Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 32:16 - ಕನ್ನಡ ಸತ್ಯವೇದವು C.L. Bible (BSI)

16 ಸತ್ಯಸಂಧತೆ ಕಾಡುಮೇಡೆನ್ನದೆ ಎಲ್ಲೆಡೆ ನೆಲೆಗೊಳ್ಳುವುದು. ಸರ್ವರೂ ಸತ್ಯಸಂಧರಾಗಿರುವುದರಿಂದ ಸಮಾಧಾನ ನೆಲೆಗೊಳ್ಳುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನ್ಯಾಯವು ಅಡವಿಯಲ್ಲಿ ನೆಲೆಗೊಳ್ಳುವುದು, ಧರ್ಮವು ತೋಟದಲ್ಲಿ ಇದ್ದೇ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನ್ಯಾಯವು ಅಡವಿಯಲ್ಲಿಯೂ ನೆಲೆಗೊಳ್ಳುವದು, ಧರ್ಮವು ತೋಟದಲ್ಲಿ ಇದ್ದೇ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನ್ಯಾಯವು ಮರುಭೂಮಿಯಲ್ಲಿ ನೆಲೆಗೊಳ್ಳುವುದು, ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 32:16
17 ತಿಳಿವುಗಳ ಹೋಲಿಕೆ  

ತದನಂತರ ಇಸ್ರಯೇಲಿನವರು ತಮ್ಮ ದೇವರಾದ ಸರ್ವೇಶ್ವರನನ್ನು ಮತ್ತು ಅರಸ ದಾವೀದನನ್ನು ಆಶ್ರಯಿಸುವರು. ಅಂತಿಮ ದಿನಗಳಲ್ಲಿ ಅವರು ಭಯಭಕ್ತಿಯುಳ್ಳವರಾಗಿ ಸರ್ವೇಶ್ವರಸ್ವಾಮಿಯನ್ನೂ ಅವರ ಕೃಪಾಶ್ರಯವನ್ನೂ ಮರೆಹೋಗುವರು.


ಸದ್ಧರ್ಮಿಗಳಾಗಿರುವರು ನಿನ್ನ ಜನರೆಲ್ಲರು ಆಗುವರವರು ನಾಡಿಗೆ ಶಾಶ್ವತ ಬಾಧ್ಯಸ್ಥರು ನನ್ನ ಮಹಿಮೆಗಾಗಿ ನಾ ನೆಟ್ಟ ಸಸಿಗಳವರು ನನ್ನ ಕೈಗಳು ಸೃಷ್ಟಿಸಿದ ಪ್ರಜೆಗಳವರು.


ಎಡವಿ ಬೀಳನವನು, ಎದೆಗುಂದನವನು ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ-ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು.


ಅಲ್ಲಿರುವುದೊಂದು ರಾಜಮಾರ್ಗ ಅದೆನಿಸಿಕೊಳ್ಳುವುದು ಪವಿತ್ರಮಾರ್ಗ ನಡೆಯನು ಅದರೊಳು ಪಾಪಾತ್ಮನು; ಅದಾಗುವುದು ಜನರಿಗೆ ಮೀಸಲು ದಾರಿತಪ್ಪನು ಅಲ್ಲಿ ನಡೆಯುವ ಮೂಢನು.


ಅವರು ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯನ್ನೂ ಊರಬಾಗಿಲ ಬಳಿ ಶತ್ರುಗಳನ್ನು ತಡೆಗಟ್ಟುವವರಿಗೆ ಶೌರ್ಯವನ್ನೂ ನೀಡುವರು.


ಸರ್ವೇಶ್ವರ ಸ್ವಾಮಿ ಉನ್ನತೋನ್ನತರು, ಮೇಲಿನ ಲೋಕದಲ್ಲಿ ಆಸೀನರು. ಅವರು ಜೆರುಸಲೇಮನ್ನು ನ್ಯಾಯನೀತಿಯಿಂದಲೂ ಸತ್ಯಸಂಧತೆಯಿಂದಲೂ ತುಂಬಿಸುವರು.


ಘೋಷಿಸಲಿ ಮರುಭೂಮಿಯೂ ಅದರ ನಗರಗಳೂ ಕೇದಾರಿನವರೂ ಗ್ರಾಮನಿವಾಸಿಗಳೂ ಜಯಘೋಷಮಾಡಲಿ ಸೆಲ ಪಟ್ಟಣದವರೂ ಸಂತೋಷದಿಂದ ಹರ್ಷಧ್ವನಿಗೈಯಲಿ ಆ ಪರ್ವತದ ತುತ್ತತುದಿಗಳಿಂದ.


ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತ್ತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ.


ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನಿಗೆ ಹಿಂದಿರುಗುವೆನು. ಜೆರುಸಲೇಮಿನ ನಡುವೆ ವಾಸಮಾಡುವೆನು. ಆಗ ಜೆರುಸಲೇಮ್ ‘ನಿಷ್ಠಾವಂತ ನಗರ’ ಎನಿಸಿಕೊಳ್ಳುವುದು. ಅದಕ್ಕೆ ಸೇನಾಧೀಶ್ವರನ ಪರ್ವತ, ಪವಿತ್ರ ಪರ್ವತ ಎಂಬ ಹೆಸರು ಬರುವುದು.”


ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ.


ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ನುಡಿ ಹೀಗಿದೆ: “ನಾನು ನನ್ನ ಜನರ ಗುಲಾಮಗಿರಿಯನ್ನು ನೀಗಿಸುವೆನು. ಆಗ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಸರ್ವೇಶ್ವರ ನಿನ್ನನ್ನು ಆಶೀರ್ವದಿಸಲಿ’ ಎಂಬ ಮಾತು ಜುದೇಯ ನಾಡಿನಲ್ಲೂ ಅದರ ನಗರಗಳಲ್ಲೂ ಮತ್ತೆ ಕೇಳಿಬರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು