Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 30:15 - ಕನ್ನಡ ಸತ್ಯವೇದವು C.L. Bible (BSI)

15 ಪರಮಪಾವನವಾಗಿರುವ ಇಸ್ರಯೇಲಿನ ಸರ್ವೇಶ್ವರ ಸ್ವಾಮಿಯಾದ ನಾನು ನಿಮಗೆ ಹೇಳುವುದೇನೆಂದರೆ : “ನೀವು ಪಶ್ಚಾತ್ತಾಪಪಟ್ಟು ನನಗೆ ಅಭಿಮುಖವಾಗಿ ನೆಮ್ಮದಿಯಿಂದಿದ್ದರೆ ಉದ್ಧಾರವಾಗುವಿರಿ. ಶಾಂತಿಸಮಾಧಾನ ಮತ್ತು ಭಕ್ತಿಭರವಸೆಯಲ್ಲೇ ಶಕ್ತಿಯನ್ನು ಪಡೆಯುವಿರಿ.” ಆದರೆ ನೀವು ಒಪ್ಪಿಕೊಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಇಸ್ರಾಯೇಲರ ಸದಮಲಸ್ವಾಮಿಯಾಗಿರುವ ಕರ್ತನಾದ ಯೆಹೋವನು, “ನೀವು ಪರಿವರ್ತನೆಗೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು; ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ, ನೀವು ಒಪ್ಪಿಕೊಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಇಸ್ರಾಯೇಲ್ಯರ ಸದಮಲಸ್ವಾವಿುಯಾಗಿರುವ ಕರ್ತನಾದ ಯೆಹೋವನು - ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವದು; ಶಾಂತರಾಗಿ ಭರವಸದಿಂದಿರುವದೇ ನಿಮಗೆ ಬಲ ಎಂದು ಹೇಳಿದ್ದರೂ ನೀವು ಒಪ್ಪಿಕೊಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನನ್ನ ಒಡೆಯನೂ ದೇವರೂ ಇಸ್ರೇಲಿನ ಪರಿಶುದ್ಧನೂ ಹೇಳುವುದೇನೆಂದರೆ, “ನೀವು ನನ್ನ ಕಡೆಗೆ ತಿರುಗಿಕೊಳ್ಳುವುದಾದರೆ ನೀವು ರಕ್ಷಿಸಲ್ಪಡುವಿರಿ. ನೀವು ತಾಳ್ಮೆಯಿಂದ ನನ್ನ ಮೇಲೆ ಭರವಸೆಯಿಟ್ಟರೆ, ನೀವು ಬಲವನ್ನು ಹೊಂದುವಿರಿ.” ಆದರೆ ಹಾಗೆ ಮಾಡಲು ನಿಮಗೆ ಇಷ್ಟವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಏಕೆಂದರೆ ಇಸ್ರಾಯೇಲಿನ ಪರಿಶುದ್ಧನಾದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು. ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ, ನೀವು ಒಪ್ಪಿಕೊಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 30:15
26 ತಿಳಿವುಗಳ ಹೋಲಿಕೆ  

ಆ ಸತ್ಯಸಂಧತೆಯಿಂದ ಚಿರಶಾಂತಿ ಮತ್ತು ಸುಭದ್ರತೆ ಪರಿಣಮಿಸುವುದು.


“ಓ ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆ.


ಆದರೂ ನಿತ್ಯಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ.


ಅವರು ದೇವರಲ್ಲಿ ನಂಬಿಕೆಯನ್ನಿಟ್ಟು ಸಹಾಯಕ್ಕಾಗಿ ಪ್ರಾರ್ಥಿಸಿದರು. ದೇವರು ಅವರ ಪ್ರಾರ್ಥನೆಯನ್ನು ಆಲಿಸಿ ಹಗ್ರೀಯರನ್ನೂ ಅವರೊಂದಿಗೆ ಒಪ್ಪಂದ ಮಾಡಿಕೊಂಡವರನ್ನೂ ಸೋಲಿಸಿ ಅವರ ಮೇಲೆ ಜಯಹೊಂದುವಂತೆ ಸಹಾಯ ಮಾಡಿದರು.


ಸುದಾನ್ ಹಾಗೂ ಲಿಬಿಯರ ಸೈನ್ಯ ಅಪರಿಮಿತ ರಥಾಶ್ವಬಲಗಳುಳ್ಳ ಮಹಾ ಸೈನ್ಯವಲ್ಲವೇ? ನೀವು ಸರ್ವೇಶ್ವರನನ್ನು ಆಶ್ರಯಿಸಿಕೊಂಡದ್ದರಿಂದ ಅವರು ಅದನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟರು.


ಅವನಿಗಿರುವ ಸಹಾಯ ಮೂಳೆ ಮಾಂಸದ ತಡಿಕೆಯ ಬಲ; ನಮಗಿದ್ದಾರೆ ನಮ್ಮ ದೇವರಾದ ಸರ್ವೇಶ್ವರ. ಅವರೇ ನಮಗೆ ನೆರವಾಗಿ, ಯುದ್ಧಗಳಲ್ಲಿ ನಮ್ಮ ಪರವಾಗಿ ಕಾದಾಡುವರು,” ಎಂದು ಹೇಳಿ ಹುರಿದುಂಬಿಸಿದನು. ಜನರು ಜುದೇಯದ ಅರಸ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.


ಜೋಕೆ, ಸುಮ್ಮನಿರು, ಹೆದರಬೇಡ. ರೆಚೀನ, ಸಿರಿಯ ಮತ್ತು ಪೆಕಹ - ಇವರೆಲ್ಲರ ಕೋಪ ಎಷ್ಟು ಉಗ್ರವಾಗಿದ್ದರೂ ಅದು ಹೊಗೆಯಾಡುವ ಎರಡು ಮೋಟುಕೊಳ್ಳಿಗಳಿಗೆ ಸಮಾನ. ಆದ್ದರಿಂದ ಎದೆಗುಂದಬೇಡ.


ಆದ್ದರಿಂದ ನಿಮ್ಮೊಡನೆ ಮಾತಾಡುವ ದೇವರ ಧ್ವನಿಯನ್ನು ಕಡೆಗಣಿಸಬೇಡಿ. ಭೂಮಿಯ ಮೇಲೆ ತಮಗೆ ಬುದ್ಧಿವಾದ ಹೇಳಿದವರನ್ನು ಕಡೆಗಣಿಸಿದವರು ದಂಡನೆಯಿಂದ ತಪ್ಪಿಸಿಕೊಳ್ಳಲಿಲ್ಲ. ಹೀಗಿರುವಲ್ಲಿ, ನಮಗೆ ಸ್ವರ್ಗಲೋಕದಿಂದ ಬುದ್ಧಿವಾದ ಹೇಳಿದಾತನನ್ನು ಕಡೆಗಣಿಸಿದರೆ ಹೇಗೆತಾನೆ ದಂಡನೆಯಿಂದ ತಪ್ಪಿಸಿಕೊಂಡೇವು?


“ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿಯು ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆನು. ಆದರೆ ನೀವು ಒಪ್ಪಲಿಲ್ಲ.


ಈಜಿಪ್ಟ್ ನೀಡುವ ಸಹಾಯ ನಿರರ್ಥಕ, ನಿಷ್ಫ್ರಯೋಜಕ. ಆದುದರಿಂದಲೇ ಅದಕ್ಕೆ ನಾನು ಜಡವಾಗಿ ಬಿದ್ದಿರುವ ಘಟಸರ್ಪ ಎಂದು ಹೆಸರು ಇಟ್ಟಿದ್ದೇನೆ.


ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ.


‘ಸರ್ವೇಶ್ವರನ ಹೊರೆ’ ಎಂಬ ಮಾತನ್ನು ಎತ್ತಲೇಕೂಡದು. ಪ್ರತಿಯೊಬ್ಬನ ನುಡಿ ಅವನವನಿಗೊಂದು ಹೊರೆ. ಜೀವಸ್ವರೂಪರಾದ ದೇವರ ನುಡಿಗಳನ್ನು ಹೌದು, ನಮ್ಮ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ನುಡಿಗಳನ್ನು ನೀವು ತಲೆಕೆಳಗಾಗಿಸಿದ್ದೀರಿ.


ನಮಗೆ ಅಡ್ಡ ಬರಬೇಡಿ. ನಮ್ಮ ದಾರಿಯಿಂದ ದೂರವಿರಿ. ಇಸ್ರಯೇಲರ ಪರಮಪಾವನ ಸ್ವಾಮಿಯ ವಿಷಯವನ್ನು ನಮ್ಮ ಮುಂದೆ ಎತ್ತಬೇಡಿ,” ಎಂದು ಹೇಳುತ್ತಾರೆ.


ಸರ್ವೇಶ್ವರ ಸ್ವಾಮಿಯೇ ನಿಮ್ಮ ಪರವಾಗಿ ಯುದ್ಧಮಾಡುವರು. ನೀವು ನೆಮ್ಮದಿಯಿಂದಿರಿ,” ಎಂದು ಹೇಳಿದನು.


ಹಿಂತಿರುಗು ನನ್ನ ಮನವೆ, ವಿಶ್ರಾಂತಿ ನೆಲೆಗೆ II ಮಹೋಪಕಾರಗಳನ್ನು ಎಸಗಿಹನು ಪ್ರಭು ನಿನಗೆ II


“ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ : ಬಳಲಿದವರನ್ನು ವಿಶ್ರಮಗೊಳಿಸಿರಿ; ಇದೇ ನಿಮಗೆ ಅನುಕೂಲವಾದ ಉಪಶಮನ” ಎಂದು ದೇವರು ನಿಮಗೆ ಹೇಳಿದಾಗ, ನೀವು ಕೇಳದೆಹೋದಿರಿ.


ನನ್ನ ಜನರು ಶಾಂತಿಸದನಗಳಲ್ಲಿಯೂ ನಿರ್ಭಯವಾದ ನಿಲಯಗಳಲ್ಲಿಯೂ ನೆಮ್ಮದಿಯಾಗಿರುವ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.


ಕೊಟ್ಟವರಾರು ಯಕೋಬನ್ನು ಸುಲಿಗೆಗೆ, ಇಸ್ರಯೇಲನ್ನು ಕೊಳ್ಳೆಗೆ? ಯಾವ ಸರ್ವೇಶ್ವರನಿಗೆ ದ್ರೋಹಮಾಡಿದ್ದೇವೋ ಆತನೇ ಅಲ್ಲವೇ? ಜನರು ಆತನ ಮಾರ್ಗದಲ್ಲಿ ನಡೆಯದೇ, ಆತನ ಉಪದೇಶವನ್ನು ಕೇಳದೆಹೋದರಲ್ಲವೆ?


“ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ.


ಸರ್ವೇಶ್ವರನನ್ನು ಎದುರುನೋಡುವವರು ಹೊಸ ಚೇತನವನ್ನು ಹೊಂದುವರು. ರೆಕ್ಕೆ ಚಾಚಿದ ಹದ್ದುಗಳಂತೆ ಹಾರುವರು ಓಡಿದರೂ ದಣಿಯರು, ನಡೆದರೂ ಬಳಲರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು