ಯೆಶಾಯ 17:9 - ಕನ್ನಡ ಸತ್ಯವೇದವು C.L. Bible (BSI)9 ಆ ದಿನದಂದು ನಾಡಿನ ಸುಭದ್ರವಾದ ನಗರಗಳು ನಿರ್ಜನ ಪ್ರದೇಶಗಳಾಗುವುವು. ಇಸ್ರಯೇಲರಿಗೆ ಹೆದರಿ ಅಮೋರ್ಯರು ಮತ್ತು ಹಿವ್ವಿಯರು ಬಿಟ್ಟುಹೋದ ಹಾಳು ನಿವೇಶನಗಳಂತಾಗುವುವು, ನಾಡೆಲ್ಲ ಹಾಳುಬೀಳುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆ ದಿನದಲ್ಲಿ ದೇಶದ ಬಲವಾದ ಕೋಟೆಗಳು ಪೂರ್ವದಲ್ಲಿ ಇಸ್ರಾಯೇಲರ ಭಯದಿಂದ ನಿರ್ಜನವಾಗಿದ್ದ, ಅದು ಅಡವಿಯಲ್ಲಿಯೂ, ಬೆಟ್ಟಗಳ ತುದಿಯ ಮೇಲೂ ಕಾಣುವ ಹಾಳು ನಿವೇಶನಗಳಂತಿರುವವು, ಅಂತೂ ದೇಶವೆಲ್ಲಾ ಹಾಳಾಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆ ದಿನದಲ್ಲಿ ದೇಶದ ಬಲವಾದ ಕೋಟೆಗಳು [ಪೂರ್ವದಲ್ಲಿ] ಇಸ್ರಾಯೇಲ್ಯರ ಭಯದಿಂದ ನಿರ್ಜನವಾಗಿದ್ದ ಈಗ ಅಡವಿಯಲ್ಲಿಯೂ ಬೆಟ್ಟಗಳ ತುದಿಯ ಮೇಲೂ ಕಾಣುವ ಪಾಳು ನಿವೇಶನಗಳಂತಿರುವವು; ಅಂತು ದೇಶವೆಲ್ಲಾ ಹಾಳಾಗಿರುವದು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆ ಸಮಯದಲ್ಲಿ ಕೋಟೆಗೋಡೆಗಳಿರುವ ಎಲ್ಲಾ ಪಟ್ಟಣಗಳು ನಿರ್ಜನವಾಗುವದು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವ ಕಾಲದಲ್ಲಿ ಹೇಗೆ ಅಡವಿಗಳಂತೆಯೂ ಬೆಟ್ಟಗಳಂತೆಯೂ ಇದ್ದವೋ ಅದೇ ರೀತಿಯಲ್ಲಿ ಇರುವವು. ಆ ಸಮಯದಲ್ಲಿ ಇಸ್ರೇಲರು ದೇಶದೊಳಗೆ ಪ್ರವೇಶಿಸುವಾಗ ಅಲ್ಲಿಯ ನಿವಾಸಿಗಳೆಲ್ಲರೂ ಓಡಿಹೋದರು. ಮುಂಬರುವ ದಿವಸಗಳಲ್ಲಿ ದೇಶವು ಮತ್ತೆ ನಿರ್ಜನವಾಗುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆ ದಿನದಲ್ಲಿ ಅವರು ಇಸ್ರಾಯೇಲರ ನಿಮಿತ್ತವಾಗಿ ಬಲವಾದ ಪಟ್ಟಣಗಳು ದಟ್ಟಡವಿಯ ಹಾಗಿದ್ದು ಹಾಳುಬೀಳುವುದು. ಅಂತು ದೇಶವೆಲ್ಲಾ ಹಾಳಾಗಿರುವದು. ಅಧ್ಯಾಯವನ್ನು ನೋಡಿ |