Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 28:27 - ಕನ್ನಡ ಸತ್ಯವೇದವು C.L. Bible (BSI)

27 ಸದಾಪನ್ನು ಒಕ್ಕುವುದು ಕಣದ ಗುಂಡಿನಿಂದಲ್ಲ, ದೊಣ್ಣೆಯಿಂದಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆದುದರಿಂದ ಅವನು ಜೀರಿಗೆಯನ್ನು ಒಕ್ಕುವುದು ಯಂತ್ರದಿಂದಲ್ಲ ಅಥವಾ ಗಾಡಿಯ ಚಕ್ರದಿಂದಲ್ಲ ಆದರೆ ಕೋಲಿನಿಂದಲೇ; ಅಗಸೆಯನ್ನು ಒಕ್ಕುವುದು ಕೋಲಿನಿಂದಲೇ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದಲೇ, ಕಣದ ಗುಂಡಿನಿಂದಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆದಕಾರಣ ಅವನು ಕರಿಯ ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ; ಜೀರಿಗೆಯನ್ನು ಒಕ್ಕುವದು ಕಣದ ಗುಂಡಿನಿಂದಲ್ಲ, ದೊಣ್ಣೆಯಿಂದಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ವ್ಯವಸಾಯಗಾರನು ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ. ಜೀರಿಗೆಯನ್ನು ಕುದುರೆಯಿಂದ ಗುಂಡನ್ನು ಉರುಳಿಸಿ ನುಚ್ಚುನೂರು ಮಾಡುವನೋ? ಇಲ್ಲ! ಅವನೊಂದು ಸಣ್ಣ ಕೋಲನ್ನು ಉಪಯೋಗಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅಗಸೆಯನ್ನು ತುಳಿಯುವ ಯಂತ್ರದಿಂದ ತುಳಿಯುವುದಿಲ್ಲ. ಜೀರಿಗೆಯನ್ನು ಒಕ್ಕುವುದು ಬಂಡಿಯ ಚಕ್ರ ತಿರುಗಿಸುವುದರಿಂದ ಅಲ್ಲ. ಅಗಸೆಯು ಕೋಲಿನಿಂದಲೂ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದ ಆಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 28:27
10 ತಿಳಿವುಗಳ ಹೋಲಿಕೆ  

ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನೆ ಹೊಟ್ಟು ಧೂಳಾಗಿಸುವೆ ಗುಡ್ಡಗಳನೆ.


ಸರ್ವೇಶ್ವರ ಇಂತೆನ್ನುತ್ತಾರೆ: ದಮಸ್ಕದ ಜನರು ಪದೇಪದೇ ಮಾಡಿರುವ ದ್ರೋಹಗಳಿಗಾಗಿ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ.


ಯಾವ ರಾಷ್ಟ್ರಗಳಿಗೆ ನಿನ್ನನ್ನು ಅಟ್ಟಿದೆನೋ ಆ ರಾಷ್ಟ್ರಗಳನ್ನೆಲ್ಲ ನಿರ್ಮೂಲ ಮಾಡುವೆನು. ನಿನ್ನನ್ನಾದರೋ, ನಿರ್ಮೂಲ ಮಾಡೆನು ಮಿತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡೆನು. ಸರ್ವೇಶ್ವರನಾದ ನನ್ನ ನುಡಿ ಇದು.”


ಹೇ ಸರ್ವೇಶ್ವರಾ, ನಮ್ಮನ್ನು ದಂಡಿಸಿ ಸುಧಾರಿಸಿ ಆದರೆ ಮಿತಿಮೀರಬೇಡ, ಕೋಪದಿಂದ ದಂಡಿಸಬೇಡಿ. ಇಲ್ಲವಾದರೆ ನಾವು ನಶಿಸಿ ನಾಶವಾದೇವು !


ಯೆಹೋವಾಹಾಜನಿಗೆ ಐವತ್ತುಮಂದಿ ರಾಹುತರು, ಹತ್ತು ರಥಗಳು, ಹತ್ತುಸಾವಿರ ಮಂದಿ ಕಾಲಾಳುಗಳು ಮಾತ್ರ ಉಳಿದಿದ್ದರು. ಸಿರಿಯಾದವರ ಅರಸನು ಬೇರೆ ಎಲ್ಲರನ್ನೂ ಸಂಹರಿಸಿ, ಕಣದ ಧೂಳಿಪಟದಂತೆ ಮಾಡಿಬಿಟ್ಟನು.


ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು.


ಜ್ಞಾನಿಯಾದ ಅರಸ ಚದರಿಸಿಬಿಡುವನು ದುಷ್ಟರನ್ನು; ಅವರ ಮೇಲೆ ಉರುಳಿಸುವನು ಕಣದ ಗುಂಡನ್ನು.


ಅವನ ದೇವರು ಇದನ್ನೆಲ್ಲಾ ಸರಿಯಾಗಿ ತಿಳಿಸಿ ಕಲಿಸಿಕೊಡುತ್ತಾರೆ.


ಗೋದಿಯನ್ನು ಒಕ್ಕುವಾಗ ಕುದುರೆಗಳನ್ನು ಹೊಡೆದು ಗುಂಡನ್ನು ಉರುಳಿಸಿ ಕಾಳನ್ನು ಪುಡಿಪುಡಿಮಾಡುವನೋ? ಇಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು