Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 24:21 - ಕನ್ನಡ ಸತ್ಯವೇದವು C.L. Bible (BSI)

21 ಆ ದಿನ ಸರ್ವೇಶ್ವರ ದಂಡಿಸುವರು ಮೇಲಣ ಸೇನಾಶೂರರನು, ಕೆಳಗಣ ಭೂ ರಾಜರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ, ಭೂಮಂಡಲದ ಒಡೆಯರನ್ನೂ ದಂಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ ಭೂಮಂಡಲದ ನೆಲದೊಡೆಯರನ್ನೂ ದಂಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆ ಸಮಯದಲ್ಲಿ ಯೆಹೋವನು ಪರಲೋಕ ಸೈನ್ಯಕ್ಕೆ ಪರಲೋಕದಲ್ಲಿ ನ್ಯಾಯತೀರಿಸುವನು. ಭೂಮಿಯ ಅರಸರನ್ನು ಭೂಮಿಯ ಮೇಲೆ ನ್ಯಾಯವಿಚಾರಣೆಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ ಆಕಾಶದವರ ಸೈನ್ಯವನ್ನೂ, ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 24:21
23 ತಿಳಿವುಗಳ ಹೋಲಿಕೆ  

ಅರಸರ ದರ್ಪವನಡಗಿಸಿಬಿಡುವನು I ಭೂಪತಿಗಳಿಗೋ ಕಂಪನ ಕೊಡುವನು II


ಆದರೆ ಸರ್ವೇಶ್ವರನಾದ ನಾನು ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ನನ್ನ ಗುರಿಯನ್ನು ಸಾಧಿಸಿದ ಮೇಲೆ ಆ ಅಸ್ಸೀರಿಯದ ಅರಸನನ್ನು ಅವನ ದುರಹಂಕಾರಕ್ಕಾಗಿ, ಗರ್ವದ ಭಾವನೆಗಳಿಗಾಗಿ ಸರಿಯಾಗಿ ದಂಡಿಸುವೆನು.


ಅವಳೊಡನೆ ವ್ಯಭಿಚಾರಮಾಡಿದ ಹಾಗೂ ಭೋಗವಿಲಾಸದಿಂದ ಬಾಳಿದ ಭೂರಾಜರು ಅವಳನ್ನು ದಹಿಸುವ ಚಿತೆಯಿಂದ ಮೇಲೇರುವ ದಟ್ಟ ಹೊಗೆಯನ್ನು ದಿಟ್ಟಿಸಿ ನೋಡಿ ಶೋಕಿಸುವರು.


ಅವರು ಯಜ್ಞದ ಕುರಿಮರಿಯ ಮೇಲೆ ಯುದ್ಧಮಾಡುವರು. ಆದರೆ ಯಜ್ಞದ ಕುರಿಮರಿಗೆ ಜಯವಾಗುವುದು. ಆ ಕುರಿಮರಿಯು ಒಡೆಯರಿಗೆಲ್ಲಾ ಒಡೆಯನೂ ರಾಜಾಧಿರಾಜನೂ ಆಗಿರುವುದೇ ಇದಕ್ಕೆ ಕಾರಣ. ದೇವರ ಕರೆ ಹೊಂದಿದವರೂ ದೇವರು ಆಯ್ದುಕೊಂಡವರೂ ಆದ ಪ್ರಾಮಾಣಿಕ ಅನುಯಾಯಿಗಳು ಆ ಜಯದಲ್ಲಿ ಪಾಲುಗಾರರಾಗುವರು,” ಎಂದನು.


“ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ಧಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ.


ಸೇನಾಧೀಶ್ವರ ಸರ್ವೇಶ್ವರ ದಿನವೊಂದನ್ನು ಗೊತ್ತುಮಾಡಿದ್ದಾರೆ. ಅಹಂಕಾರದಿಂದ ಉಬ್ಬಿಹೋದವರಿಗೆ, ಉದ್ಧಟತನದಿಂದ ಕೊಬ್ಬಿಹೋದವರಿಗೆ,


ಸರ್ವೇಶ್ವರ ಇಂತೆನ್ನುತ್ತಾರೆ : “ನಾನು ಲೋಕದವರಿಗೆ ಪಾಪದ ಫಲವನ್ನೂ ದುರುಳರಿಗೆ ದುಷ್ಕೃತ್ಯಗಳ ಫಸಲನ್ನೂ ತಿನ್ನಿಸುವೆನು. ಸೊಕ್ಕಿದವನ ಕೊಬ್ಬನ್ನು ಕರಗಿಸುವೆನು. ಬಲಾತ್ಕಾರ ಮಾಡುವವರ ಹೆಮ್ಮೆಯನ್ನು ಅಡಗಿಸುವೆನು.


ಸೊರಗಿಹೋಗುವುದು ಲೋಕ ದುಃಖಿಸುತ್ತಾ ಕುಗ್ಗಿಹೋಗುವುದು ಬುವಿ ಗೋಳಾಡುತ್ತಾ ಕಂಗೆಟ್ಟುಹೋಗುವನು ಪ್ರತಿಯೊಬ್ಬ ವಿಶ್ವವಿಖ್ಯಾತ.


ತರುತ್ತಿಹರು ರಾಷ್ಟ್ರಗಳ ಆಸ್ತಿಯನ್ನು ನಿನ್ನಲ್ಲಿಗೆ ಬರುತಿಹರು ಅವುಗಳ ಅರಸರು ಮೆರವಣಿಗೆಯೊಂದಿಗೆ. ನಿನ್ನ ದ್ವಾರಗಳು ತೆರೆದಿರುವುವು ಹಗಲಿರುಳು ಮುಚ್ಚದೆ.


ಸ್ವಾಮಿಯ ಆ ಯಜ್ಞದ ದಿನದಂದು ನಾನು ದೇಶಾಧಿಪತಿಗಳನ್ನು, ರಾಜವಂಶದವರನ್ನು, ಹಾಗೂ ಅನ್ಯಮತೀಯ ವಸ್ತ್ರಧಾರಿಗಳನ್ನು ದಂಡಿಸುವೆನು.


“ನರಪುತ್ರನೇ, ನೀನು ಗೋಗನಿಗೆ ವಿರುದ್ಧ ಈ ದೈವೋಕ್ತಿಯನ್ನು ನುಡಿ: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ಒಡೆಯನಾದ ಗೋಗನೇ,


ನಾನೇ ಅಪ್ಪಣೆಕೊಟ್ಟಿದ್ದೇನೆ. ಇದು ಸರ್ವೇಶ್ವರನಾದ ದೇವರ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು