Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 22:2 - ಕನ್ನಡ ಸತ್ಯವೇದವು C.L. Bible (BSI)

2 ಊರಿಗೆ ಊರೇ ಆರ್ಭಟಿಸುತ್ತಿರುವಂತಿದೆ ! ಯುದ್ಧದಲ್ಲಿ ಸತ್ತ ನಿಮ್ಮ ಯೋಧರೆಲ್ಲ ಕಾದಾಟದಿಂದ ಮಡಿದವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ; ನಿನ್ನಲ್ಲಿ ಹತರಾದವರು ಕತ್ತಿಯಿಂದ ಸಾಯಲಿಲ್ಲ, ಅವರು ಯುದ್ಧದಲ್ಲಿ ಸತ್ತವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಊರೇ! ನಿನ್ನಲ್ಲಿ ಹತರಾದವರು ಖಡ್ಗಹತರಲ್ಲ, ಯುದ್ಧದಲ್ಲಿ ಮೃತರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಹಿಂದಿನ ಕಾಲದಲ್ಲಿ ಈ ನಗರವು ಅತ್ಯಂತ ಜನಸಂದಣಿಯಿಂದ ಕೂಡಿತ್ತು. ಈ ನಗರದಲ್ಲಿ ಗದ್ದಲವೂ ಜನರ ಸಂತಸದ ಧ್ವನಿಯೂ ತುಂಬಿತ್ತು. ಆದರೆ ಈಗ ಎಲ್ಲವೂ ಬದಲಾಯಿತು. ನಿಮ್ಮ ಜನರು ಸತ್ತದ್ದು ಖಡ್ಗದಿಂದಲ್ಲ. ಯುದ್ಧದಲ್ಲಿ ಸಾಯದೆ ಬೇರೆ ರೀತಿಯಲ್ಲಿ ಸತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಹತರಾದವರು ಖಡ್ಗದಿಂದ ಹತರಾದವರಲ್ಲ; ಯುದ್ಧದಲ್ಲಿ ಸತ್ತವರೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 22:2
16 ತಿಳಿವುಗಳ ಹೋಲಿಕೆ  

ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದರುಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ, ಅರಮನೆ ಪಾಳುಬಿದ್ದಿದೆ.


ಹೇ, ಸರ್ವೇಶ್ವರಾ ಕಟಾಕ್ಷಿಸು ! ಇಷ್ಟೆಲ್ಲಾ ನೀ ಮಾಡಿದ್ದು ಯಾರಿಗೆಂದು ಯೋಚಿಸು ! ತಾಯಂದಿರು ತಿನ್ನಬೇಕೆ ತಾವು ಆರೈಕೆ ಮಾಡಿದ ತಮ್ಮ ಕರುಳ ಕುಡಿಯನ್ನೇ? ಹತರಾಗಬೇಕೆ ಯಾಜಕರೂ ಪ್ರವಾದಿಗಳೂ ಸ್ವಾಮಿಯ ಪವಿತ್ರಾಲಯದಲ್ಲೆ?


ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’.”


ಇದು ತಾನೋ, ನಿಮ್ಮ ವಸಾಹತುಗಳನ್ನು ನಿರ್ಮಿಸಿಕೊಳ್ಳಲು ಜನರನ್ನು ಕಳುಹಿಸಿದ ನಗರ ! ಇದರ ವರ್ತಕರು ಪ್ರಭುಗಳು !


ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆ ಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು.


ಬಾಬಿಲೋನಿನ ಅರಸನು ಈ ನಗರವನ್ನು ಆಕ್ರಮಿಸುವನು. ಇದು ಅವನ ವಶವಾಗುವುದು ನಿಶ್ಚಯ” ಎಂದು ಸಾರುತ್ತಿದ್ದನು.


ಆಗ ಸರ್ವೇಶ್ವರ ಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಬೆಳಿಗ್ಗೆ ಎದ್ದುನೋಡುವಾಗ ಅವರೆಲ್ಲರೂ ಹೆಣಗಳಾಗಿದ್ದರು.


“ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು - ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ.


ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು; ಓಫೆಲ್ ಗುಡ್ಡವು, ಕೀಸ್ ಕೋವರವು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು.


ಅಯ್ಯೋ, ಅಂದು ಜನಭರಿತವಾಗಿದ್ದ ನಗರಿ ಇಂದು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ ! ರಾಷ್ಟ್ರಗಳಲ್ಲೆಲ್ಲಾ ಅತಿ ಶ್ರೇಷ್ಠಳಾಗಿದ್ದವಳು ವಿಧವೆ ಆಗಿಬಿಟ್ಟಳಲ್ಲಾ ! ಪ್ರಾಂತ್ಯಗಳಲ್ಲೆಲ್ಲಾ ಬಹಳ ಪ್ರವೀಣಳಾಗಿದ್ದವಳು ದಾಸಿಯಂತೆ ಆಗಿಬಿಟ್ಟಿರುವಳಲ್ಲಾ !


ಕುಖ್ಯಾತನಗರವೇ, ಗದ್ದಲಕ್ಕೆ ಪ್ರಸಿದ್ಧವಾದ ಪಟ್ಟಣವೇ, ಹತ್ತಿರದವರೂ ದೂರದವರೂ ನಿನ್ನನ್ನು ಹಾಸ್ಯಮಾಡುವರು.


“ಇರುವ ನಗರ ನಾನೇ, ನನ್ನ ಹೊರತು ಇನ್ನಾರೂ ಇಲ್ಲ” ಎಂದು ಕೊಚ್ಚಿಕೊಂಡು ಯಾವ ಚಿಂತೆಯೂ ಇಲ್ಲದೆ, ನೆಮ್ಮದಿಯಿಂದ ಇದ್ದ ನಿನೆವೆಯ ಗತಿ ನೋಡಿ, ಎಂಥ ಹಾಳುಬಿದ್ದ ಊರಾಗಿದೆ! ಕಾಡುಮೃಗಗಳ ಬೀಡಾಗಿದೆ! ಹಾದುಹೋಗುವವರೆಲ್ಲ ಸಿಳ್ಳುಹಾಕಿ ಕೈತೋರಿಸಿ ಪರಿಹಾಸ್ಯಮಾಡುವಷ್ಟು ಕೀಳಾಗಿದೆ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು