Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 28:19 - ಕನ್ನಡ ಸತ್ಯವೇದವು C.L. Bible (BSI)

19 ಅದು ಹಾದುಹೋಗುವಾಗಲೆಲ್ಲಾ ನಿಮ್ಮನ್ನು ಹಿಡಿದುಬಿಡುವುದು. ಪ್ರತಿದಿನವೂ ಹಗಲೂ ರಾತ್ರಿ ಅದು ಹಾದುಹೋಗುವುದು. ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು; ಹೊತ್ತಾರೆಯಿಂದ ಹೊತ್ತಾರೆಗೆ ಹಗಲು ರಾತ್ರಿಯೂ ಹಾದುಹೋಗುವುದು; ಆಗ ಯೆಹೋವನ ಮಾತನ್ನು ಗ್ರಹಿಸಿಕೊಳ್ಳುವುದರಿಂದ ಭಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವದು; ಬೆಳಬೆಳಗೂ ಹಗಲುರಾತ್ರಿಯೂ ಅದು ಹಾದುಹೋಗುವದು; ಆಗ ಯೆಹೋವನ ಮಾತನ್ನು ಗ್ರಹಿಸಿಕೊಳ್ಳುವದು ಬರೀ ಭಯವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಆತನು ಬಂದು ನಿಮ್ಮನ್ನು ತೆಗೆದುಕೊಂಡು ಹೋಗುವನು. ನಿಮಗೆ ದೊರಕುವ ಶಿಕ್ಷೆ ಬಹು ಭಯಂಕರವಾದದ್ದು. ಅದರ ಬಗ್ಗೆ ನೀವು ಕೇಳಿದ ಕೂಡಲೇ ಚಿಂತಿಸಲಾರಂಭಿಸುವಿರಿ. ಅದು ಮುಂಜಾನೆ ಬಂದು ರಾತ್ರಿ ಬಹು ಹೊತ್ತಿನ ತನಕ ಇರುವದು. “ಆಗ ನೀವು ಈ ಕಥೆಯನ್ನು ಅರ್ಥಮಾಡಿಕೊಳ್ಳುವಿರಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು. ಏಕೆಂದರೆ ಅದು ಹೊತ್ತಾರೆಯಿಂದ ಹೊತ್ತಾರೆಗೆ, ಹಗಲು ರಾತ್ರಿಯೂ ಹಾದುಹೋಗುವುದು.” ಆಗ ದೇವರ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 28:19
26 ತಿಳಿವುಗಳ ಹೋಲಿಕೆ  

ಇದಕೇಳಿ ನಡುನಡುಗಿತು ನನ್ನ ಒಡಲು ಅದುರಿದವು ಆ ಶಬ್ದಕ್ಕೆ ನನ್ನ ತುಟಿಗಳು ಕೊಳೆತಂತಾದವು ನನ್ನೆಲುಬುಗಳು ನಿಂತಲ್ಲೇ ತತ್ತರಿಸಿದವು ನನ್ನ ಕಾಲುಗಳು ಆಪತ್ತು ಬಂದೊದಗುವುದು ನಮ್ಮನ್ನು ಆಕ್ರಮಿಸುವವರಿಗೆ ಕಾದಿರುವೆ ನಾನು ಸಹನಶೀಲನಾಗಿ ಅಂದಿನವರೆಗೆ.


ದಾನಿಯೇಲನಾದ ನಾನು ಮೂರ್ಛೆಗೊಂಡೆ. ಕೆಲವು ದಿವಸ ಕಾಯಿಲೆ ಬಿದ್ದೆ. ಆಮೇಲೆ ಎದ್ದು ರಾಜಕಾರ್ಯವನ್ನು ಆರಂಭಿಸಿದೆ. ಆದರೂ ಆ ಕನಸಿಗೆ ಬೆಚ್ಚಿಬೆರಗಾದೆ. ಅದರ ಅರ್ಥವನ್ನು ಗ್ರಹಿಸಿಕೊಳ್ಳಲಾಗಲಿಲ್ಲ.


ಇಲ್ಲಿಗೆ ಆ ಕನಸಿನ ವಿವರ ಮುಗಿಯಿತು. ದಾನಿಯೇಲನಾದ ನಾನು ನನ್ನ ಆಲೋಚನೆಗಳಿಂದ ಬಹಳ ಕಳವಳಗೊಂಡೆ. ನನ್ನ ಮುಖ ಬಾಡಿತು. ಆದರೂ ನಡೆದ ಸಂಗತಿಯನ್ನು ಮನಸ್ಸಿನಲ್ಲೇ ಇಟ್ಟುಕೊಂಡೆ.


‘ಜುದೇಯದ ಅರಸರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನ ಸಂದೇಶವನ್ನು ಕೇಳಿರಿ. ಇದು ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ: ಈ ಸ್ಥಳದ ಮೇಲೆ ನಾನು ಕೇಡನ್ನು ಬರಮಾಡುವೆನು. ಅದರ ಸುದ್ದಿಯನ್ನು ಕೇಳುವವರ ಕಿವಿಗಳೂ ನಿಮಿರುವುವು.


ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು.


ಅವನಿಗೆ ಹೀಗೆಂದು ಹೇಳಿ : ‘ಈ ದಿನ ನಮಗೆ ಮಹಾಸಂಕಟದ ದಿನ, ದಂಡನೆಯ ದಿನ, ನಿಂದೆ ಅವಮಾನದ ದಿನ. ಹೆರಿಗೆಯ ಕಾಲ ಬಂದಿದೆ, ಆದರೆ ಹೆರುವುದಕ್ಕೆ ಶಕ್ತಿ ಸಾಲದು.


ಬಳಿಕ, ಹಿಲ್ಕೀಯನ ಮಗನೂ ರಾಜ ಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, ಅರಸ ಹಿಜ್ಕೀಯನ ಬಳಿಗೆ ಬಂದು, ಅವನಿಗೆ ಆ ಸೇನಾಪತಿಯ ಮಾತುಗಳನ್ನು ತಿಳಿಸಿದರು.


ಇಗೋ, ವೀರರು ಹೊರಗೆ ಹಾಹಾಕಾರ ಮಾಡುತಿಹರು. ಶಾಂತಿದೂತರಾದ ರಾಯಭಾರಿಗಳು ಘೋರವಾಗಿ ಅಳುತಿಹರು.


ಸರ್ವೇಶ್ವರ, ತನ್ನ ದಾಸರಾದ ಪ್ರವಾದಿಗಳ ಮುಖಾಂತರ ಮುಂತಿಳಿಸಿದ ಪ್ರಕಾರ ಜುದೇಯ ರಾಜ್ಯವನ್ನು ಹಾಳುಮಾಡುವುದಕ್ಕಾಗಿ ಬಾಬಿಲೋನಿಯ, ಸಿರಿಯ, ಮೋಬಾವ, ಅಮ್ಮೋನ್ ದೇಶೀಯರಾದ ಸುಲಿಗೆಗಾರರನ್ನು ಕಳುಹಿಸಿದರು.


ಸುತ್ತಲಿನ ಅಪಾಯಗಳು ಅವನನ್ನು ಹೆದರಿಸುತ್ತವೆ ಅವನ ಹಿಮ್ಮಡಿ ತುಳಿಯುತ್ತಾ ಅವು ಬೆನ್ನು ಹತ್ತುತ್ತವೆ.


ಆದ್ದರಿಂದ ಇಸ್ರಯೇಲ್ ದೇವರಾದ ಸರ್ವೇಶ್ವರ ಎಂಬ ನಾನು ಜೆರುಸಲೇಮಿನವರ ಮೇಲೂ ಜುದೇಯದವರ ಮೇಲೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವರ ಎರಡು ಕಿವಿಗಳೂ ಬಿರಿಯುವುವು.


ಅರಸ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ, ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು ಜುದೇಯ ಪ್ರಾಂತ್ಯದ ಸುಭದ್ರ ಪಟ್ಟಣಗಳನ್ನೆಲ್ಲಾ ಸ್ವಾಧೀನಮಾಡಿಕೊಂಡನು.


ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು.


ಆಗ ಸರ್ವೇಶ್ವರ ಸಮುವೇಲನಿಗೆ, “ನಾನು ಇಸ್ರಯೇಲರಲ್ಲಿ ಒಂದು ವಿಶೇಷಕಾರ್ಯವನ್ನು ನಡಿಸುವೆನು. ಈ ವಿಷಯವನ್ನು ಕೇಳುವವರ ಕಿವಿಗಳೆರಡೂ ನಿಮಿರುವುವು!


ನನ್ನ ಮನದೊಳು ಸರ್ವಶಕ್ತನ ಬಾಣಗಳು ನಾಟಿವೆ ನನ್ನ ಅಂತರಂಗದೊಳು ಅವುಗಳ ವಿಷ ಹೀರಲಾಗುತ್ತಿದೆ ದೇವರಿಂದ ಬಂದ ಆತಂಕಗಳು ನನ್ನನು ಸುತ್ತುವರೆದಿವೆ.


ಅಂಥವರಿಗೆ ಕಾರ್ಗತ್ತಲೇ ಬೆಳಗಿನ ಜಾವ ಕಾರ್ಗತ್ತಲಿನ ಅಪಾಯಗಳೇ ಅವರಿಗೆ ಪರಿಚಯ.


ನನ್ನ ಹೃದಯವು ನೊಂದು ಬೆಂದಿದೆ I ಮರಣ ಭಯವು ಆವರಿಸಿಕೊಂಡಿದೆ II


ಬಾಲ್ಯದಿಂದಲು ಬಾಧಿತನು, ಮೃತಪ್ರಾಯನು I ನಿನ್ನ ದಂಡನೆ ಸಹಿಸಿ ಸೊರಗಿದವನು ನಾನು II


ಜೆರುಸಲೇಮಿನ ಜನರು : “ಈ ಸುದ್ದಿಯನ್ನು ಕೇಳಿದಾಗ ನಮ್ಮ ಕೈಗಳು ಜೋಲುಬಿದ್ದುವು. ಪ್ರಸವವೇದನೆಯಂಥ ಯಾತನೆ ನಮ್ಮನ್ನು ಆವರಿಸಿತು.


ಸುತ್ತಮುತ್ತಲೂ ದಿಗಿಲು ಹುಟ್ಟಿಸುವ ನನ್ನ ಹಗೆಗಳನ್ನೆ ಕರೆಸಿದೆಯಲ್ಲಾ ಹಬ್ಬಕ್ಕೋ ಎಂಬಂತೆ ! ಸರ್ವೇಶ್ವರನ ಪ್ರಕೋಪದ ದಿನದಂದು ತಪ್ಪಿಸಿಕೊಳ್ಳಲಿಲ್ಲ ಯಾರೂ; ಉಳಿಯಲಿಲ್ಲ ಯಾರೂ. ಶತ್ರು ಸಂಹರಿಸಿಬಿಟ್ಟನಲ್ಲಾ ನಾನು ಸಾಕಿ ಆರೈಕೆ ಮಾಡಿದವರನ್ನೂ !


ಅದನು ಹಿಡಿಯಬಹುದೆಂಬ ನಂಬಿಕೆ ವ್ಯರ್ಥ ಹಿಡಿಯಬಂದವನು ನೋಡಿದ್ದೇ ಬಿದ್ದುಹೋದ.


ಜುದೇಯದಲ್ಲಿ ಸಾರಿರಿ; ಜೆರುಸಲೇಮಿನಲ್ಲಿ ಪ್ರಕಟಿಸಿರಿ. ನಾಡಿನಲ್ಲೆಲ್ಲ ಕೊಂಬೂದುತ್ತಾ ಆಜ್ಞಾಪಿಸಿರಿ. ‘ಕೂಡಿಬನ್ನಿ, ಕೋಟೆಕೊತ್ತಲಗಳುಳ್ಳ ಊರುಗಳನ್ನು ಸೇರಿಕೊಳ್ಳೋಣ’ ಎಂದು ಕೂಗಿ ಹೇಳಿರಿ.


ಸರ್ವೇಶ್ವರ ಸ್ವಾಮಿ ಹೀಗೆಂದರು - “ಆ ದಿನದಂದು ಅರಸರು ಎದೆಗುಂದುವರು, ಅಧಿಪತಿಗಳ ಹೃದಯ ಕುಗ್ಗುವುದು. ಯಾಜಕರು ಸ್ತಬ್ಧರಾಗುವರು; ಪ್ರವಾದಿಗಳು ನಿಬ್ಬೆರಗಾಗುವರು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು