Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 20:2 - ಕನ್ನಡ ಸತ್ಯವೇದವು C.L. Bible (BSI)

2 ಅದಕ್ಕೆ ಮೂರು ವರ್ಷಗಳಿಗೆ ಮುಂಚೆಯೆ ಆಮೋಚನ ಮಗ ಯೆಶಾಯನಿಗೆ ಸರ್ವೇಶ್ವರ ಮುನ್ಸೂಚನೆಯಾಗಿ ಹೀಗೆಂದು ಹೇಳಿದ್ದರು : “ಎದ್ದೇಳು, ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು, ಕಾಲಿಗೆ ಹಾಕಿರುವ ಕೆರವನ್ನು ಕಳಚು.” ಅಂತೆಯೇ ಯೆಶಾಯನು ದಿಗಂಬರನಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅದೇ ಸಮಯದಲ್ಲಿ ಯೆಹೋವನು ಆಮೋಚನ ಮಗನಾದ ಯೆಶಾಯನಿಗೆ, “ಹೋಗು, ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಪಾದರಕ್ಷೆಗಳನ್ನು ತೆಗೆದಿಡು” ಎಂದು ಹೇಳಿದನು. ಅವನು ಹಾಗೆಯೇ ಮಾಡಿ ಬೆತ್ತಲೆಯಾಗಿ ಪಾದರಕ್ಷೆಗಳಿಲ್ಲದೆ ತಿರುಗಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಯೆಹೋವನು ಆಮೋಚನ ಮಗನಾದ ಯೆಶಾಯನಿಗೆ - ಏಳು, ಸೊಂಟದಿಂದ ಗೋಣಿತಟ್ಟನ್ನು ಬಿಚ್ಚು, ಕಾಲಿನಿಂದ ಕೆರವನ್ನು ಕಳಚು ಎಂದು ಇತರರಿಗೆ ಸೂಚನೆಯಾಗಿ ಅಪ್ಪಣೆಕೊಟ್ಟನು. ಅವನು ಹಾಗೆಯೇ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರುಗುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆ ಸಮಯದಲ್ಲಿ ಆಮೋಚನ ಮಗನಾದ ಯೆಶಾಯನೊಂದಿಗೆ ಯೆಹೋವನು ಮಾತನಾಡಿದನು. “ನಿನ್ನ ಶೋಕವಸ್ತ್ರಗಳನ್ನು ತೆಗೆದುಹಾಕು. ನಿನ್ನ ಕಾಲುಗಳಿಂದ ಪಾದರಕ್ಷೆಗಳನ್ನು ತೆಗೆದುಬಿಡು” ಎಂದು ಯೆಹೋವನು ಹೇಳಿದಾಗ ಯೆಶಾಯನು ಆತನಿಗೆ ವಿಧೇಯನಾದನು. ಯೆಶಾಯನು ಪಾದರಕ್ಷೆಗಳಿಲ್ಲದೆ, ಬಟ್ಟೆಗಳಿಲ್ಲದೆ ಅಡ್ಡಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅದೇ ಸಮಯದಲ್ಲಿ ಯೆಹೋವ ದೇವರು ಆಮೋಚನ ಮಗ ಯೆಶಾಯನಿಗೆ, “ನಿನ್ನ ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಕೆರಗಳನ್ನು ತೆಗೆದಿಡು,” ಎಂದು ಹೇಳಿದರು. ಅವನು ಹಾಗೆ ಮಾಡಿ, ಬೆತ್ತಲೆಯಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 20:2
27 ತಿಳಿವುಗಳ ಹೋಲಿಕೆ  

ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು - ಇವೇ ಈತನ ಉಡುಗೆ. ಮಿಡತೆ ಮತ್ತು ಕಾಡುಜೇನು ಇವೇ ಈತನ ಆಹಾರ.


ಆಗ ಮೀಕನು: “ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು; ಬೆತ್ತಲೆಯಾಗಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವೆನು; ಗುಳ್ಳೆನರಿಗಳಂತೆ ಊಳಿಡುವೆನು, ಗೂಬೆಯಂತೆ ಘೂಂಕರಿಸುವೆನು.


ಅಲ್ಲಿಗೆ ಸೇರಿದ ಮೇಲೆ, ಅವನೂ ತನ್ನ ಬಟ್ಟೆಗಳನ್ನು ತೆಗೆದುಹಾಕಿ, ಸಮುವೇಲನ ಮುಂದೆ ಪರವಶನಾಗಿ ಮಾತಾಡುತ್ತಾ ಆ ದಿನ ಹಗಲಿರುಳು ಬೆತ್ತಲೆಯಾಗಿ ಬಿದ್ದುಕೊಂಡಿದ್ದನು. ಆದುದರಿಂದ “ಏನು, ಸೌಲನೂ ಪ್ರವಾದಿಯಾಗಿಬಿಟ್ಟನೋ?” ಎಂಬ ಗಾದೆಯುಂಟಾಯಿತು.


ಆ ದಿನದಲ್ಲಿ ಯಾವ ಪ್ರವಾದಿಯೂ ತನಗಾಗಿರಬಹುದಾದ ದರ್ಶನಗಳನ್ನು ಪ್ರಕಟಿಸಲು ಹೆಮ್ಮೆಪಡುವುದಿಲ್ಲ. ಪ್ರವಾದಿಯಂತೆ ನಟಿಸುವುದಿಲ್ಲ. ಪ್ರವಾದಿಯ ವೇಷವನ್ನು ಧರಿಸುವುದಿಲ್ಲ.


ಗಾರಿಗೆಯನ್ನು ತಿನ್ನದೆ, ರುಮಾಲನ್ನು ಸುತ್ತಿಕೊಂಡು, ಕೆರಗಳನ್ನು ಮೆಟ್ಟಿಕೊಂಡು ಇರುವಿರಿ; ನೀವು ಗೋಳಾಡುವುದಿಲ್ಲ, ಅಳುವುದಿಲ್ಲ. ಆದರೆ ನಿಮ್ಮ ಅಧರ್ಮದಿಂದ ಕ್ಷೀಣವಾಗಿ ನರಳುವಿರಿ. ಒಬ್ಬರೆದುರಿಗೆ ಒಬ್ಬರು ನರಳುವಿರಿ.


ಸದ್ದಿಲ್ಲದೆ ಮೊರೆಯಿಡು, ವಿಯೋಗದುಃಖ ತೋರಿಸಬೇಡ. ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ.”


ಶಾಫೀರಿನವರೇ, ಬೆತ್ತಲೆಯಾಗಿ ಲಜ್ಜೆಗೆಟ್ಟು ತೊಲಗಿರಿ. ಚಾನಾನಿನವರಿಗೆ ಹೊರಬರಲು ಧೈರ್ಯವಿಲ್ಲ. ಬೇತೇಲಿನವರ ಗೋಳಾಟ ಕೇಳಿಬಂದಾಗ, ಅಲ್ಲಿ ನಿಮಗೆ ಆಶ್ರಯವಿಲ್ಲವೆಂದು ಗೊತ್ತಾಗುವುದು.


ಬಾಬಿಲೋನಿನ ವಿಷಯವಾಗಿ ಆಮೋಚನ ಮಗ ಯೆಶಾಯನಿಗೆ ಕೇಳಿಬಂದ ದೇವವಾಣಿ :


ನಾನು ನನ್ನ ಇಬ್ಬರು ಸಾಕ್ಷಿಗಳನ್ನು ಕಳುಹಿಸುವೆನು. ಅವರು ಗೋಣಿತಟ್ಟನ್ನು ಉಟ್ಟುಕೊಂಡು ಒಂದು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದಿಸುವರು.”


ಅಲ್ಲದೆ ದೆವ್ವ ಹಿಡಿದಿದ್ದ ಮನುಷ್ಯನು ಅವರ ಮೇಲೆ ಹಾರಿಬಿದ್ದು, ಅಪ್ಪಳಿಸಿ, ಅವರೆಲ್ಲರನ್ನೂ ಅಧೀನಪಡಿಸಿದನು. ಅವರು ಗಾಯಗೊಂಡು, ನಗ್ನರಾಗಿ, ಆ ಮನೆಯಿಂದ ಓಡಿಹೋದರು.


ಆಗ ಯೇಸುವಿನ ಆಪ್ತಶಿಷ್ಯನು ಪೇತ್ರನಿಗೆ, “ಅವರೇ ಪ್ರಭು” ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು.


ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.


ಅವರು ಎಷ್ಟು ವರ್ಷ ತಮ್ಮ ಅಧರ್ಮದ ಫಲವನ್ನು ಅನುಭವಿಸಬೇಕೋ ಅಷ್ಟು ದಿವಸ ಅಂದರೆ, ಮುನ್ನೂರತೊಂಬತ್ತು ದಿವಸ ನೀನು ಮಲಗಿಕೊಂಡಿರಬೇಕೆಂದು ನಿನಗೆ ನೇಮಿಸಿದ್ದೇನೆ; ಅಷ್ಟು ದಿವಸ ಇಸ್ರಯೇಲ್ ವಂಶದವರ ಅಧರ್ಮವನ್ನು ನೀನು ಹೊತ್ತುಕೊಂಡಿರಬೇಕು.


ಅವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದ; ಅವನ ಸೊಂಟಕ್ಕೆ ತೊಗಲಿನ ನಡುಕಟ್ಟು ಇತ್ತು,” ಎಂದರು. ಆಗ ಅರಸನು, “ಆ ವ್ಯಕ್ತಿ ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದುಕೊಂಡನು.


ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದಳು. “ಈ ದಿನ ಇಸ್ರಯೇಲರ ಅರಸರು ಎಂಥ ಅಗೌರವದಿಂದ ನಡೆದುಕೊಂಡರು! ಹುಚ್ಚರಲ್ಲಿ ಒಬ್ಬರಂತೆ ತಮ್ಮ ಜನಸಾಮಾನ್ಯರಾದ ದಾಸಿಯರ ಮುಂದೆ ಬೆತ್ತಲೆಯಾಗಿದ್ದರಲ್ಲಾ!” ಎಂದಳು.


ಆಗ ಸರ್ವೇಶ್ವರನ ಸೇನಾಪತಿ, “ನಿನ್ನ ಕಾಲಿನಿಂದ ಕೆರಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು,” ಎಂದು ಹೇಳಿದನು. ಯೆಹೋಶುವ ಅಂತೆಯೇ ಮಾಡಿದನು.


ದೇವರು ಅವನಿಗೆ, “ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರಭೂಮಿ,” ಎಂದು ಹೇಳಿದರು.


ಅವನು ಪೌಲನ ಸೊಂಟಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳನ್ನು ಬಿಗಿದುಕೊಂಡು, “ಪವಿತ್ರಾತ್ಮ ಹೀಗೆನ್ನುತ್ತಾರೆ: ‘ಈ ಸೊಂಟಪಟ್ಟಿಯು ಯಾರದೋ ಅವನನ್ನು ಜೆರುಸಲೇಮಿನಲ್ಲಿ ಯೆಹೂದ್ಯರು ಹೀಗೆಯೇ ಕಟ್ಟಿ, ಅನ್ಯಧರ್ಮೀಯರ ವಶಕ್ಕೆ ಒಪ್ಪಿಸುವರು,’ “ ಎಂದನು.


ದಾವೀದನು, ಮುಖವನ್ನು ಮರೆಮಾಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೇಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು.


ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ I ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ II


ಜುದೇಯ ನಾಡಿನ ಅರಸರಾಗಿದ್ದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಜುದೇಯ ಮತ್ತು ಜೆರುಸಲೇಮ್ ನಗರವನ್ನು ಕುರಿತು ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ ಇದು :


ಇದಲ್ಲದೆ, ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ : “ನೀವು ಗೋಣಿತಟ್ಟನ್ನು ಕಟ್ಟಿಕೊಂಡು, ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ಬಳಿಗೆ ಹೋಗಿ


ಎಲ್ಲರ ತಲೆಬೋಳು, ಎಲ್ಲರ ಗಡ್ಡ ವಿಕಾರ, ಎಲ್ಲರ ಕೈ ಗಾಯ. ಎಲ್ಲರ ನಡುವಿಗೆ ಗೋಣಿತಟ್ಟು.


“ನರಪುತ್ರನೇ, ನೀನು ಒಂದು ಚದರ ಇಟ್ಟಿಗೆಯನ್ನು ತೆಗೆದುಕೊಂಡು ನಿನ್ನ ಮುಂದೆ ಇಟ್ಟು ಅದರಲ್ಲಿ ಪಟ್ಟಣದ ನಕ್ಷೆಯನ್ನು ಅಂದರೆ, ಜೆರುಸಲೇಮಿನ ನಕ್ಷೆಯನ್ನು ಬರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು