Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 17:11 - ಕನ್ನಡ ಸತ್ಯವೇದವು C.L. Bible (BSI)

11 ಬೀಜವನ್ನು ನೆಟ್ಟ ದಿನವೇ ಬೇಲಿಕಟ್ಟಿದೆ. ಮಾರನೆಯ ದಿನವೇ ಅದು ಮೊಳೆಯುವಂತೆ ಮಾಡಿದೆ. ಆದರೂ ನಿನಗೆ ಸಿಗುವ ಸುಗ್ಗಿ, ವ್ಯಾಧಿ ಮತ್ತು ಅತೀವ ವ್ಯಥೆಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಬೀಜವನ್ನು ನೆಟ್ಟ ದಿನದಲ್ಲಿಯೇ ಬೇಲಿಕಟ್ಟಿ, ಮರುದಿನ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಬೀಜವನ್ನು ನೆಟ್ಟ ದಿವಸದಲ್ಲಿಯೇ ಬೇಲಿಕಟ್ಟಿ, ಮಾರಣೆಯ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ; ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತವ್ಯಥೆಯ ದಿವಸವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಒಂದು ದಿವಸ ಆ ಕೊಂಬೆಗಳನ್ನು ನೆಟ್ಟು ಅದು ಚಿಗುರುವಂತೆ ಮಾಡುವಿರಿ. ಮರುದಿವಸ ಅದು ಚಿಗುರುವದು. ಸುಗ್ಗಿಯ ಕಾಲದಲ್ಲಿ ನೀವು ದ್ರಾಕ್ಷಿತೋಟಕ್ಕೆ ಹೋದಾಗ ದ್ರಾಕ್ಷಿಬಳ್ಳಿಗಳೆಲ್ಲಾ ರೋಗದಿಂದ ಸತ್ತುಹೋಗಿರುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಬೆಳೆಸಲು ಸಸಿಯನ್ನು ಹಾಕಿದ ದಿನದಲ್ಲಿ ಬೇಲಿಹಾಕಿ ಮತ್ತು ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆಯುವಂತೆ ಮಾಡಿದರೂ, ರೋಗದ ಹಾಗೂ ಗುಣಪಡಿಸಲಾರದ ಬೇನೆಯ ದಿನದಲ್ಲಿ ನಿನ್ನ ಸುಗ್ಗಿ ಏನೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 17:11
18 ತಿಳಿವುಗಳ ಹೋಲಿಕೆ  

ಇವರು ಗಾಳಿಯನ್ನು ಬಿತ್ತುತ್ತಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅವರ ಪೈರು ತೆನೆಗೆ ಬಾರದು. ಕಾಳು ಮೊಳೆತರೂ ಕೂಳು ದೊರಕದು. ಒಂದು ವೇಳೆ ದೊರಕಿದರೂ ಅನ್ಯಜನರು ಅದನ್ನು ಕಬಳಿಸಿಬಿಡುವರು.


ನನಗೆ ತಿಳಿದಮಟ್ಟಿಗೆ, ಕೆಟ್ಟದ್ದನ್ನು ನೆಡುವವರು, ದುಷ್ಟತನವನು ಬಿತ್ತುವವರು, ಅದನ್ನೆ ಕೊಯ್ಯುವರು.


ಆದರೆ ನಿನ್ನದು ಕಠಿಣ ಹೃದಯ, ಮೊಂಡುಸ್ವಭಾವ. ಆದ್ದರಿಂದ ದೇವರ ಕೋಪ ಹಾಗು ನ್ಯಾಯವಾದ ತೀರ್ಪು ವ್ಯಕ್ತವಾಗುವ ದಿನದಂದು ನಿನಗೆ ವಿಧಿಸಲಾಗುವ ಶಿಕ್ಷೆಯನ್ನು ನೀನಾಗಿಯೇ ಸಂಗ್ರಹಿಸಿಕೊಳ್ಳುತ್ತಿದ್ದೀಯೆ.


ಎಫ್ರಯಿಮಿಗೆ ಏಟು ಬಿದ್ದಿದೆ; ಅವರ ವಂಶದ ಬೇರು ಬತ್ತಿಹೋಗಿದೆ. ಅವರು ಫಲಹೀನರಾಗಿದ್ದಾರೆ. ಮಕ್ಕಳನ್ನು ಹೆತ್ತರೂ ಅವಳ ಕರುಳ ಕುಡಿಯನ್ನು ಕತ್ತರಿಸಿಹಾಕುವೆನು.”


ಪ್ರವಾದಿಗಳೇ ಸುಳ್ಳು ಪ್ರವಾದನೆಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”


ಚಿಗುರಿ ಹೂಬಿಡುವುದದು ಬೆಳಗಿನಲಿ I ಸೊರಗಿ ತರಗಾಗುವುದು ಬೈಗಿನಲಿ II


ನೀವು ದುಡಿದದ್ದೆಲ್ಲಾ ವ್ಯರ್ಥವಾಗುವುದು. ನಿಮ್ಮ ಹೊಲಗದ್ದೆಗಳಲ್ಲಿ ಬೆಳೆಯಾಗದು; ನಿಮ್ಮ ತೋಟ ತೋಪುಗಳ ಮರಗಳು ಫಲಿಸವು.


ದ್ರಾಕ್ಷಾವ್ಯವಸಾಯವನ್ನು ನೀವು ಎಷ್ಟುಮಾಡಿದರೂ ಅದರ ಹಣ್ಣುಗಳನ್ನು ಹುಳುಗಳೇ ತಿಂದುಹಾಕುವುವು; ನೀವು ಕೂಡಿಸಿಕೊಳ್ಳಲು ನಿಮಗೆ ಬಿಡವು. ಅವುಗಳ ರಸವನ್ನು ರುಚಿನೋಡಗೊಡಿಸವು.


ಅದು ಕೊಯ್ದ ಹೊಲದಂತಿರುವುದು, ತೆನೆಕತ್ತರಿಸಿದ ಹುಲ್ಲಿನಂತಿರುವುದು. ಕೂಳೆಯನ್ನೂ ಬಿಡದೆ ಆಯ್ದುಕೊಂಡ ರೆಫಾಯಿಮ್ ಕಣಿವೆಯಂತೆ ಇರುವುದು.


ಬೀಜಗಳು ಹೆಂಟೆಗಳ ಅಡಿಯಲ್ಲೇ ಒಣಗುತ್ತಿವೆ; ಉಗ್ರಾಣಗಳು ಬರಿದಾಗಿವೆ; ದವಸಧಾನ್ಯದ ಕೊರತೆಯಿಂದ ಕಣಜಗಳು ಕುಸಿದುಬಿದ್ದಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು