Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 24:22 - ಕನ್ನಡ ಸತ್ಯವೇದವು C.L. Bible (BSI)

22 ತಳ್ಳುವವರನು ಖೈದಿಗಳ ಗುಂಪಿನಂತೆ ನೆಲಮಾಳಿಗೆಗೆ, ಇರುವರವರು ಸೆರೆಯಲಿ ಬಹುದಿನಗಳವರೆಗೆ, ತದನಂತರ ಗುರಿಯಾಗುವರು ದಂಡನೆಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅವರು ಕೈದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಲ್ಪಟ್ಟು ಅದರಲ್ಲಿ ಮುಚ್ಚಲ್ಪಡುವರು. ಬಹಳ ದಿನಗಳ ನಂತರ ದಂಡನೆಗೆ ಗುರಿಯಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಇವರು ಬಂದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಿಸಿಕೊಂಡು ಅದರಲ್ಲಿ ಮುಚ್ಚಲ್ಪಟ್ಟಿದ್ದು ಬಹು ದಿನಗಳ ಮೇಲೆ ದಂಡನೆಗೆ ಗುರಿಯಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಅನೇಕ ಮಂದಿ ಒಟ್ಟು ಸೇರುವರು. ಕೆಲವರು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುವರು. ಕೆಲವರು ಸೆರೆಹಿಡಿಯಲ್ಪಡುವರು. ಆಮೇಲೆ ಸ್ವಲ್ಪ ಕಾಲದ ನಂತರ ಅವರ ನ್ಯಾಯವಿಚಾರಣೆ ನಡಿಯುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ನೆಲಮಾಳಿಗೆಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಬಹಳ ದಿನಗಳಿದ್ದ ತರುವಾಯ ದಂಡನೆಗೆ ಗುರಿಯಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 24:22
11 ತಿಳಿವುಗಳ ಹೋಲಿಕೆ  

ರಕ್ತ ಸುರಿಸಿ ನೀವು ನನ್ನೊಡನೆ ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಕರೆತರುವೆನು ನಿಮ್ಮವರನು ಸೆರೆಯಾಳತ್ವದಿಂದ ಮೇಲೆತ್ತುವೆನು ನಿಮ್ಮವರನು ಆ ಸೆರೆಬಾವಿಯಿಂದ.


ಈ ಜನರಾದರೋ ಸೂರೆಯಾಗಿದ್ದಾರೆ ಕೊಳ್ಳೆಗೆ ಈಡಾಗಿ, ಎಲ್ಲರೂ ಬಿದ್ದಿದ್ದಾರೆ ಹಳ್ಳಕೊಳ್ಳಗಳಲ್ಲಿ, ಸೆರೆಮನೆಗಳಲ್ಲಿ ಬಂಧಿಗಳಾಗಿ; ಸುಲಿಗೆಯಾಗಿದ್ದರೂ ಅವರನ್ನು ಬಿಡಿಸುವವರಾರೂ ಇಲ್ಲ ಸೂರೆಯಾಗಿದ್ದರೂ ಅವರನ್ನು ಬಿಟ್ಟುಬಿಡಿ ಎನ್ನುವವರಾರೂ ಇಲ್ಲ.


ಬಹುದಿನಗಳ ಮೇಲೆ ನಿನಗೆ ಅಪ್ಪಣೆಯಾಗಿರುವುದು; ಖಡ್ಗದಿಂದ ನಾಶವಾಗಿ, ಪುನರ್ಜೀವಿತವಾದ ದೇಶದೊಳಗೆ ನೀನು ಕಾಲಾನುಕಾಲಕ್ಕೆ ನುಗ್ಗಿ, ಅನೇಕ ಜನಾಂಗಗಳಿಂದ ಒಟ್ಟುಗೂಡಿದ ನನ್ನ ಜನರ ಮೇಲೆ ಬೀಳುವೆ; ಹೌದು, ಜನಾಂಗಗಳಿಂದ ಪಾರಾದ ಆ ಜನರೆಲ್ಲರು ಬಹುಕಾಲ ಹಾಳಾಗಿದ್ದ ಇಸ್ರಯೇಲಿನ ಪರ್ವತಗಳಲ್ಲಿ ನೆಮ್ಮದಿಯಾಗಿ ವಾಸಿಸುತ್ತಿರುವಾಗ ನೀನು ಅವರ ಮೇಲೆ ಬೀಳುವೆ.


ಎಲೈ ಭೂನಿವಾಸಿಗಳೇ, ಕೇಳಿರೆಲ್ಲರು, ಕಾದಿದೆ ನಿಮಗೆ ಭಯಭೀತಿ, ಕುಳಿ ಮತ್ತು ಬಲೆಯು.


ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ಅವಿತುಕೊಳ್ಳುವರು ಜನರು ಕಲ್ಲುಬಂಡೆಗಳ ಗುಹೆಗಳಲ್ಲಿ, ನೆಲದ ಹಳ್ಳಕೊಳ್ಳಗಳಲ್ಲಿ.


ಪಿಶಾಚಿಯೂ ಸೈತಾನನೂ ಆಗಿರುವ ಘಟಸರ್ಪವನ್ನು, ಅಂದರೆ ಪುರಾತನ ಸರ್ಪವನ್ನು, ಆತನು ಹಿಡಿದು ಒಂದು ಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು.


ನಂಬಿಕೆಯಿಂದ ಕಾದಿರುವ ಸೆರೆಯಾಳುಗಳೇ, ಹಿಂದಿರುಗಿರಿ ನಿಮ್ಮ ಸುಭದ್ರ ದುರ್ಗಸ್ಥಾನಕೆ ಇಗೋ, ಈಗಲೂ ಘೋಷಿಸುತ್ತಿರುವೆ: ನಿಮಗಿಮ್ಮಡಿ ಸೌಭಾಗ್ಯ ನೀಡುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು