Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 24:7 - ಕನ್ನಡ ಸತ್ಯವೇದವು C.L. Bible (BSI)

7 ಬಾಡಿಹೋಗಿದೆ ದ್ರಾಕ್ಷಾಲತೆ, ದುಬಾರಿಯಾಗಿದೆ ದ್ರಾಕ್ಷಾರಸ, ನರಳುತಿದೆ ನಲಿಯುತ್ತಿದ್ದ ಜನಸಮೂಹ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ದ್ರಾಕ್ಷಾರಸವು ಬತ್ತಿ ಹೋಗುವುದು, ದ್ರಾಕ್ಷಿಯ ಬಳ್ಳಿಯು ಕ್ಷೀಣಿಸುವುದು, ಹರ್ಷ ಹೃದಯರೆಲ್ಲಾ ನರಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ದ್ರಾಕ್ಷಾರಸವು ವ್ಯಸನಭರಿತವಾಗಿದೆ, ದ್ರಾಕ್ಷೆಯ ಬಳ್ಳಿಯು ಬಾಡಿದೆ, ಹರ್ಷಹೃದಯರೆಲ್ಲಾ ನರಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ದ್ರಾಕ್ಷಿಬಳ್ಳಿಗಳು ಸಾಯುತ್ತಲಿವೆ. ಹೊಸ ದ್ರಾಕ್ಷಾರಸವು ಹುಳಿಯಾಗಿದೆ. ಹಿಂದಿನ ಕಾಲದಲ್ಲಿ ಜನರು ಹರ್ಷಭರಿತರಾಗಿದ್ದರು. ಆದರೆ ಈಗ ಆ ಜನರು ದುಃಖದಲ್ಲಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ದ್ರಾಕ್ಷಾರಸವು ಬತ್ತಿಹೋಗುವುದು, ದ್ರಾಕ್ಷಿಯು ಬಾಡುವುದು. ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 24:7
7 ತಿಳಿವುಗಳ ಹೋಲಿಕೆ  

ತೊಲಗಿದೆ ಹೊಲಗಳಿಂದ ಹರ್ಷಾನಂದ, ಇಲ್ಲವಾಗಿದೆ ತೋಟಗಳಲಿ ಜಯಕಾರದ ನಾದ, ದ್ರಾಕ್ಷಾರಸವನು ತೆಗೆವವರಿಲ್ಲ ಅರಮನೆಗಳಿಂದ, ಎಂತಲೆ ನಿಂತುಹೋಗಿಹುದಲ್ಲಿ ಸುಗ್ಗಿಯ ಗೀತ.


ನಿಸ್ಸಾರವಾಗಿದೆ ಹೆಷ್ಬೋನಿನ ಹೊಲ, ಸಿಬ್ಮದ ದ್ರಾಕ್ಷಾಲತೆ, ಒಮ್ಮೆ ವ್ಯಾಪಿಸಿತ್ತು ಆ ರಾಜ್ಯದ್ರಾಕ್ಷಿ ಯಜ್ಜೇರಿನವರೆಗೆ, ಹಬ್ಬಿತ್ತದರ ಶಾಖೆ ಮರುಭೂಮಿಗೆ, ಸಮುದ್ರದಾಚೆ, ಮಾಡಿತು ನಾಡಿನೊಡೆಯರನು ಕುಡಿದು ಮತ್ತರಾಗುವಂತೆ.


ಜುದೇಯದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಹರ್ಷಾಡಂಬರಗಳು ಕೇಳಿಬರುವುದಿಲ್ಲ. ವಧೂವರರ ಸೊಲ್ಲನ್ನು ನಿಲ್ಲಿಸಿಬಿಡುವೆನು, ನಾಡಿಗೆ ನಾಡೇ ಹಾಳಾಗುವುದು. ಇದು ಸರ್ವೇಶ್ವರನಾದ ನನ್ನ ನುಡಿ.”


ನಾನು ಅವರ ವಿರುದ್ಧ ಕೈಯೆತ್ತಿ ಅವರು ವಾಸವಾಗಿರುವ ದೇಶವನ್ನೆಲ್ಲಾ ಮರುಭೂಮಿಯಿಂದ ದಿಬ್ಬದವರೆಗೂ ಹಾಳುಪಾಳು ಮಾಡುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು