Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 28:22 - ಕನ್ನಡ ಸತ್ಯವೇದವು C.L. Bible (BSI)

22 ಆದಕಾರಣ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಟ್ಟುಬಿಡಿ. ‘ಇಡೀ ನಾಡೇ ನಾಶವಾಗಲಿ’ ಎಂಬ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ತೀರ್ಪನ್ನು ನಾನು ಕೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆದುದರಿಂದ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಡಿರಿ; ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಳಯವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ನುಡಿಯುವುದನ್ನು ಕೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆದಕಾರಣ ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಡಿರಿ; ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಲಯವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ನುಡಿಯುವದನ್ನು ಕೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಈಗ ನೀವು ಆ ವಿಷಯಗಳೊಂದಿಗೆ ಯುದ್ಧ ಮಾಡಬಾರದು. ನೀವು ಹಾಗೆ ಮಾಡಿದ್ದಲ್ಲಿ ನಿಮ್ಮ ಸುತ್ತಲಿರುವ ಹಗ್ಗವು ಇನ್ನೂ ಬಿಗಿಯಾಗುವದು. ನಾನು ಕೇಳಿರುವ ಮಾತುಗಳು ಬದಲಾಗವು. ಯಾಕೆಂದರೆ ಅವು ಸರ್ವಶಕ್ತನಾದ ಯೆಹೋವನ ಮಾತುಗಳು. ಆತನು ಪ್ರಪಂಚವನ್ನು ಆಳುವಾತನು. ಆ ಸಂಗತಿಗಳೆಲ್ಲವೂ ಸಂಭವಿಸುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಹೀಗಿರುವುದರಿಂದ ನಿಮ್ಮ ಬಂಧನಗಳು ಬಿಗಿಯಾಗದಂತೆ ಹಾಸ್ಯಗಾರರಾಗಬೇಡಿರಿ. ಸರ್ವಶಕ್ತ ಆಗಿರುವ ಕರ್ತ ಯೆಹೋವ ದೇವರ ಕಡೆಯಿಂದ ಭೂಮಂಡಲದಲ್ಲೆಲ್ಲಾ ಸಂಹಾರ ತರಲು ನಿರ್ಣಯಿಸಿದೆ, ಎಂಬ ತೀರ್ಪನ್ನು ನಾನು ಕೇಳಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 28:22
28 ತಿಳಿವುಗಳ ಹೋಲಿಕೆ  

ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು.


ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು.


ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಕೂಡ ಅದೇ ರೀತಿ ಅಣಕಿಸಿದರು.


ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ


“ನನ್ನ ದ್ರೋಹಗಳನ್ನು ನನಗೆ ಬಿಗಿದಿದ್ದಾನೆ ನೊಗದ ಕಣ್ಣುಗಳಂತೆ. ಅವು ಹುರಿಗೊಂಡು, ಸುತ್ತಿಕೊಂಡು ಕುತ್ತಿಗೆಗೆ, ನನ್ನ ಶಕ್ತಿಯನ್ನು ಹೀರುತ್ತಿವೆ. ಸಿಕ್ಕಿಸಿದನಲ್ಲಾ ಸ್ವಾಮಿ, ನನ್ನಿಂದ ಎದುರಿಸಲಾಗದಂಥವರ ಕೈಗೆ !


ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಬೇಡಿಹಾಕಿಸಿ, ಬಾಬಿಲೋನಿಗೆ ಸಾಗಿಸಿದನು.


ಈ ನಾಡೆಲ್ಲ ಹಾಳಾಗಿ ಇದನ್ನು ನೋಡುವವರು ನಿಬ್ಬೆರಗಾಗುವರು. ಇದರ ಜನರು ಎಪ್ಪತ್ತು ವರ್ಷ ಕಾಲ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ಇರುವರು.


ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ. ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ? ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ.


ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ.


ಚೂರುಚೂರುಗೈದನು ಕಂಚಿನ ಕದಗಳನು I ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು II


ಆದರೂ ಅವರು ದೇವಸಂದೇಶಕರನ್ನು ಗೇಲಿಮಾಡಿದರು. ದೇವರ ಮಾತುಗಳನ್ನು ತುಚ್ಛೀಕರಿಸಿ ಅವರ ಪ್ರವಾದಿಗಳನ್ನು ಹೀಯಾಳಿಸಿದರು. ಆದ್ದರಿಂದ ದೇವಕೋಪಾಗ್ನಿ ಅವರ ಪ್ರಜೆಯ ಮೇಲೆ ಉರಿಯತೊಡಗಿತು. ಅದರ ತಾಪ ಆರಿಹೋಗಲೇ ಇಲ್ಲ.


ಆದುದರಿಂದ ಅಸ್ಸೀರಿಯದ ಅರಸನ ಸೈನ್ಯಾಧಿಪತಿಗಳನ್ನು ಅವನ ಮೇಲೆ ಬರಮಾಡಿದರು. ಆ ಸೇನಾಧಿಪತಿಗಳು ಮನಸ್ಸೆಯನ್ನು ಹಿಡಿದು ಅವನನ್ನು ಬಂಧಿಸಿ, ಬೇಡಿಹಾಕಿ, ಬಾಬಿಲೋನಿಗೆ ಒಯ್ದರು.


ದೂತರು ಎಫ್ರಯಿಮ್, ಮನಸ್ಸೆ, ಜೆಬುಲೂನ್ ಪ್ರಾಂತಗಳಲ್ಲಿ ಪಟ್ಟಣದಿಂದ ಪಟ್ಟಣಕ್ಕೆ ಹೋದರು. ಆದರೆ ಜನರು ಅವರನ್ನು ಕಂಡು ನಕ್ಕು ಗೇಲಿಮಾಡಿದರು.


ಆದರೆ ಸರ್ವೇಶ್ವರನಾದ ನಾನು ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ನನ್ನ ಗುರಿಯನ್ನು ಸಾಧಿಸಿದ ಮೇಲೆ ಆ ಅಸ್ಸೀರಿಯದ ಅರಸನನ್ನು ಅವನ ದುರಹಂಕಾರಕ್ಕಾಗಿ, ಗರ್ವದ ಭಾವನೆಗಳಿಗಾಗಿ ಸರಿಯಾಗಿ ದಂಡಿಸುವೆನು.


ನನ್ನ ಮಾತಿಗೆ ಕಿವಿಗೊಡಿ, ನಾನು ಹೇಳುವುದನ್ನು ಗಮನವಿಟ್ಟು ಆಲಿಸಿ.


ಯೆಹೂದಿ ಬರವಣಿಗೆಯ ಮೂರು ನಾಲ್ಕು ಪುಟಗಳನ್ನು ಓದಿದ ಹಾಗೆಲ್ಲಾ ಅರಸನು ಆಯಾ ಭಾಗಗಳನ್ನು ಚೂರಿಯಿಂದ ಕತ್ತರಿಸಿ ಸುರುಳಿ ಸಂಪೂರ್ಣವಾಗಿ ಸುಟ್ಟುಹೋಗುವ ತನಕ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಹಾಕುತ್ತಾ ಬಂದನು.


ಸರ್ವೇಶ್ವರನ ವಿರುದ್ಧ ಮಾಡಬಲ್ಲಿರಾ ನೀವು ಕುಯುಕ್ತಿ? ಮರಳಿ ತಲೆಯೆತ್ತದಂತೆ ನಾಶಮಾಡುವನು ನಿಮ್ಮನು ಪೂರ್ತಿಯಾಗಿ.


ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಸಿ, “ನೀವು ಹೋಗಿ ಈ ದೇಶದಲ್ಲೇ ನಿಮ್ಮ ದೇವರಿಗೆ ಬಲಿಯನ್ನೊಪ್ಪಿಸಬಹುದು,” ಎಂದನು.


ಕುಚೋದ್ಯನಿಗೆ ಕಾದಿದೆ ನ್ಯಾಯತೀರ್ಪು; ದಡ್ಡನ ಬೆನ್ನಿಗೆ ಬೀಳಲಿದೆ ದೊಣ್ಣೆಪೆಟ್ಟು.


ಎಷ್ಟು ಗದರಿಸಿದರೂ ತಗ್ಗದ ಹಟಮಾರಿ ಫಕ್ಕನೆ ಬೀಳುವನು, ಮತ್ತೆ ಏಳನು.


ನಾನು ನಿನ್ನನ್ನು ದಂಡಿಸುವ ಕಾಲದಲ್ಲಿ ಮನಸ್ಸನ್ನು ಗಟ್ಟಿಮಾಡಿಕೊಂಡಿರುವೆಯಾ? ಕೈಗಳನ್ನು ಬಲಪಡಿಸಿಕೊಂಡಿರುವೆಯಾ? ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ. ಅಂತೆಯೇ ನಡೆಸುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು