Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 22:25 - ಕನ್ನಡ ಸತ್ಯವೇದವು C.L. Bible (BSI)

25 ಇದರಿಂದ ಬಿಗಿಯಾಗಿ ಹೊಡೆಯಲಾಗಿದ್ದ ಆ ಮೊಳೆ ಸಡಿಲವಾಗಿ ಕುಸಿದುಬೀಳುವುದು. ಅದಕ್ಕೆ ತಗಲುಹಾಕಿದ್ದ ವಸ್ತುಗಳೆಲ್ಲ ಕಳಚಿಬೀಳುವುವು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಹೇಳಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಸೇನಾಧೀಶ್ವರನಾದ ಯೆಹೋವನು ಹೀಗೆ ನುಡಿಯುತ್ತಾನೆ. “ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು ಆ ದಿನದಲ್ಲಿ ಕುಸಿದು ಹೋಗುವುದು; ಅದು ಬಡಿಯಲ್ಪಟ್ಟು ಬೀಳಲಾಗಿ ಅದರ ಮೇಲೆ ಇದ್ದ ಭಾರವೂ ತೆಗೆದು ಹಾಕಲ್ಪಡುವುದು ಯೆಹೋವನೇ ಇದನ್ನು ನುಡಿದಿದ್ದಾನೆ” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಸೇನಾಧೀಶ್ವರನಾದ ಯೆಹೋವನು ಹೇಳುವದೇನಂದರೆ - ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು ಆ ದಿನದಲ್ಲಿ ಕುಸಿದು ಹೋಗುವದು; ಅದು ಬಡಿಯಲ್ಪಟ್ಟು ಬೀಳಲಾಗಿ ಅದಕ್ಕೆ ತಗಲುಹಾಕಿದ ಭಾರವೂ ನಾಶವಾಗುವದು. ಇದೇ ಯೆಹೋವನಾದ ನನ್ನ ನುಡಿ ಎಂಬದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಹಲಗೆಗೆ ಬಲವಾಗಿ ಹೊಡೆಯಲ್ಪಟ್ಟ ಆ ಮೊಳೆಯು (ಶೆಬ್ನ) ಬಲಹೀನವಾಗಿ ತುಂಡಾಗುವದು. ಆ ಮೊಳೆಯು ನೆಲಕ್ಕೆ ಬಿದ್ದು ನಾಶವಾಗುವದು. ಆಗ ಆ ಮೊಳೆಗೆ ತೂಗುಹಾಕಿದ್ದೆಲ್ಲವೂ ಅದರೊಂದಿಗೆ ನೆಲಕ್ಕೆ ಬೀಳುವದು. ಆಗ ನಾನು ಈ ಸಂದೇಶದಲ್ಲಿ ಹೇಳಿದ್ದೆಲ್ಲವೂ ಸಂಭವಿಸುವದು. ಅವುಗಳು ನೆರವೇರುತ್ತವೆ ಯಾಕೆಂದರೆ ಅವುಗಳನ್ನು ಹೇಳಿದಾತನು ಯೆಹೋವನೇ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 “ಆ ದಿನದಲ್ಲಿ,” ಸೇನಾಧೀಶ್ವರ ಯೆಹೋವ ದೇವರು ಪ್ರಕಟಿಸುವುದು ಏನೆಂದರೆ, “ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಕುಸಿದುಬೀಳುವುದು. ಮೊಳೆಯ ಮೇಲೆ ಇದ್ದ ಭಾರವೂ ತೆಗೆದುಹಾಕಲಾಗುವುದು,” ಇದು ಯೆಹೋವ ದೇವರ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 22:25
15 ತಿಳಿವುಗಳ ಹೋಲಿಕೆ  

ಮೂಡಲಿಂದ ಬೇಟೆಗಾಗಿ ರಣಹದ್ದನು ಕರೆದಂತೆ ಕರೆದಿಹೆನು ದೂರದೇಶದಿಂದ ನನ್ನ ಸಂಕಲ್ಪ ಈಡೇರಿಸಲೆಂದೇ. ನುಡಿದಿರುವೆನು ನಾನು; ಈಡೇರಿಸುವೆನು ಅದನ್ನು ಯೋಜಿಸಿರುವೆನು ನಾನು; ಸಾಧಿಸುವೆನು ಅದನ್ನು.


ನಿಲ್ಲದು ರಾಷ್ಟ್ರಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ ಅವಶ್ಯವಿರದವಕ್ಕೆ ಯುದ್ಧವಿದ್ಯೆಯ ಕಲಿಕೆ. ಕೂರುವರು ಪ್ರತಿಯೋರ್ವರು ತಂತಮ್ಮ ದ್ರಾಕ್ಷಾಲತೆಗಳಡಿಯಲೆ ಕೂರುವರವರು ತಂತಮ್ಮ ಅಂಜೂರ ಗಿಡಗಳ ನೆರಳಲೆ ಈ ಪರಿ ನುಡಿದಿಹನು ಸೇನಾಧೀಶ್ವರನಾದ ಸರ್ವೇಶ್ವರನೆ.


ವಸ್ತುಗಳನ್ನು ತಗುಲಿಹಾಕುವ ಮೊಳೆಯಂತೆ ಗಟ್ಟಿಯಾದ ಸ್ಥಳದಲ್ಲಿ ಅವನನ್ನು ಬಿಗಿಯಾಗಿ ನಿಲ್ಲಿಸುವೆನು. ಅಲ್ಲದೆ, ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು.”


ನಂಬಬೇಡ ಅಧಿಕಾರಿಯನು I ನೆಚ್ಚಬೇಡ ನರಮಾನವನನು I ಉದ್ಧರಿಸಲು ಅಸಮರ್ಥನವನು II


ನಾನು ಕಳುಹಿಸುವ ಕ್ಷಾಮದಿಂದ, ದುಷ್ಟಮೃಗಗಳಿಂದ ನಿನಗೆ ಪುತ್ರಶೋಕ ಪ್ರಾಪ್ತಿಯಾಗುವುದು; ವ್ಯಾಧಿಯೂ ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು; ನಿನ್ನನ್ನು ಖಡ್ಗಕ್ಕೆ ತುತ್ತುಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”


“ನಾನು ಕೋಪದಿಂದ, ರೋಷದಿಂದ ಹಾಗು ತೀವ್ರ ಖಂಡನೆಯಿಂದ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ ಪರಿಹಾಸ್ಯಗಳಿಗೂ ಬೆರಗು ಬುದ್ಧಿವಾದಗಳಿಗೂ ಆಸ್ಪದವಾಗುವುವು; ಇದು ಸರ್ವೇಶ್ವರನಾದ ನನ್ನ ನುಡಿ.


“ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಕಾರಿ ಶಾಂತನಾಗುವೆನು; ಆಗ್ರಹದಿಂದ ಮಾತಾಡಿದವನು ಸರ್ವೇಶ್ವರನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.


ಲೋಕ ದುಃಖಿಸುವುದು ಆಕಾಶ ಕಪ್ಪಗಾಗುವುದು ಇದು ಸರ್ವೇಶ್ವರ ಆಡಿದ ಮಾತು. ಇದನ್ನು ಬದಲಾಯಿಸುವಂತಿಲ್ಲ. ಇದು ಅವರ ತೀರ್ಮಾನ; ಇದನ್ನು ರದ್ದುಗೊಳಿಸುವಂತಿಲ್ಲ.


ಆತನನ್ನು ಹೆಸರಿಸಿ ಕರೆದವನು ನಾನೇ ಆತನನ್ನು ಬರಮಾಡಿದವನೂ ನಾನೇ. ಆತನು ಗಳಿಸುವುದು ಜಯವನ್ನೇ.


ನಸುಕುವನು ದೇವರು ನಿನ್ನನು ನಿರುತ I ದೂರಮಾಡುವನು ನಿನ್ನಾ ಗುಡಾರದಿಂದ I ಕಿತ್ತೆಸೆದುಬಿಡುವನು ಜೀವದ ನಾಡಿಂದ II


“ಬಟ್ಟಲು, ಬಿಂದಿಗೆ ಮುಂತಾದ ಪಾತ್ರೆಗಳನ್ನು ಮೊಳೆಗೆ ತಗಲುಹಾಕುವಂತೆ, ತಂದೆಯ ಮಕ್ಕಳು, ಮೊಮ್ಮಕ್ಕಳೆಲ್ಲರು ಅವನಿಗೆ ನೇತುಬೀಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು