Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 2:19 - ಕನ್ನಡ ಸತ್ಯವೇದವು C.L. Bible (BSI)

19 ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ಅವಿತುಕೊಳ್ಳುವರು ಜನರು ಕಲ್ಲುಬಂಡೆಗಳ ಗುಹೆಗಳಲ್ಲಿ, ನೆಲದ ಹಳ್ಳಕೊಳ್ಳಗಳಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಯೆಹೋವನು ಭೂಮಂಡಲವನ್ನು ನಡುಗಿಸಲು ಏಳುವಾಗ, ಮನುಷ್ಯರು ಆತನ ಭಯಂಕರ ಕೋಪಕ್ಕೂ, ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಗವಿಗಳಲ್ಲಿಯೂ, ನೆಲದ ಹಳ್ಳಕೊಳ್ಳಗಳಲ್ಲಿಯೂ ಅಡಗಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಯೆಹೋವನು ಭೂಮಂಡಲವನ್ನು ಕಂಪನ ಮಾಡುವದಕ್ಕೆ ಏಳುವಾಗ ಮನುಷ್ಯರು ಆತನ ಭಯಂಕರತನಕ್ಕೂ ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಗವಿಗಳಲ್ಲಿಯೂ ನೆಲದ ಹಳ್ಳಕೊಳ್ಳಗಳಲ್ಲಿಯೂ ಸೇರಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಜನರು ಬಂಡೆಗಳ ಸಂದುಗಳಲ್ಲಿಯೂ ನೆಲದ ಬಿರುಕುಗಳಲ್ಲಿಯೂ ಅಡಗಿಕೊಳ್ಳುವರು. ಜನರು ಯೆಹೋವನಿಗೂ ಆತನ ಪರಾಕ್ರಮಕ್ಕೂ ಭಯಪಡುವರು. ಯೆಹೋವನು ಎದ್ದು ಈ ಪ್ರಪಂಚವನ್ನು ಅಲುಗಾಡಿಸುವಾಗ ಇವೆಲ್ಲಾ ಸಂಭವಿಸುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಯೆಹೋವ ದೇವರು ಭೂಮಿಯನ್ನು ನಡುಗಿಸಲು ಎದ್ದಾಗ, ಯೆಹೋವ ದೇವರಿಗೂ ಅವರ ಮಹಿಮೆಗೂ, ಅವರ ಘನಕ್ಕೂ ಹೆದರಿ, ಬಂಡೆಗಳ ಸಂದುಗಳಿಗೂ, ಭೂಮಿಯ ಗವಿಗಳಿಗೂ ಜನರು ಸೇರಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 2:19
41 ತಿಳಿವುಗಳ ಹೋಲಿಕೆ  

ಸ್ವಾಮಿಯ ಭಯಂಕರ ಕೋಪಕ್ಕೆ ಅಂಜಿ, ಆ ಮಹೋನ್ನತನ ವೈಭವಕ್ಕೆ ಹೆದರಿ ಬಂಡೆಯ ಗುಹೆಗಳೊಳಗೆ ನುಗ್ಗಿರಿ, ನೆಲದ ಬಿಲಗಳಲ್ಲಿ ಅವಿತುಕೊಳ್ಳಿರಿ.


ಅದೇ ಸಮಯದಲ್ಲಿ ‘ಪರ್ವತಗಳೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ, ನಮ್ಮನ್ನು ನುಂಗಿಬಿಡಿ,’ ಎಂದು ಕೂಗಿಕೊಳ್ಳುವರು.


ಇಸ್ರಯೇಲಿನ ಪಾಪಕ್ಕೆ ಆಸ್ಪದ ಆಗಿದ್ದ ಆವೆನಿನ ಪೂಜಾಸ್ಥಾನಗಳು ನಾಶವಾಗುವುವು. ಪಾಳುಬಿದ್ದ ಬಲಿಪೀಠಗಳ ಮೇಲೆ ಮುಳ್ಳುಕಳ್ಳಿಗಳು ಹುಟ್ಟಿಕೊಳ್ಳುವುವು. ಅಲ್ಲಿನ ಜನರು: ‘ಪರ್ವತವೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ ನಮ್ಮನ್ನು ನುಂಗಿಬಿಡಿ’ ಎಂದು ಕೂಗಿಕೊಳ್ಳುವರು.”


ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ನುಗ್ಗುವರು ಜನರು ಕಲ್ಲುಬಂಡೆಗಳ ಸಂದುಗೊಂದುಗಳಲ್ಲಿ, ಶಿಲೆಗಳ ಸೀಳುಪಾಳುಗಳಲ್ಲಿ.


ಆಗ ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು.


ಅಂದು ದೇವರ ಧ್ವನಿಗೆ ಭೂಮಿಯು ನಡುಗಿತು. ಇಂದಾದರೋ, “ಇನ್ನೂ ಒಂದು ಸಾರಿ ನಾನು ಭೂಮಿಯನ್ನಷ್ಟೇ ಅಲ್ಲ, ಆಕಾಶವನ್ನೂ ನಡುಗಿಸುತ್ತೇನೆ,” ಎಂದು ಪ್ರತಿಜ್ಞೆಮಾಡಿರುತ್ತಾರೆ.


“ಸ್ವಲ್ಪಕಾಲದಲ್ಲೇ ಮತ್ತೊಮ್ಮೆ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಮರುಭೂಮಿಯನ್ನೂ ಅದರಿಸುವೆನು.


ಅನಂತರ ಶ್ವೇತವರ್ಣದ ಒಂದು ಮಹಾಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.


ಆಗ ಮಿಂಚು, ಗುಡುಗು, ಗರ್ಜನೆಗಳುಂಟಾದವು. ಇದಲ್ಲದೆ, ಭಯಂಕರವಾದ ಭೂಕಂಪ ಉಂಟಾಯಿತು. ಮಾನವ ಇತಿಹಾಸದಲ್ಲೇ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.


ಅದೇ ಗಳಿಗೆಯಲ್ಲಿ ಒಂದು ಭೀಕರ ಭೂಕಂಪವಾಯಿತು. ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಏಳು ಸಾವಿರ ಜನರು ಆ ಭೂಕಂಪದಲ್ಲಿ ಹತರಾದರು. ಉಳಿದವರು ಭಯಭೀತರಾಗಿ ಸ್ವರ್ಗದಲ್ಲಿರುವ ದೇವರ ಮಹಿಮೆಯನ್ನು ಸ್ತುತಿಸಿದರು.


ಆಂಥ ದಿನಗಳಲ್ಲಿ ಮನುಷ್ಯರು ಮರಣವನ್ನು ಅಪೇಕ್ಷಿಸುವರು. ಆದರೆ ಅದು ಅವರಿಗೆ ಪ್ರಾಪ್ತವಾಗುವುದಿಲ್ಲ. ಸತ್ತರೆ ಸಾಕೆಂದು ಬಯಸುವರು; ಪ್ರಯತ್ನಿಸುವರು. ಆದರೆ ಮೃತ್ಯು ಅವರಿಂದ ದೂರ ಸರಿಯುವುದು.


ಇಂಥವರಿಗೆ ಈ ಲೋಕ ತಕ್ಕ ಸ್ಥಳವಾಗಿರಲಿಲ್ಲ. ಈ ಕಾರಣದಿಂದ, ಅವರು ಕಾಡು ಬೆಟ್ಟಗಳಲ್ಲೂ ಗುಹೆಕಣಿವೆಗಳಲ್ಲೂ ತಲೆಮರೆಸಿಕೊಂಡಿದ್ದರು.


ಇವರು ಪ್ರಭುವಿನ ಸನ್ನಿಧಿಯಿಂದಲೂ ಅವರ ಪ್ರಭಾವದ ಮಹಿಮೆಯಿಂದಲೂ ಬಹಿಷ್ಕೃತರಾಗಿ, ನಿತ್ಯದಂಡನೆಗೆ ಗುರಿಯಾಗುವರು.


ನೆಲದ ಮೇಲೆ ಹರಿದಾಡುವ ಹಾವುಹಲ್ಲಿಗಳಂತೆ ಅವರು ಮಣ್ಣು ಮುಕ್ಕುವರು; ಗಡಗಡನೆ ನಡುಗುತ್ತಾ ಬಿಲದಿಂದ ಈಚೆ ಬರುವರು. ಸರ್ವೇಶ್ವರ ಎಂಬ ನಮ್ಮ ದೇವರಾದ ನಿಮ್ಮ ಕಡೆಗೆ ಭಯಭಕ್ತಿಯಿಂದ ತಿರುಗಿಕೊಳ್ಳುವರು.


ಸರ್ವೇಶ್ವರ ಹೀಗೆನ್ನುತ್ತಾರೆ : “ಇಗೋ, ನಾನು ಬಹುಮಂದಿ ಬೆಸ್ತರನ್ನು ಕಳಿಸುವೆನು, ಅವರು ನನ್ನ ಜನರನ್ನು ಹಿಡಿಯುವರು, ಬಳಿಕ ಬಹುಜನ ಬೇಡರನ್ನು ಕಳಿಸುವೆನು. ಅವರು ಎಲ್ಲ ಬೆಟ್ಟಗುಡ್ಡಗಳಿಂದಲೂ ಬಂಡೆಗಳ ಸಂದುಗೊಂದುಗಳಿಂದಲೂ ನನ್ನ ಜನರನ್ನು ಹೊರಡಿಸಿ ಬೇಟೆಯಾಡುವರು.


ಸರ್ವೇಶ್ವರ ಸ್ವಾಮಿ ವಿಧಿಸುವ ಪ್ರತಿಯೊಂದು ಪೆಟ್ಟು ತಾಳ ತಮ್ಮಟೆಯಂತೆ ಅವರ ಮೇಲೆ ಬೀಳುವುದು. ಸರ್ವೇಶ್ವರ ತಾವೇ ಅವರ ವಿರುದ್ಧವಾಗಿ ಕೈಬೀಸಿ ಯುದ್ಧಮಾಡುವರು.


ಹೇ ಪ್ರಭು, ಎಚ್ಚರಗೊಳ್ಳು : ನ್ಯಾಯವನು ದೇವಾ, ನಿರ್ಣಯಿಸು I ಕೋಪದಿಂದೆದ್ದು ವಿರೋಧಿಗಳ ಕ್ರೋಧವನು ಭಂಗಪಡಿಸು II


ಇವರಿಬ್ಬರೂ ಫಿಲಿಷ್ಟಿಯರ ಕಾವಲುದಂಡಿನವರಿಗೆ ಕಾಣಿಸಿಕೊಂಡಾಗ ಅವರು, “ಇಗೋ, ಹಿಬ್ರಿಯರು ತಾವು ಅಡಗಿಕೊಂಡಿದ್ದ ಕಿಂಡಿಗಳಿಂದ ಹೊರಗೆ ಬರುತ್ತಲಿದ್ದಾರೆ,” ಎಂದು ತಮ್ಮೊಳಗೆ ಮಾತಾಡಿಕೊಂಡರು.


ಇಸ್ರಯೇಲರಿಗೆ ಕೇಡು ಬಂದೊದಗಿತು. ತಾವು ಇಕ್ಕಟ್ಟಿನಲ್ಲಿ ಇದ್ದೇವೆಂದು ಅವರು ತಿಳಿದು ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು.


ಅದರ ಸ್ಥಾನದಿಂದ ಭೂಮಿಯನೆ ಕದಲಿಸುತ್ತಾನೆ ಅದರ ಸ್ತಂಭಗಳು ನಡುಗುವಂತೆ ಮಾಡುತ್ತಾನೆ.


ಅವರೆಲ್ಲ ಬಂದು ಕಡಿದಾದ ಕಣಿವೆಗಳಲ್ಲಿಯೂ ಬಂಡೆಗಳ ಸಂದುಗೊಂದುಗಳಲ್ಲಿಯೂ ಮುಳ್ಳುಪೊದೆಗಳಲ್ಲಿಯೂ ಗೋಮಾಳಗಳಲ್ಲಿಯೂ ಹುಳುಹುಪ್ಪಟೆಗಳಂತೆ ಮುತ್ತಿಕೊಳ್ಳುವರು.


ಸೇನಾಧೀಶ್ವರ ಸರ್ವೇಶ್ವರನು ಕೋಪೋದ್ರೇಕದಿಂದ ರೋಷಾವೇಶದಿಂದ ಕೆರಳುವ ದಿನದಂದು ಆಕಾಶಮಂಡಲ ನಡುಗುವುದು, ಭೂಮಂಡಲ ಸ್ಥಳಪಲ್ಲಟಗೊಳ್ಳುವುದು.


ಇಗೋ, ಸರ್ವೇಶ್ವರ ಬರಿದುಮಾಡುವರು ಧರೆಯನು, ನಿರ್ಜನ ಪ್ರದೇಶವಾಗಿಸುವರು ವಿರೂಪಗೊಳಿಸಿ ಅದನು, ಚದರಿಸುವರು ಅದರ ನಿವಾಸಿಗಳನು.


ಬೀಳುವನು ಕುಳಿಯಲ್ಲಿ, ಭಯಭೀತಿಯ ಸಪ್ಪಳಕ್ಕೆ ಓಡಿಹೋಗುವವನು, ಸಿಕ್ಕಿಬೀಳುವನು ಬಲೆಯಲ್ಲಿ ಕುಳಿಯ ಹತ್ತಿ ಬರುವವನು. ತೆರೆದಿವೆ ನೋಡಿ, ಆಕಾಶದ ದ್ವಾರಗಳು, ಕಂಪಿಸುತ್ತಿವೆ ಬುವಿಯ ಅಸ್ತಿವಾರಗಳು.


ಬಿರುಕು ಬಿಡುವುದು ಭೂಮಿ ಸೀಳುಪಾಳಾಗಿ ಕತ್ತರಿಸುವುದು ಕದಲಿಹೋಗಿ.


ಸರ್ವೇಶ್ವರ ಹೀಗೆನ್ನೆತ್ತಾರೆ : “ಈಗ ಏಳುವೆನು. ಈಗಲೇ ಎದ್ದು ಸಿದ್ಧನಾಗುವೆನು. ಇದೀಗಲೇ ನನ್ನ ಮಹಿಮೆಯನ್ನು ತೋರಿಸುವೆನು.


ರಾಹುತರ ಹಾಗೂ ಬಿಲ್ಲುಗಾರರ ಅಬ್ಬರಕ್ಕೆ ಓಡುತ್ತಿರುವವರು ಪಟ್ಟಣಿಗರೆಲ್ಲರು ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ. ಅತ್ತ ಬಂಡೆಗಳನ್ನು ಹತ್ತುತ್ತಿದ್ದಾರೆ. ಪ್ರತಿಯೊಂದು ಪಟ್ಟಣ ಪಾಳುಬಿದ್ದ ಬೀಡು ಅದರಲ್ಲಿ ಮತ್ತೆ ವಾಸಮಾಡುವವರು ಒಬ್ಬರೂ ಇಲ್ಲ.


“ಮೋವಾಬ್ಯರೇ, ನಗರಗಳನ್ನು ಬಿಟ್ಟು ಹೋಗಿ ಬಂಡೆಗಳ ಗುಹೆಯಲ್ಲಿ ವಾಸಮಾಡಿ. ಹಳ್ಳಕೊಳ್ಳಗಳ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತೆ ಜೀವಿಸಿರಿ.


“ಮತ್ತು ಅವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ಹಾಳು ಪ್ರದೇಶಗಳಲ್ಲಿ ಇರುವವರನ್ನು ಖಡ್ಗವು ಹತಿಸುವುದು; ಬಯಲಿನಲ್ಲಿ ಇರುವವರನ್ನು ನಾನು ಮೃಗಗಳಿಗೆ ತುತ್ತು ಮಾಡುವೆನು; ಗುಹೆದುರ್ಗಗಳಲ್ಲಿ ಇರುವವರನ್ನು ವ್ಯಾಧಿಯು ಸಾಯಿಸುವುದು.


“ನಿನೆವೆಯೇ, ನೀನು ಸಹ ಮತ್ತಳಾಗಿ ತತ್ತರಿಸುವೆ. ಶತ್ರುಗಳಿಂದ ಆಶ್ರಯ ಕೋರುವೆ.


ಸಕಲ ಜನಾಂಗಗಳನ್ನು ನಡುಗಿಸುವೆನು. ಆಗ ಎಲ್ಲ ರಾಷ್ಟ್ರಗಳ ಸಿರಿಸಂಪತ್ತು ಇಲ್ಲಿಗೆ ಬರುವುದು. ಈ ಆಲಯವನ್ನು ವೈಭವದಿಂದ ತುಂಬಿಸುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.


ಎದೆಗುಂದಿದವರಾದರು ಆ ವಿದೇಶಿಯರು ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು