Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 28:15 - ಕನ್ನಡ ಸತ್ಯವೇದವು C.L. Bible (BSI)

15 ನೀವು ನಿಮ್ಮನಿಮ್ಮೊಳಗೆ : “ಮೃತ್ಯುವಿನೊಂದಿಗೆ ಮುಚ್ಚಳಿಕೆ, ಪಾತಾಳದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾವಿಪತ್ತು ನಾಡನ್ನು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು. ನಾವು ಅಸತ್ಯವನ್ನು ಆಶ್ರಯಿಸಿಕೊಂಡಿದ್ದೇವೆ. ಮೋಸವನ್ನು ಮರೆಹೊಕ್ಕಿದ್ದೇವೆ” ಎಂದು ಕೊಚ್ಚಿಕೊಳ್ಳುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನೀವು ನಿಮ್ಮೊಳಗೆ, “ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು; ನಾವು ಸುಳ್ಳನ್ನೇ ಆಶ್ರಯಿಸಿಕೊಂಡು ಮೋಸದಲ್ಲಿ ಮೊರೆಹೊಕ್ಕಿದ್ದೇವೆ” ಎಂದು ಅಂದುಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನೀವು ನಿಮ್ಮೊಳಗೆ - ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು; ನಾವು ಅಸತ್ಯವನ್ನು ಆಶ್ರಯಿಸಿಕೊಂಡು ಮೋಸವನ್ನು ಮರೆ ಹೊಕ್ಕಿದ್ದೇವಲ್ಲಾ ಅಂದುಕೊಂಡದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನೀವು, “ನಾವು ಮರಣದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಪಾತಾಳದೊಂದಿಗೆ ಒಪ್ಪಂದ ಮಾಡಿದ್ದೇವೆ. ಆದ್ದರಿಂದ ನಾವು ಶಿಕ್ಷಿಸಲ್ಪಡುವದಿಲ್ಲ. ಶಿಕ್ಷೆಯು ಹಾದುಹೋಗುವಾಗ ಅದು ನಮಗೇನೂ ಹಾನಿ ಮಾಡುವದಿಲ್ಲ. ನಾವು ನಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತೇವೆ” ಎಂದು ಹೇಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 “ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ. ವಿಪರೀತವಾದ ಶಿಕ್ಷೆಯು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು; ನಮ್ಮ ಅಸತ್ಯವನ್ನು ಆಶ್ರಯವಾಗಿ ಮಾಡಿಕೊಂಡು, ಮೋಸದಲ್ಲಿ ಅಡಗಿಕೊಂಡಿದ್ದೇವೆ,” ಎನ್ನುತ್ತೀರಲ್ಲಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 28:15
37 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಇಂತೆನ್ನುತ್ತಾರೆ: “ಜುದೇಯದ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಏಕೆಂದರೆ ಅವರು ನನ್ನ ಧರ್ಮಶಾಸ್ತ್ರವನ್ನು ತೃಣೀಕರಿಸಿದ್ದಾರೆ. ನನ್ನ ವಿಧಿನಿಯಮಗಳನ್ನು ಮೀರಿದ್ದಾರೆ. ಅವರ ಪೂರ್ವಜರು ಆರಾಧಿಸಿದ ಸುಳ್ಳುದೇವತೆಗಳನ್ನು ಪೂಜಿಸುತ್ತಾ ದಾರಿತಪ್ಪಿದ್ದಾರೆ.


ಆ ದಿನಗಳಲ್ಲಿ ನನ್ನ ಜನರಿಗೆ ಹಾನಿಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು.


ಅವನನ್ನು ಎದುರಿಸುವ ದೊಡ್ಡ ದೊಡ್ಡ ಸೈನ್ಯಗಳು ಹಾಗು ದೇವರ ಪ್ರಧಾನ ಯಾಜಕನು ಅವನ ಸೈನ್ಯ ಪ್ರವಾಹಕ್ಕೆ ಸಿಕ್ಕಿ ಅದರಲ್ಲಿ ಮುಳುಗಿ ನಾಶವಾಗುವರು.


“ನಾನು ಎದೆಗುಂದಿಸದ ಶಿಷ್ಯನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನನ್ನು ಪ್ರೋತ್ಸಾಹಿಸಿದ್ದೀರಿ.


ಮೃತ್ಯುವಿನೊಂದಿಗೆ ನೀವು ಮಾಡಿಕೊಂಡ ಒಪ್ಪಂದ ಬಿದ್ದುಹೋಗುವುದು. ಆ ಮಹಾವಿಪತ್ತು ನಾಡನ್ನು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು.


“ಆಗ ದೀಪವನ್ನು ಹಿಡಿದುಕೊಂಡು ಜೆರುಸಲೇಮನ್ನೆಲ್ಲಾ ಹುಡುಕಿಬಿಡುವೆನು. ‘ಸರ್ವೇಶ್ವರ ಮೇಲನ್ನಾಗಲಿ, ಕೇಡನ್ನಾಗಲಿ ಏನನ್ನೂ ಮಾಡುವುದಿಲ್ಲ’ ಎಂದುಕೊಳ್ಳುವ ಮದ್ಯದ ಮಡ್ಡಿಯಂಥ ಜಡ ಮನಸ್ಕರನ್ನು ದಂಡಿಸುವೆನು.


ನಿರರ್ಥಕ ವಿಗ್ರಹಗಳನಾರಾಧಿಪ ಜನರು ತೊರೆದಿಹರು ಹಾರ್ದಿಕ ಭಕ್ತಿಯನು


‘ಇಸ್ರಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯ ದರ್ಶನಗಳನ್ನು ನೀವು ಕಂಡು ಜೆರುಸಲೇಮಿನ ಬಗ್ಗೆ ಪ್ರವಾದಿಸಿದ್ದೀರಲ್ಲವೆ? ಗೋಡೆ ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು; ಇದು ಸರ್ವೇಶ್ವರನಾದ ದೇವರ ನುಡಿ.’


ಆಗ ದೇವರು ನನಗೆ, “ನರಪುತ್ರನೇ, ಇಸ್ರಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಸರ್ವೇಶ್ವರ ನಮ್ಮನ್ನು ನೋಡನು, ಸರ್ವೇಶ್ವರ ನಾಡನ್ನು ತೊರೆದುಬಿಟ್ಟಿದ್ದಾನೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.


ನಾವು, ನಮ್ಮ ಪೂರ್ವಜರು, ನಮ್ಮ ಅರಸರು, ಅಧಿಕಾರಿಗಳು ಜುದೇಯದ ಊರುಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಮಾಡಿದಂತೆ ಗಗನದೊಡತಿಯಾದ ದೇವತೆಗೆ ಧೂಪಾರತಿ ಎತ್ತುತ್ತೇವೆ. ಪಾನನೈವೇದ್ಯವನ್ನು ಸುರಿಯುತ್ತೇವೆ. ನಾವು ಬಾಯಿಬಿಟ್ಟು ಹೇಳಿದ ಈ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುತ್ತೇವೆ. ಏಕೆಂದರೆ ಹಾಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬ ಉಂಡು ಸುಖಪಡುತ್ತಿದ್ದೆವು.


“ಹೇ ಸರ್ವೇಶ್ವರಾ, ನನ್ನ ಶಕ್ತಿಯೇ, ನನ್ನ ಕೋಟೆಯೇ, ಆಪತ್ತು ಕಾಲದಲ್ಲಿ ನನ್ನ ಆಶ್ರಯವೇ, ಜಗದ ಕಟ್ಟಕಡೆಯಿಂದ ಜನಾಂಗಗಳು ನಿಮ್ಮ ಸಮ್ಮುಖಕ್ಕೆ ಬರುವುವು. ‘ನಮ್ಮ ಪೂರ್ವಜರು ಪಾರಂಪರ್ಯವಾಗಿ ಪಡೆದವುಗಳು ನಿಶ್ಚಯವಾಗಿ ಅಬದ್ಧವಾದವುಗಳು, ಮಾಯರೂಪವಾದವುಗಳು ಹಾಗು ನಿಷ್ಪ್ರಯೋಜನವಾದವುಗಳು.


ಆಗ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ಈ ಜನರಿಗೆ, ‘ಖಡ್ಗ ನಿಮ್ಮ ಕಣ್ಣಿಗೂ ಕಾಣಿಸದು, ಕ್ಷಾಮ ನಿಮಗೆಂದಿಗೂ ಬಂದೊದಗದು. ಸರ್ವೇಶ್ವರ ಈ ನಾಡಿನಲ್ಲೆ ನಿಮಗೆ ಚಿರಶಾಂತಿ ಸಮಾಧಾನವನ್ನು ಕೊಡುವರು’ ಎಂದು ಪ್ರವಾದಿಗಳೇ ನುಡಿಯುತ್ತಿದ್ದಾರೆ,” ಎಂದು ಹೇಳಿದೆನು.


ಪ್ರವಾದಿಗಳೇ ಸುಳ್ಳು ಪ್ರವಾದನೆಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”


ತುಂಬಿತುಳುಕಿ ಕಂಠದವರೆಗೆ ಏರುವ ತೊರೆಯಂತಿದೆ ಆತನ ಶ್ವಾಸ ಆತನ ಕೈಯಲ್ಲಿದೆ ಜನಾಂಗಗಳನ್ನು ಜಾಲಿಸುವ ಜರಡಿಯ ವಿನಾಶ ಜನರ ಕಟಿಬಾಯಲ್ಲಿರುವುದು ದಾರಿ ತಪ್ಪಿಸುವ ಕಡಿವಾಣದ ಪಾಶ.


ಇವರು ದಿವ್ಯದರ್ಶಿಗಳನ್ನು ನೋಡಿ : “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ : “ನಯವಾದುದ್ದನ್ನು ನಮಗೆ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದನೆ ಮಾಡಿರಿ.


ತಮ್ಮ ಆಲೋಚನೆಯನ್ನು ಸರ್ವೇಶ್ವರ ಸ್ವಾಮಿಯಿಂದ ಬಚ್ಚಿಡುವುದಕ್ಕಾಗಿ ಒಳಸಂಚುಮಾಡುವವರಿಗೆ ಧಿಕ್ಕಾರ ! ಇವರು, “ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ಗಮನಿಸಿಯಾರು?” ಎಂದುಕೊಂಡು ಕತ್ತಲಲ್ಲೇ ತಮ್ಮ ಕೃತ್ಯಗಳನ್ನು ನಡೆಸುತ್ತಾರೆ.


ಇದೋ, ಸರ್ವೇಶ್ವರ ಸ್ವಾಮಿ ಬಳಿ ಮಹಾ ಬಲಿಷ್ಠನೊಬ್ಬನು ಇದ್ದಾನೆ. ಆತನು ರಭಸವಾಗಿರುವ ಕಲ್ಮಳೆಯಂತೆ, ವಿನಾಶಕರವಾದ ಬಿರುಗಾಳಿಯಂತೆ, ಕೊಚ್ಚಿ ಹರಿಯುವ ತುಂಬು ಪ್ರವಾಹದಂತೆ ಬರುವನು. ಆ ನಗರ ನೆಲಕ್ಕೆ ಕುಸಿದುಬಿದ್ದು ನೆಲಸಮವಾಗುವಂತೆ ಮಾಡುವನು.


ಆತ್ಮವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಾಗೆಯೇ ತಮ್ಮ ಮರಣ ದಿನವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಸಾವೆಂಬ ಸಮರಕ್ಕೆ ವಿರಾಮವಿಲ್ಲ; ಅಂತೆಯೇ ದುಷ್ಟತನದ ಮೂಲಕ ಅದರಿಂದ ತಪ್ಪಿಸಿಕೊಳ್ಳಲಾಗದು.


ಹೊಲದ ಕಲ್ಲುಬಂಡೆಗಳೊಡನೆ ಒಪ್ಪಂದಮಾಡಿಕೊಳ್ಳುವೆ ಆ ಕಾಡುಪ್ರಾಣಿಗಳೊಂದಿಗೆ ನೆಮ್ಮದಿಯಿಂದ ಬಾಳುವೆ.


ನನ್ನ ಜನರನ್ನೋ ಬಾಧಿಸುತ್ತಿರುವವರು ಹುಡುಗರು; ಆಳುತ್ತಿರುವವರೋ ಹೆಂಗಳೆಯರು. ಎಲೈ ನನ್ನ ಜನರೇ, ನಿಮ್ಮ ನಾಯಕರು ನಿಮ್ಮನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ನಿಮ್ಮ ಮಾರ್ಗವನ್ನು ವಕ್ರಗೊಳಿಸುತ್ತಿದ್ದಾರೆ.


ಇವರು ದಂಗೆ ಏಳುವ ಜನರು. ಸುಳ್ಳಾಡುವ ಪೀಳಿಗೆ, ಸರ್ವೇಶ್ವರನ ಉಪದೇಶಕ್ಕೆ ಕಿವಿಗೊಡದ ಸಂತಾನ,


ಅಂಥವನು ಮುಕ್ಕುವುದು ಬೂದಿಯನ್ನೇ; ಅವನ ಹೃದಯ ಮೋಸಗೊಂಡು ಅವನನ್ನು ತಪ್ಪುದಾರಿಗೆ ಎಳೆದಿದೆ. ಎಂದೇ, ಅವನು ಅಂಗೈ ಹುಣ್ಣಿನಂತಿರುವ ಆ ಸುಳ್ಳನ್ನೂ ಅರಿಯದೆ ಇದ್ದಾನೆ; ತನ್ನನ್ನೇ ರಕ್ಷಿಸಿಕೊಳ್ಳಲು ಆಗದೆ ಇದ್ದಾನೆ.


ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾದುವು, ನಿಮ್ಮ ಬೆರಳುಗಳು ಅಕ್ರಮದಿಂದ ಮಲಿನವಾಗಿವೆ, ನಿಮ್ಮ ತುಟಿಗಳು ಸುಳ್ಳು ನುಡಿಯುತ್ತವೆ. ನಿಮ್ಮ ನಾಲಿಗೆ ಕೆಡುಕನ್ನು ಗೊಣಗುತ್ತದೆ.


ನ್ಯಾಯಸ್ಥಾನದಲ್ಲಿ ನ್ಯಾಯಾನುಸಾರ ವಾದಿಸುವವನು ಯಾರೂ ಇಲ್ಲ; ಸತ್ಯಾನುಸಾರ ತೀರ್ಪುಕೊಡುವವನು ಯಾರೂ ಇಲ್ಲ; ನೀವು ಶೂನ್ಯವಾದುದ್ದನ್ನೇ ನಂಬುತ್ತೀರಿ, ಅಬದ್ಧವಾದುದನ್ನೇ ಆಡುತ್ತೀರಿ, ಕೇಡನ್ನು ಬಸಿರಿಸಿ ಅಕ್ರಮವನ್ನು ಹೆರುತ್ತೀರಿ.


ನೀವು ಹೆಚ್ಚಳಪಡುವುದು ‘ಲೊದೆಬಾರಿನ’ ಗೆಲುವಿನಲ್ಲಿ! ಸ್ವಬಲದಿಂದಲೇ ಕರ್ನಾಯಿಮನ್ನು ಜಯಿಸಿದ್ದೇವೆಂದು ಕೊಚ್ಚಿಕೊಳ್ಳುವುದರಲ್ಲಿ!


ನಾವು ಅವನನ್ನು ಕೊಂದು ಈ ಬಾವಿಯೊಂದರಲ್ಲಿ ಹಾಕಿಬಿಡೋಣ. 'ಕಾಡುಮೃಗ ಅವನನ್ನು ತಿಂದುಬಿಟ್ಟಿತು'; ಎಂದು ಹೇಳಿದರೆ ಆಯಿತು, ಬನ್ನಿ, ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.


ಆದಕಾರಣ, ಇಸ್ರಯೇಲಿನ ಪರಮಪಾವನ ಸ್ವಾಮಿ ಹೀಗೆನ್ನುತ್ತಾರೆ : “ನೀವು ನನ್ನ ಮಾತನ್ನು ತಿರಸ್ಕರಿಸಿ ಹಿಂಸೆ ಕುತಂತ್ರಗಳನ್ನೇ ನೆಚ್ಚಿಕೊಂಡಿದ್ದೀರಿ.


ಆ ಜನರು ಸರ್ವೇಶ್ವರ ಸ್ವಾಮಿಯನ್ನು ಅಲ್ಲಗಳೆದಿದ್ದಾರೆ. “ಆತ ಏನು ಮಾಡಿಯಾನು? ನಮಗೆ ಕೇಡು ಬರುವುದೂ ಇಲ್ಲ, ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ.


ನೀನು ನನ್ನನ್ನು ಮರೆತುಬಿಟ್ಟು ಸುಳ್ಳನ್ನು ನಂಬಿದ್ದರಿಂದ ಇದೇ ನಿನಗೆ ಒದಗಲಿರುವ ಗತಿ. ಇದೇ ನಾನು ನಿನಗೆ ಅಳೆದುಕೊಡುವ ಪ್ರತೀಕಾರ.


ಅಲ್ಲಿನ ಪ್ರವಾದಿಗಳು ಇವರಿಗಾಗಿ ಮಿಥ್ಯ ದರ್ಶನವನ್ನು ಕಂಡು, ಸುಳ್ಳು ಕಣಿಯನ್ನು ಹೇಳಿ, ಸರ್ವೇಶ್ವರ ಮಾತಾಡದಿದ್ದರೂ ‘ಸರ್ವೇಶ್ವರ ದೇವರು ಇಂತೆನ್ನುತ್ತಾರೆ’ ಎಂದು ನುಡಿಯುತ್ತಾ ಮೇಲೆ ಮೇಲೆ ಸುಣ್ಣ ಬಳಿದಿದ್ದಾರೆ.


ಆ ರಾಜನು ಏಳು ವರ್ಷ ಗಳ ಮಟ್ಟಿಗೆ ಬಹುಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ಈ ಅವಧಿಯ ಅರ್ಧಭಾಗದಲ್ಲಿ ಬಲಿನೈವೇದ್ಯಗಳನ್ನು ನಿಲ್ಲಿಸಿಬಿಡುವನು. ದೇವಾಲಯದ ರೆಕ್ಕೆಯ ಮೇಲೆ ಅಸಹ್ಯವಾದುದನ್ನು ಸ್ಥಾಪಿಸಲಾಗುವುದು. ಅವನ್ನು ಅಲ್ಲಿ ಇಟ್ಟು ಅಶುದ್ಧಗೊಳಿಸಿದ ಘಾತುಕನು ನಿಶ್ಚಿತ ಪ್ರಳಯದಲ್ಲಿ ಮುಳುಗುವ ತನಕ ಅವು ಅಲ್ಲೇ ಇರುವುವು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು