Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 23:2 - ಕನ್ನಡ ಸತ್ಯವೇದವು C.L. Bible (BSI)

2 ಕರಾವಳಿಯ ನಿವಾಸಿಗಳೇ, ಸಿದೋನಿನ ವರ್ತಕರೇ, ಮೌನತಾಳಿರಿ. ನಿಮ್ಮ ಜನರು ವ್ಯಾಪಾರಕ್ಕಾಗಿ ವಿಶಾಲವಾದ ಸಮುದ್ರವನ್ನು ದಾಟುವಂತೆ ಮಾಡಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ಹಾದು ಹೋಗುವ, ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನವಾಗಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಕರಾವಳಿಯ ನಿವಾಸಿಗಳೇ, ಸಮುದ್ರವನ್ನು ಹಾದುಹೋಗುವ ಚೀದೋನಿನ ವರ್ತಕರಿಂದ ಸಮೃದ್ಧಿಹೊಂದಿದವರೇ, ಮೌನವಾಗಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಸಮುದ್ರ ತೀರದಲ್ಲಿ ವಾಸಿಸುವ ಜನರೇ, ನೀವು ಸ್ತಬ್ಧರಾಗಿದ್ದು ದುಃಖಿಸಿರಿ. ತೂರು “ಚೀದೋನಿನ ವ್ಯಾಪಾರಿ” ಆಗಿತ್ತು. ಆ ನಗರವು ವರ್ತಕರನ್ನು ಸಮುದ್ರದಾಚೆ ಕಳುಹಿಸಿತು. ಆ ಜನರು ನಿನ್ನನ್ನು ಐಶ್ವರ್ಯಗಳಿಂದ ತುಂಬಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಸೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ ಮೌನವಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 23:2
8 ತಿಳಿವುಗಳ ಹೋಲಿಕೆ  

“ಕಸ್ದೀಯ ನಗರಿಯೇ, ಕುಳಿತುಕೊ ಮೌನವಾಗಿ ಕತ್ತಲೆಯೊಳಗೆ ಇನ್ನು ಎನಿಸಿಕೊಳ್ಳೆ ರಾಣಿಯೆಂದು ರಾಜ್ಯಗಳಿಗೆ.”


ಸರ್ವೇಶ್ವರ ಪ್ರಸನ್ನನಾಗಿಹನು ಪವಿತ್ರಾಲಯದಲ್ಲಿ; ಜಗವೆಲ್ಲ ಮೌನತಾಳಲಿ ಆತನ ಸನ್ನಿಧಿಯಲ್ಲಿ.


“ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಅಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ.


ದೂರದೇಶದವರೇ, ಮೌನದಿಂದ ನನಗೆ ಕಿವಿಗೊಡಿ; ರಾಷ್ಟ್ರಗಳು ಎಷ್ಟೇ ಬಲಿಷ್ಠರಾಗಿರಲಿ ಬಂದು ಮಾತಾಡಲಿ ಸಮೀಪದಲಿ. ಒಟ್ಟಿಗೆ ಸೇರೋಣ ನ್ಯಾಯಸ್ಥಾನದಲಿ.


‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು I ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’ II


“ನರಪುತ್ರನೇ, ನೀನು ಸಿದೋನಿಗೆ ಅಭಿಮುಖನಾಗಿ ಅದರ ಬಗ್ಗೆ ಹೀಗೆ ನುಡಿ -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು