Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 29:8 - ಕನ್ನಡ ಸತ್ಯವೇದವು C.L. Bible (BSI)

8 ಸಿಯೋನ್ ಪರ್ವತಕ್ಕೆ ವಿರುದ್ಧವಾಗಿ ಹೋರಾಡುವ ಸಕಲ ರಾಷ್ಟ್ರಗಳ ಸಮುದಾಯದ ಗತಿ ಸ್ವಪ್ನಕಾಣುವವನ ಗತಿಯಾಗುವುದು. ಹಸಿದಿರುವ ಅವನು ಉಣ್ಣುವಂತೆ ಕನಸುಕಂಡರೂ ಎಚ್ಚರವಾದಾಗ ಅವನ ಹೊಟ್ಟೆ ಬರಿದಾಗಿಯೇ ಇರುತ್ತದೆ. ಬಾಯಾರಿದ ಅವನು ಕುಡಿಯುವಂತೆ ಕನಸು ಕಂಡರೂ ಎಚ್ಚರವಾದಾಗ ಅವನ ಹೊಟ್ಟೆ ಬರಿದಾಗಿಯೇ ಇರುತ್ತದೆ. ಬಾಯಾರಿದ ಅವನು ಕುಡಿಯುವಂತೆ ಕನಸು ಕಂಡರೂ ಎಚ್ಚರವಾದಾಗ ಬಳಲಿ ಬಾಯಾರಿಕೆಯಿಂದಲೇ ಇರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಹಸಿದವನು ಕನಸು ಕಂಡು ಆಹಾ, ತಿನ್ನುತ್ತಿದ್ದೇನೆ ಎಂದುಕೊಂಡಂತಾಗುವುದು; ಎಚ್ಚೆತ್ತಾಗ ಅವನ ಹೊಟ್ಟೆ ಬರಿದಾಗಿಯೇ ಇರುವುದು. ಬಾಯಾರಿದವನು ಸ್ವಪ್ನದಲ್ಲಿ ಇಗೋ ನೀರು ಕುಡಿಯುತ್ತಿದ್ದೇನೆ ಎಂದುಕೊಂಡಂತಾಗುವುದು; ನಿದ್ರೆಯಿಂದ ಎಚ್ಚೆತ್ತಾಗ ಬಲಹೀನನಾಗಿದ್ದು, ಬಳಲಿ ನೀರನ್ನು ಬಯಸುತ್ತಾ ಬಾಯಾರಿಕೆಯಿಂದ ಇರುವನು. ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಹೋರಾಡುವ ಸಕಲ ಜನಾಂಗಗಳಿಗೂ ಇದೇ ಗತಿಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಹಸಿದವನು ಕನಸು ಕಂಡು ಆಹಾ, ಉಣ್ಣುತ್ತೇನೆ ಎಂದು ಕೊಂಡಂತಾಗುವದು; ಎಚ್ಚತ್ತಾಗ ಅವನ ಹೊಟ್ಟೆ ಬರಿದೇ. ಬಾಯಾರಿದವನು ಸ್ವಪ್ನದಲ್ಲಿ ಇಗೋ ಕುಡಿಯುತ್ತೇನೆ ಎಂದುಕೊಂಡ ಹಾಗೂ ಆಗುವದು; ನಿದ್ರೆ ತಿಳಿದಾಗ ಬಳಲಿ ನೀರನ್ನು ಬಯಸುವನು. ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಹೋರಾಡುವ ಸಕಲಜನಾಂಗಗಳ ಗುಂಪಿಗೆ ಈ ಗತಿಯಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅದು ಕೂಡಾ ಸೈನ್ಯದವರಿಗೆ ಒಂದು ಕನಸಿನಂತಿರುವದು. ಅವರಿಗೆ ಬೇಕಾದದ್ದು ದೊರಕುವದಿಲ್ಲ. ಹಸಿವೆಯಲ್ಲಿರುವ ಒಬ್ಬನು ಆಹಾರದ ಕನಸು ಕಂಡಂತಿರುವದು. ಅವನು ಎಚ್ಚರವಾದಾಗ ಹಸಿವಿನಿಂದಲೇ ಇರುವನು. ಬಾಯಾರಿದ ಮನುಷ್ಯನು ನೀರಿಗಾಗಿ ಕಾಣುವ ಕನಸಿನಂತಿರುವುದು. ಅವನು ಎಚ್ಚರಗೊಂಡಾಗ ಬಾಯಾರಿಕೆಯು ಇನ್ನೂ ಇರುವದು. ಚೀಯೋನಿಗೆ ವಿರುದ್ಧ ಯುದ್ಧಮಾಡುವ ಆ ಜನಾಂಗಗಳ ಗತಿಯು ಅಂತೆಯೇ ಇರುವದು. ಅವರು ತಾವು ಆಶಿಸುವ ವಸ್ತುಗಳನ್ನು ಹೊಂದುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಹಸಿದ ಮನುಷ್ಯನು ಕನಸು ಕಂಡು ಇಗೋ, ಉಣ್ಣುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚೆತ್ತಾಗ ಪ್ರಾಣ ತುಂಬಿದ ಹಾಗೆಯೂ, ಬಾಯಾರಿದವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚರವಾದಾಗ ಬಲಹೀನನಾಗಿದ್ದು, ಪ್ರಾಣ ಆಶಿಸುವ ಹಾಗೆಯೇ ಚೀಯೋನ್ ಪರ್ವತಕ್ಕೆ ವಿರೋಧವಾಗಿ ಯುದ್ಧಮಾಡುವ ಎಲ್ಲಾ ಜನಾಂಗಗಳ ಸಮೂಹವಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 29:8
10 ತಿಳಿವುಗಳ ಹೋಲಿಕೆ  

ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸ ಮಾಡುತ್ತಾನೆ; ಬಲವಾದ ತೋಳಿನಿಂದ ಚಮಟಿಕೆ ಹಿಡಿದು ಬಡಿದು ವಿಗ್ರಹವನ್ನು ರೂಪಿಸುತ್ತಾನೆ; ಹಸಿದು ಬಳಲುತ್ತಾನೆ, ಬಾಯಾರಿ ಸೊರಗುತ್ತಾನೆ.


ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ I ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ II


ಅಸ್ಸೀರಿಯದ ಅರಸನ ದಂಡಿನಲ್ಲಿದ್ದ ಎಲ್ಲ ಶೂರರನ್ನೂ ನಾಯಕರನ್ನೂ ಅಧಿಪತಿಗಳನ್ನೂ ಸಂಹರಿಸಿದರು; ಆ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದರು.


ಸಫಲವಾಗದು ನಿನ್ನ ವಿರುದ್ಧ ಪ್ರಯೋಗಿಸಿದ ಆಯುಧ ನ್ಯಾಯಸ್ಥಾನದಲ್ಲಿ ನಿನ್ನ ಪ್ರತಿವಾದಿ ಪಡೆವನು ಅಪಜಯ ನನ್ನ ದಾಸನನು ರಕ್ಷಿಸಿ ಆತನಿಗೆ ನೀಡುವೆ ವಿಜಯ” ಇದು ಸರ್ವೇಶ್ವರನ ವಾಕ್ಯ.


ಇಗೋ, ಶುಭಸಂದೇಶವನ್ನು ಸಾರಲು ದೂತನೊಬ್ಬನು ಪರ್ವತದಿಂದ ಇಳಿದು ಬರುತ್ತಿದ್ದಾನೆ! ಶಾಂತಿ ಸಮಾಧಾನವನ್ನು ಘೋಷಿಸಲು ತ್ವರೆಪಡುತ್ತಿದ್ದಾನೆ! ಜುದೇಯ ನಾಡೇ, ನಿನ್ನ ಹಬ್ಬಗಳನ್ನು ಆಚರಿಸು. ನಿನ್ನ ಹರಕೆಗಳನ್ನು ಸಲ್ಲಿಸು. ಆ ದುಷ್ಟ ಶತ್ರು ಇನ್ನೆಂದಿಗೂ ನಿನಗೆ ಮುತ್ತಿಗೆಹಾಕಲಾರನು. ಅವನು ಸಂಪೂರ್ಣವಾಗಿ ನಾಶವಾಗಿದ್ದಾನೆ!


ಸಿಯೋನನ್ನು ದ್ವೇಷಿಸುವ ಜನ I ಹಿಂದಿರುಗಲಿ ಪಡೆದು ಅಪಮಾನ II


ಆಶಾಭಂಗಪಟ್ಟು ಅವಮಾನ ಹೊಂದುವರು ನಿನ್ನ ಮೇಲೆ ಕೋಪಗೊಂಡವರು ನಾಶವಾಗಿ ನಿರ್ಮೂಲವಾಗುವರು ನಿನ್ನ ಸಂಗಡ ವ್ಯಾಜ್ಯವಾಡಿದವರು.


ಹುಡುಕಿದರೂ ಸಿಗರು ನಿನ್ನೊಡನೆ ಹೋರಾಡಿದವರು ನಾಶವಾಗಿ ನಿರ್ನಾಮವಾಗುವರು ನಿನ್ನ ವಿರುದ್ಧ ಯುದ್ಧಮಾಡಿದವರು.


ನಿನೆವೆಯೇ, ನಿನಗೆದುರಾಗಿ ನಿಂತಿಹನು, ನಿನ್ನನ್ನು ಚದುರಿಸುವವನು! ಕಾವಲಿಡು ಕೋಟೆಯ ಸುತ್ತಲು ಪಹರೆಯಿಡು ದಾರಿ ಕಾಯಲು; ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ ನಿಲ್ಲು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು