Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 16:6 - ಕನ್ನಡ ಸತ್ಯವೇದವು C.L. Bible (BSI)

6 ಯೆಹೂದ ಜನತೆ ಪೇಳ್ವರವರಿಗೆ : “ನಮ್ಮ ಕಿವಿಗೆ ಬಿದ್ದಿದೆ ಮೋವಾಬ್ಯರ ಮದ, ತಿಳಿದಿದೆ ನಮಗೆ ಅವರ ದುರಹಂಕಾರ, ಅವರ ಒಣ ಡಂಭಾಚಾರ, ಗರ್ವೋದ್ರೇಕ".

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಮೋವಾಬ್ಯರ ಅಹಂಕಾರವನ್ನು, ಗರ್ವವನ್ನು, ಕೊಚ್ಚಿಕೊಳ್ಳುವಿಕೆಯನ್ನು, ಕೋಪವನ್ನು ನಾವು ಕೇಳಿದ್ದೇವೆ. ಅವರು ಕೊಚ್ಚಿಕೊಳ್ಳುವುದೆಲ್ಲಾ ಬರೀ ವ್ಯರ್ಥವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಮೋವಾಬ್ಯರಿಗೆ ಬಹು ಸೊಕ್ಕೇರಿದೆ ಎಂಬ ಅವರ ಹೆಮ್ಮೆಯ ಸುದ್ದಿಯೂ ಅವರ ಅಹಂಕಾರದಂಭ ಗರ್ವೋದ್ರೇಕ ಇವುಗಳ ಸಮಾಚಾರವೂ ನಮ್ಮ ಕಿವಿಗೆ ಬಿದ್ದಿವೆ. ಅವರು ಕೊಚ್ಚಿಕೊಳ್ಳುವದೆಲ್ಲಾ ಬರೀ ಬುರುಡೆಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಮೋವಾಬಿನ ಜನರು ತುಂಬ ಹೆಚ್ಚಳಪಡುವವರೂ ಜಂಬದವರೂ ಎಂದು ನಾವು ಕೇಳಿದ್ದೇವೆ. ಇವರು ಹಿಂಸಕರಾಗಿದ್ದಾರೆ; ಬಡಾಯಿ ಕೊಚ್ಚುವವರಾಗಿದ್ದಾರೆ, ಅವರ ಬಡಾಯಿ ಕೇವಲ ಮಾತುಗಳಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ. ಆಕೆಗೆ ಬಹಳ ಗರ್ವ. ಆಕೆಯ ಅಹಂಕಾರವು, ಆಕೆಯ ಗರ್ವವು ಮತ್ತು ಆಕೆಗೆ ಕೋಪವು ಸಹ ಉಂಟು. ಆದರೆ ಆಕೆಯ ಕೊಚ್ಚಿಕೊಳ್ಳುವಿಕೆ ಬರಿದಾದದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 16:6
17 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಇಂತೆನ್ನುತ್ತಾರೆ: “ಮೋವಾಬಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣಮಾಡಿದ್ದಾರೆ.


ಉಬ್ಬಿಕೊಂಡು ಸರ್ವೇಶ್ವರನನ್ನೆ ತಿರಸ್ಕರಿಸಿದ ಕಾರಣ ಹಾಳಾಗಿ ಇನ್ನು ರಾಷ್ಟ್ರವೆನಿಸಿಕೊಳ್ಳದು ಮೋವಾಬ್,


“ಮೋವಾಬಿಗೆ ಅಮಲೇರುವಷ್ಟು ಕುಡಿಸಿರಿ. ಅದು ಸರ್ವೇಶ್ವರನನ್ನೆ ತಿರಸ್ಕರಿಸಿ ಉಬ್ಬಿಹೋಗಿದೆ. ತನ್ನ ವಾಂತಿಯಲ್ಲೆ ಬಿದ್ದು ಗೇಲಿ ಪರಿಹಾಸ್ಯಕ್ಕೆ ಗುರಿಯಾಗಲಿದೆ.


ಅದು ಇರಿಯಲಿ ಕೊಚ್ಚಿಕೊಳ್ಳುವವರನ್ನು ಬಯಲಿಗೆಳೆಯಲಿ ಅವರ ಬುದ್ಧಿಹೀನತೆಯನ್ನು ಸಂಹರಿಸಲಿ ಆ ಬಾಬಿಲೋನಿನ ಶೂರರನ್ನು ಬೆಬ್ಬರಬೀಳುವಂತಾಗಿಸಲಿ ಅವರೆಲ್ಲರನ್ನು.


ಸುಳ್ಳುಶಕುನ ಹೇಳುವವರನು ನಿರರ್ಥಕಗೊಳಿಸುವವನು ನಾನೆ ಕಣಿ ಹೇಳುವವರನು ಮರುಳುಗೊಳಿಸುವವನು ನಾನೆ ವಿವೇಕಿಗಳೊಡನೆ ವಾದಿಸಿ ಅವರ ವಿವೇಕವೇ ಅವಿವೇಕವೆಂದು ತೋರಿಸಿದವನು ನಾನೆ.


ಮೃತ್ಯುವಿನೊಂದಿಗೆ ನೀವು ಮಾಡಿಕೊಂಡ ಒಪ್ಪಂದ ಬಿದ್ದುಹೋಗುವುದು. ಆ ಮಹಾವಿಪತ್ತು ನಾಡನ್ನು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು.


ನೀವು ನಿಮ್ಮನಿಮ್ಮೊಳಗೆ : “ಮೃತ್ಯುವಿನೊಂದಿಗೆ ಮುಚ್ಚಳಿಕೆ, ಪಾತಾಳದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾವಿಪತ್ತು ನಾಡನ್ನು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು. ನಾವು ಅಸತ್ಯವನ್ನು ಆಶ್ರಯಿಸಿಕೊಂಡಿದ್ದೇವೆ. ಮೋಸವನ್ನು ಮರೆಹೊಕ್ಕಿದ್ದೇವೆ” ಎಂದು ಕೊಚ್ಚಿಕೊಳ್ಳುತ್ತಿದ್ದೀರಿ.


ಜನಸಾಮಾನ್ಯರ ಅಟ್ಟಹಾಸವನ್ನು ಅಡಗಿಸಲಾಗುವುದು, ಪ್ರಮುಖರ ಗರ್ವ ಕಮರಿಹೋಗುವುದು, ಸ್ವಾಮಿ ಮಾತ್ರ ಅಂದು ಉನ್ನತೋನ್ನತವಾಗಿರುವರು.


ಅಂತೆಯೇ ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ. ನೀವೆಲ್ಲರೂ ದೀನಮನೋಭಾವನೆಯನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿ. “ಗರ್ವಿಷ್ಠರನ್ನು ದೇವರು ವಿರೋಧಿಸುತ್ತಾರೆ. ನಮ್ರರಿಗಾದರೋ ಅವರು ದಯೆತೋರುತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ಸೊಕ್ಕೇರಿದ ಗರ್ವಿ ಕುಚೋದ್ಯನೆನಿಸಿಕೊಳ್ಳುವನು; ಅಹಂಕಾರ, ಮದಮತ್ಸರಗಳಿಂದ ಅವನು ವರ್ತಿಸುವನು.


ಈಜುವವರು ಕೈಯಾಡಿಸುವಂತೆ ಮೋವಾಬ್ ರೊಚ್ಚಿನಲ್ಲಿ ಕೈಯಾಡಿಸುವುದು. ಅದರ ಗರ್ವವನ್ನೂ ಕೈಚಳಕವನ್ನೂ ಸರ್ವೇಶ್ವರ ಸ್ವಾಮಿ ಅಡಗಿಸಿಬಿಡುವರು.


ಮೋವಾಬನ್ನು ಕುರಿತ ದೈವೋಕ್ತಿ ಇದು : “ಅಳಿದು ಹಾಳಾಯಿತು ಒಂದೇ ರಾತ್ರಿಯೊಳು, ಮೋವಾಬಿನ ಆರ್ ಪಟ್ಟಣವು. ಅಳಿದು ಹಾಳಾಯಿತು ಒಂದೇ ರಾತ್ರಿಯೊಳು, ಮೋವಾಬಿನ ಕೀರ್ ಪಟ್ಟಣವು.


ಸರ್ವೇಶ್ವರ ಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.


‘ನಾವು ಶೂರರು, ಯುದ್ಧ ಪ್ರವೀಣರು, ಪರಾಕ್ರಮಿಗಳು’ ಎಂದು ನೀವು ಹೇಳುವುದೆಂತು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು