Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 23:16 - ಕನ್ನಡ ಸತ್ಯವೇದವು C.L. Bible (BSI)

16 ‘ಓ ವೇಶ್ಯೆಯೇ, ಮರೆತಿಹರು, ನೋಡು, ಜನರು ನಿನ್ನನು; ಎಂದೇ ತೆಗೆದುಕೋ ಕೈಯಲಿ ಕಿನ್ನರಿಯನು: ನುಡಿಸು ಇಂಪಾಗಿ ನಿನ್ನ ವಾದ್ಯವನು; ಹಾಡು ಅನೇಕಾನೇಕ ಗೀತಗಳನು; ಆಗಲಾದರೂ ನೆನಸಿಕೊಳ್ಳಲಿ ಜನರು ನಿನ್ನನು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅದೇನೆಂದರೆ, “ಎಲ್ಲರೂ ಮರೆತುಹೋದ ವ್ಯಭಿಚಾರಿಯೇ, ಕಿನ್ನರಿಯನ್ನು ತೆಗೆದುಕೊಂಡು ಪಟ್ಟಣದಲ್ಲಿ ಅಲೆಯುತ್ತಾ, ಜನರು ನಿನ್ನನ್ನು ಜ್ಞಾಪಿಸಿಕೊಳ್ಳುವಂತೆ ಚೆನ್ನಾಗಿ ನುಡಿಸಿ, ಬಹಳ ಗೀತೆಗಳನ್ನು ಹಾಡು” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅದೇನಂದರೆ ಎಲ್ಲರೂ ಮರೆತ ಸೂಳೆಯೇ, ಕಿನ್ನರಿಯನ್ನು ತೆಗೆದುಕೊಂಡು ಊರಲ್ಲಿ ಅಲೆಯುತ್ತಾ ಜನರು ನಿನ್ನನ್ನು ಜ್ಞಾಪಿಸಿಕೊಳ್ಳುವಂತೆ ಚೆನ್ನಾಗಿ ನುಡಿಸಿ ಬಹು ಗೀತಗಳನ್ನು ಹಾಡು ಎಂಬದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 “ಪುರುಷರು ಮರೆತಿರುವ ವೇಶ್ಯೆಯೇ, ನಿನ್ನ ಕಿನ್ನರಿಯನ್ನು ತೆಗೆದುಕೊಂಡು ಊರೊಳಗೆ ಹೋಗಿ ನಿನ್ನ ಹಾಡನ್ನು ನುಡಿಸು, ಮತ್ತೆಮತ್ತೆ ಹಾಡು. ಆಗ ಯಾರಾದರೂ ನಿನ್ನನ್ನು ನೆನಪುಮಾಡಿಕೊಳ್ಳಬಹುದೇನೋ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 “ಮರೆತುಹೋದ ವೇಶ್ಯೆಯೇ, ಕಿನ್ನರಿಯನ್ನು ತೆಗೆದುಕೋ. ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ, ಬಹಳ ಗೀತೆಗಳನ್ನು ಹಾಡು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 23:16
6 ತಿಳಿವುಗಳ ಹೋಲಿಕೆ  

ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ.


ಒಬ್ಬ ಅರಸನ ಜೀವಮಾನ ಕಾಲದಷ್ಟು ದಿನ - ಅಂದರೆ ಎಪ್ಪತ್ತು ವರ್ಷಕಾಲ - ನಗರವು ಯಾರ ನೆನಪಿಗೂ ಬಾರದೆಹೋಗುವುದು. ಆ ಅವಧಿಯು ಮುಗಿದ ಮೇಲೆ ಅದರ ಗತಿ ವೇಶ್ಯೆಯ ಗೀತದಂತಾಗುವುದು:


ಎಪ್ಪತ್ತು ವರ್ಷಗಳಾದ ಮೇಲೆ ಸರ್ವೇಶ್ವರ ಟೈರಿಗೆ ಭೇಟಿನೀಡುವರು. ಆ ನಗರಿ ತನ್ನ ಕಸುಬಿಗೆ ಹಿಂದಿರುಗುವಳು. ಜಗದ ಎಲ್ಲ ರಾಷ್ಟ್ರಗಳೊಂದಿಗೆ ವ್ಯಾಪಾರ ಗೈಯುವಳು.


ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿ ಇನ್ನು ಕೇಳಿಸದು.


ಇದೆಲ್ಲ ಆಗುವುದು ಅಮಿತ ಹಾದರದ ನಿಮಿತ್ತ ರಾಷ್ಟ್ರಗಳನು ತನ್ನ ಬೆಡಗು ಬಿನ್ನಾಣಗಳಿಂದ ಜಾರತನಕ್ಕೂ ಗುಲಾಮತನಕ್ಕೂ ಆಕೆ ತಂದುದರಿಂದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು