Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 24:15 - ಕನ್ನಡ ಸತ್ಯವೇದವು C.L. Bible (BSI)

15 ಎಂದೇ ಮೂಡಣದವರೇ, ಸನ್ಮಾನಿಸಿರಿ ಸರ್ವೇಶ್ವರ ಸ್ವಾಮಿಯನು, ಕರಾವಳಿಯವರೇ, ಘನಪಡಿಸಿರಿ ಇಸ್ರಯೇಲಿನ ದೇವರಾದ ಸ್ವಾಮಿಯ ನಾಮವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಮೂಡಣದವರೇ, “ಯೆಹೋವನನ್ನು ಸನ್ಮಾನಿಸಿರಿ. ದ್ವೀಪ ನಿವಾಸಿಗಳೇ, ಇಸ್ರಾಯೇಲರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ” ಎಂದು ಕೂಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಮೂಡಣವರೇ, ಯೆಹೋವನನ್ನು ಸನ್ಮಾನಿಸಿರಿ; ಕರಾವಳಿಯವರೇ, ಇಸ್ರಾಯೇಲ್ಯರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ ಎಂದು ಕೂಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆ ಜನರು, “ಪೂರ್ವದಲ್ಲಿರುವ ಜನರೇ, ದೇವರಿಗೆ ಸ್ತೋತ್ರಮಾಡಿರಿ! ದೂರ ದೇಶಗಳಲ್ಲಿರುವ ಜನರೇ, ಇಸ್ರೇಲರ ದೇವರಾದ ಯೆಹೋವನ ಹೆಸರನ್ನು ಕೊಂಡಾಡಿರಿ” ಎಂದು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 24:15
26 ತಿಳಿವುಗಳ ಹೋಲಿಕೆ  

“ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಸರ್ವರಾಷ್ಟ್ರಗಳಲ್ಲಿ ನನ್ನ ನಾಮಕ್ಕೆ ಮಹಿಮೆ ಸಲ್ಲುವುದು. ಎಲ್ಲೆಲ್ಲಿಯೂ ನನಗೆ ಧೂಪಾರತಿಯನ್ನೂ ಕಾಣಿಕೆಗಳನ್ನೂ ಜನರು ಅರ್ಪಿಸುವರು. ಹೌದು, ಸರ್ವರಾಷ್ಟ್ರಗಳಲ್ಲಿಯೂ ನನ್ನ ನಾಮಕ್ಕೆ ಮಹಿಮೆ ಸಲ್ಲುವುದು,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ.


ನಿರೀಕ್ಷಿಸುತ್ತಿಹರು ನನ್ನನು ದೂರದ ನಿವಾಸಿಗಳು ಮುಂದಾಗಿ ಬರುತಿಹವು ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಸರ್ವೇಶ್ವರನ ಶ್ರೀನಾಮ ನಿಧಿಯಾದ ಇಲ್ಲಿಗೆ; ನಿನ್ನ ಘನಪಡಿಸಿದ ಇಸ್ರಯೇಲಿನ ಪರಮಪಾವನನ ಸನ್ನಿಧಿಗೆ. ಹೊತ್ತು ತರುತಿಹರು ನಿನ್ನ ಮಕ್ಕಳನು ಜೊತೆಗೆ ಅವರ ಬೆಳ್ಳಿಬಂಗಾರಗಳನು.


ಹತ್ತಿರದಲ್ಲೇ ಇದೆ ನಾ ನೀಡುವ ಮುಕ್ತಿ ಸಿಗುವದು ನನ್ನಿಂದ ವಿಮೋಚನಾ ಶಕ್ತಿ ನ್ಯಾಯ ನೀಡುವೆನು ರಾಷ್ಟ್ರಗಳಿಗೆ ನನ್ನ ಭುಜಬಲದಿಂದ ನನ್ನನ್ನು ನಿರೀಕ್ಷಿಸಿಕೊಂಡಿರುವರು ಜನರು ದೂರದೇಶಗಳಿಂದ ಕಾದಿರುವರು ಆ ಭುಜಬಲ ಸಾಧನೆಗಾಗಿ ನಂಬಿಕೆಯಿಂದ.


ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೇ.


ಸಮುದ್ರಯಾತ್ರಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ದ್ವೀಪಾಂತರ ನಿವಾಸಿಗಳೇ, ನೂತನ ಗೀತವ ಹಾಡಿ ಹೊಗಳಿ ಸರ್ವೇಶ್ವರನನು, ದಿಗಂತಗಳಲ್ಲಿಯೂ ಕೀರ್ತಿಸಿ ಆತನನು.


ಎಡವಿ ಬೀಳನವನು, ಎದೆಗುಂದನವನು ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ-ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು.


ಕ್ರಿಸ್ತಯೇಸುವನ್ನು ಪ್ರಭುವೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿರಿ. ನಿಮ್ಮಲ್ಲಿರುವ ನಂಬಿಕೆ ನಿರೀಕ್ಷೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ತಕ್ಕ ಉತ್ತರ ಕೊಡಲು ಸರ್ವದಾ ಸಿದ್ಧರಾಗಿರಿ.


ಪರಿಶೋಧನೆಗಳು ಬಂದೊದಗುವುದು ನಿಮ್ಮ ವಿಶ್ವಾಸವನ್ನು ಪುಟವಿಡುವುದಕ್ಕಾಗಿಯೇ. ನಶಿಸಿಹೋಗುವ ಬಂಗಾರವೂ ಕೂಡ ಬೆಂಕಿಯಿಂದ ಪರಿಶೋಧಿತವಾಗುತ್ತದೆ. ಬಂಗಾರಕ್ಕಿಂತಲೂ ಬಹು ಅಮೂಲ್ಯವಾದ ನಿಮ್ಮ ವಿಶ್ವಾಸವು ಶೋಧಿತವಾಗಬೇಕು. ಆಗ ಮಾತ್ರ ಯೇಸುಕ್ರಿಸ್ತರು ಪ್ರತ್ಯಕ್ಷವಾಗುವ ದಿನದಂದು ನಿಮಗೆ ಪ್ರಶಂಸೆ, ಪ್ರತಿಷ್ಠೆ ಹಾಗೂ ಪ್ರತಿಭೆ ದೊರಕುತ್ತವೆ.


ಸುಮಾರು ನಡುರಾತ್ರಿಯ ಸಮಯ. ಪೌಲ ಮತ್ತು ಸೀಲ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು.


ಸರ್ವೇಶ್ವರ ಅವರಿಗೆ ಭಯಭೀತಿ ಉಂಟುಮಾಡುವರು; ಅವರ ಭೂಮಿಯಲ್ಲಿನ ದೇವತೆಗಳನ್ನೆಲ್ಲಾ ಕ್ಷಯಿಸಿಬಿಡುವರು; ಅದಾದ ನಂತರ ಪ್ರತಿಯೊಂದು ರಾಷ್ಟ್ರದವರು ತಮ್ಮ ತಮ್ಮ ನಾಡಿನಲ್ಲೇ ಸರ್ವೇಶ್ವರಸ್ವಾಮಿಯನ್ನು ಆರಾಧಿಸುವರು.


ಅವರ ಮಧ್ಯೆ ಒಂದು ಸೂಚಕಕಾರ್ಯವನ್ನು ಮಾಡುವೆನು. ಅವರಲ್ಲಿ ಅಳಿದುಳಿದವರನ್ನು ನನ್ನ ಸುದ್ದಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ಕಾಣದೆಯೂ ಇರುವವರ ಬಳಿಗೆ ಕಳಿಸುವೆನು. ತಾರ್ಷೀಷ್, ಲಿಬಿಯಾ, ಧನುರ್ಧಾರಿಗಳಾದ ಲೂದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ದೂರದ ದ್ವೀಪನಿವಾಸಿಗಳ ಬಳಿಗೂ ಕಳಿಸುವೆನು. ಈ ಅನ್ಯಜನಾಂಗಗಳಿಗೆ ಅವರು ನನ್ನ ಮಹಿಮೆಯನ್ನು ಪ್ರಕಟಿಸುವರು.


ದೂರದೇಶದವರು ಕಂಡು ಬೆರಗಾದರು ಭೂಮಿಯ ಕಟ್ಟಕಡೆಯವರು ನಡುಗಿದರು ಎಲ್ಲರೂ ಇಲ್ಲಿಗೆ ನೆರೆದುಬಂದಿಹರು.


ಹೊಗಳುವುವು ನಿನ್ನನ್ನು ಬಲಿಷ್ಟ ರಾಷ್ಟ್ರಗಳು, ನಿನಗಂಜುವುವು ಕ್ರೂರಿಗಳ ಪಟ್ಟಣಗಳು.


ಹೀಗೆ ನಿಮ್ಮ ಮುಖಾಂತರ ಪ್ರಭು ಯೇಸುವಿನ ನಾಮಕ್ಕೂ ಮತ್ತು ಅವರಲ್ಲಿ ನಿಮಗೂ ಮಹಿಮೆಯುಂಟಾಗಲಿ. ನಮ್ಮ ದೇವರ ಹಾಗು ಪ್ರಭು ಯೇಸುಕ್ರಿಸ್ತರ ಅನುಗ್ರಹದಿಂದ ಇದು ನೆರವೇರಲಿ.


ಅರಸ ಅಹಷ್ವೇರೋಷನು ತನ್ನ ರಾಜ್ಯಕ್ಕೆ ಸೇರಿದ ಎಲ್ಲಾ ದೇಶಗಳ ಮೇಲೂ ಸಮುದ್ರ-ದ್ವೀಪಗಳ ಮೇಲೂ ತೆರಿಗೆಯನ್ನು ವಿಧಿಸಿದನು.


ಹೇಳುವಿರಿ ನೀವು ಆ ದಿನದಂದು ಈ ಪರಿ - “ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು ಸ್ಮರಿಸಿರಿ ಆತನ ಶ್ರೀನಾಮವನು ಸಾರಿರಿ ಜನತೆಗೆ ಆತನ ಕಾರ್ಯಗಳನು ಘೋಷಿಸಿರಿ ಆತನ ನಾಮಘನತೆಯನು.


ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು.


ಸರ್ವೇಶ್ವರನ ಮಹಿಮೆಯನು ಹೊಗಳಲಿ ಆತನ ಸ್ತೋತ್ರವ ಪಸರಿಸಲಿ ದ್ವೀಪದ್ವೀಪಗಳಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು