ಯೆಶಾಯ 30:10 - ಕನ್ನಡ ಸತ್ಯವೇದವು C.L. Bible (BSI)10 ಇವರು ದಿವ್ಯದರ್ಶಿಗಳನ್ನು ನೋಡಿ : “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ : “ನಯವಾದುದ್ದನ್ನು ನಮಗೆ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದನೆ ಮಾಡಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಇವರು ದಿವ್ಯದರ್ಶಿಗಳಿಗೆ, “ನಿಮಗೆ ದರ್ಶನವಾಗದಿರಲಿ” ಎನ್ನುತ್ತಾರೆ, ಮತ್ತು ಪ್ರವಾದಿಗಳಿಗೆ, “ನಮಗಾಗಿ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ, ನಯವಾದವುಗಳನ್ನು ನಮಗೆ ನುಡಿಯಿರಿ, ಮೋಸವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಇವರು ದಿವ್ಯದರ್ಶಿಗಳನ್ನು ಕುರಿತು - ನಿಮಗೆ ದರ್ಶನವಾಗದಿರಲಿ ಅನ್ನುತ್ತಾರೆ; ಮತ್ತು ಸಾಕ್ಷಾತ್ಕಾರಿಗಳಿಗೆ - ನಮಗಾಗಿ ನ್ಯಾಯವಾದವುಗಳನ್ನು ಸಾಕ್ಷಾತ್ಕರಿಸಬೇಡಿರಿ, ನಯವಾದವುಗಳನ್ನು ನಮಗೆ ನುಡಿಯಿರಿ, ಮಾಯವಾದವುಗಳನ್ನೇ ಸಾಕ್ಷಾತ್ಕರಿಸಿರಿ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಅವರು ಪ್ರವಾದಿಗಳಿಗೆ, “ನಾವು ಮಾಡಬೇಕಿರುವ ಕಾರ್ಯಗಳ ಬಗ್ಗೆ ದೈವೋಕ್ತಿ ನುಡಿಯಬೇಡಿ, ನಮಗೆ ಸತ್ಯವನ್ನು ತಿಳಿಸಬೇಡಿ. ನಮಗೊಪ್ಪುವ ಮನರಂಜನೆಯ ಮಾತುಗಳನ್ನಾಡಿ. ನಮಗೋಸ್ಕರ ಒಳ್ಳೆಯ ಸಂಗತಿಗಳನ್ನೇ ನಿಮ್ಮ ದರ್ಶನಗಳಲ್ಲಿ ನೋಡಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಅವರು ನೋಡುವವರಿಗೆ, “ನೋಡಬೇಡಿರಿ,” ಎಂದು ಪ್ರವಾದಿಗಳಿಗೆ, “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ, ನಮಗೆ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ. ನಯವಾದವುಗಳನ್ನೇ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ. ಅಧ್ಯಾಯವನ್ನು ನೋಡಿ |