೀವು ಗ್ರಹಿಸಲಾಗದ ಅಸ್ಪಷ್ಟ ಮಾತುಗಳನ್ನು ಆಡುವ ಅಹಂಕಾರದ ಜನರನ್ನು ಇನ್ನು ಮೇಲೆ ಕಾಣಲಾರಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಿಮಗೆ ತಿಳಿಯದ ಅನ್ಯಭಾಷೆಯನ್ನೂ, ನೀವು ಗ್ರಹಿಸಲಾರದ ತೊದಲು ಮಾತುಗಳನ್ನೂ ಆಡುವ ಆ ಕ್ರೂರ ಜನರನ್ನು ಇನ್ನು ಮುಂದೆ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಿಮಗೆ ತಿಳಿಯಲಾಗದ ಅನ್ಯಭಾಷೆಯನ್ನೂ ನೀವು ಗ್ರಹಿಸಲಾರದ ತೊದಲುಮಾತುಗಳನ್ನೂ ಆಡುವ ಆ ಕ್ರೂರಜನರನ್ನು ಕಾಣದೆ ಇರುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನೀನು ತಿಳಿಯಲಾಗದ ಹಾಗೆ ಕಠಿಣ ಭಾಷೆಯೂ, ಗ್ರಹಿಸಲಾಗದ ಹಾಗೆ ಅಪರೂಪವಾದ ಮಾತನ್ನು ಆಡಿದ ಜನರನ್ನೂ ಇನ್ನು ಮುಂದೆ ನೀನು ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 33:19
10 ತಿಳಿವುಗಳ ಹೋಲಿಕೆ  

ನೀವು ನನಗೆ ಕಿವಿಗೊಡದೆಹೋದರೆ, ಸರ್ವೇಶ್ವರ ಅಪರಿಚಿತವಾದ ಅನ್ಯಭಾಷೆಯನ್ನು ಆಡುವ ಜನರ ಮುಖಾಂತರ ನಿಮಗೆ ಪಾಠಕಲಿಸುವರು.


ಇಸ್ರಯೇಲ್ ವಂಶವೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಗಮನದಿಂದ ಕೇಳು : “ನಾನು ಒಂದು ರಾಷ್ಟ್ರವನ್ನು ದೂರದಿಂದ ನಿನ್ನ ವಿರುದ್ಧ ಬರಮಾಡುವೆನು. ಅದು ಪ್ರಾಚೀನ ಹಾಗೂ ಪ್ರಬಲ ರಾಷ್ಟ್ರ. ಅದರ ಭಾಷೆ ನಿನಗೆ ತಿಳಿಯದು. ಅದು ಆಡುವ ಮಾತು ನಿನಗೆ ಅರ್ಥವಾಗದು.


“ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು: ‘ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ.


ಅದಕ್ಕೆ ಮೋಶೆ ಆ ಜನರಿಗೆ, “ಅಂಜಬೇಡಿ, ಸುಮ್ಮನಿರಿ, ಈ ದಿನ ಸರ್ವೇಶ್ವರ ನಿಮ್ಮನ್ನು ಹೇಗೆ ರಕ್ಷಿಸುತ್ತಾರೆಂದು ನೋಡಿ! ಈ ದಿನ ನೀವು ನೋಡುವ ಈಜಿಪ್ಟಿನವರನ್ನು ಇನ್ನೆಂದಿಗೂ ನೋಡುವುದಿಲ್ಲ.


ಪವಿತ್ರಗ್ರಂಥದಲ್ಲಿ ಇಂತಿದೆ: ಅನ್ಯಭಾಷೆಯವರ ಮುಖಾಂತರ ಅನ್ಯದೇಶೀಯರ ಬಾಯ ಮುಖಾಂತರ ನಾನೆನ್ನ ಜನರೊಡನೆ ಮಾತಾಡಿದಾಗಲೂ ಎನ್ನ ಮಾತಿಗೆ ಕಿವಿಗೊಡರವರು, ಎಂದರು ಪ್ರಭು.”


ನಾವು ಹೋಗಿ ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿಗೊಳಿಸೋಣ,” ಎಂದರು.


ಅವನು ಬಂದ ದಾರಿಯಿಂದಲೇ ಹಿಂದಿರುಗಿಹೋಗುವನು; ಈ ಪಟ್ಟಣಕ್ಕೆ ಕಾಲಿಡನು.


ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು