Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 15:1 - ಕನ್ನಡ ಸತ್ಯವೇದವು C.L. Bible (BSI)

1 ಮೋವಾಬನ್ನು ಕುರಿತ ದೈವೋಕ್ತಿ ಇದು : “ಅಳಿದು ಹಾಳಾಯಿತು ಒಂದೇ ರಾತ್ರಿಯೊಳು, ಮೋವಾಬಿನ ಆರ್ ಪಟ್ಟಣವು. ಅಳಿದು ಹಾಳಾಯಿತು ಒಂದೇ ರಾತ್ರಿಯೊಳು, ಮೋವಾಬಿನ ಕೀರ್ ಪಟ್ಟಣವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಮೋವಾಬಿನ ಬಗ್ಗೆ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತು; ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಮೋವಾಬಿನ ವಿಷಯವಾದ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತಲ್ಲಾ! ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇದು ಮೋವಾಬನ್ನು ಕುರಿತ ದುಃಖಕರವಾದ ಸಂದೇಶ: ಒಂದು ರಾತ್ರಿ ಮೋವಾಬಿನ ಆರ್ ಪಟ್ಟಣದಿಂದ ಸಂಪತ್ತನ್ನು ಸೈನ್ಯವು ಸೂರೆ ಮಾಡಿತು. ಆ ರಾತ್ರಿ ನಗರವು ನಾಶಮಾಡಲ್ಪಟ್ಟಿತು. ಒಂದು ರಾತ್ರಿ ಸೈನ್ಯವು ಮೋವಾಬಿನ ಕೀರ್ ಪಟ್ಟಣದಿಂದ ಸಂಪತ್ತನ್ನು ಸೂರೆ ಮಾಡಿತು. ಆ ರಾತ್ರಿ ಪಟ್ಟಣವು ಕೆಡವಲ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಮೋವಾಬಿನ ವಿಷಯವಾದ ಪ್ರವಾದನೆ: ಆ ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು. ಹೌದು, ಆ ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 15:1
20 ತಿಳಿವುಗಳ ಹೋಲಿಕೆ  

ಒಟ್ಟಿಗೆ ಎರಗುವರು ಫಿಲಿಷ್ಟಿಯರ ಮೇಲೆ ಪಶ್ಚಿಮದಲ್ಲಿ; ಜೊತೆಯಾಗಿ ಸೂರೆಮಾಡುವರು ಜನರನ್ನು ಪೂರ್ವದಲ್ಲಿ; ಗೆಲ್ಲುವರು ಎದೋಮ್ ಮೊವಾಬ್ ನಾಡುಗಳನ್ನು; ಅಧೀನವಾಗಿಸುವರು ಅಮೋನ್ಯ ಜನರನ್ನು.


ಸೀಹೋನನಾ ಪಟ್ಟಣ, ಆ ಹೆಷ್ಬೋನ್, ಅಲ್ಲಿಂದಲೆ ಹೊರಟು ಬಂದಿತು ಅಗ್ನಿಜ್ವಾಲೆ. ದಹಿಸಿ ಬಿಟ್ಟಿತದು ಮೋವಾಬ್ಯರ ರಾಜಧಾನಿಯಾದ ಆರ್ ನಗರವನ್ನು, ಅರ್ನೋನ್ ಹೊಳೆಯ ಬಳಿಯ ಪೂಜಾಸ್ಥಳಗಳ ದೇವತೆಗಳನ್ನು.


ಸರ್ವೇಶ್ವರ ಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.


ಮೋವಾಬಿನ ನಿಮಿತ್ತ ಮಿಡಿಯುತಿದೆಯೆನ್ನ ಮನ ದುಃಖದಿಂದ, ವೀಣೆಯ ತಂತಿಯಂತೆ ತುಡಿಯುತಿದೆಯೆನ್ನ ಅಂತರಂಗ ಕೀರ್ ಹೆರೆಷಿನ ನಿಮಿತ್ತ.


ಇದಕಾರಣ ಮೋವಾಬ್ಯರೇ ಗೋಳಾಡಲಿ, ಪ್ರಲಾಪಿಸಲಿ ಪ್ರತಿಯೊಬ್ಬನು ಮೋವಾಬಿಗಾಗಿ, ಕೀರ್ ಹರೆಷೆಥಿನ ದೀಪದ್ರಾಕ್ಷಿಯ ಕಡುಬಿಗಾಗಿ, ನೆನೆದು ನರಳಿ ಹಲುಬಲಿ ಅದಕ್ಕಾಗಿ.


ಅರಸ ಆಹಾಜನು ಕಾಲವಾದ ವರುಷದಲಿ ಕೇಳಿಬಂದಿತು ಈ ದೈವೋಕ್ತಿ :


ಏಕೆಂದರೆ ಈ ಎಲ್ಲ ಜನಾಂಗದವರು, ಇಸ್ರಯೇಲ್ ವಂಶದವರು ಕೂಡ, ಹೃದಯದಲ್ಲಿ ಸುನ್ನತಿಯಿಲ್ಲದವರು. ಇದು ಸರ್ವೇಶ್ವರನಾದ ನಾನು ಆಡುವ ಮಾತು.”


ಬಾಬಿಲೋನಿನ ವಿಷಯವಾಗಿ ಆಮೋಚನ ಮಗ ಯೆಶಾಯನಿಗೆ ಕೇಳಿಬಂದ ದೇವವಾಣಿ :


ಎಲ್ಲಾ ಪಟ್ಟಣಗಳನ್ನು ಕೆಡವಿ, ಹೊಲಗಳನ್ನು ಕಲ್ಲುಗಳಿಂದ ತುಂಬಿಸಿ, ಬಾವಿಗಳನ್ನು ಮುಚ್ಚಿ, ಹಣ್ಣಿನ ಮರಗಳನ್ನು ಕಡಿದುಹಾಕಿದರು. ಕೀರ್ಹರೆಷೆತ್ ಎಂಬ ಒಂದೇ ಒಂದು ಮಾರ್ಗ ಉಳಿಯಿತು. ಕವಣೆ ಹೊಡೆಯುವವರು ಅದನ್ನೂ ಸುತ್ತಿಕೊಂಡು ಕಲ್ಲೆಸೆದರು.


‘ನೀವು ಈಗ ಮೋವಾಬ್ಯರ ಪ್ರಾಂತ್ಯವಾಗಿರುವ ಆರ್ ಎಂಬ ಪ್ರದೇಶವನ್ನು ದಾಟುವಿರಿ.


ಆಗ ಸರ್ವೇಶ್ವರ ನನಗೆ, ‘ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಸೊತ್ತನ್ನು ಕೊಡುವುದಿಲ್ಲ. ನೀವು ಎದ್ದು ಜೆರೆದ್ ಹಳ್ಳವನ್ನು ದಾಟಬೇಕು.’ ಎಂದು ಆಜ್ಞಾಪಿಸಿದರು.


ದುರ್ಗದಂತೆ ಎತ್ತರವಾಗಿರುವ ಅದರ ಕೋಟೆಕೊತ್ತಲಗಳನ್ನು ಕೆಳಕ್ಕೆ ಕೆಡವಿ ನೆಲಸಮಮಾಡುವರು. ಅದು ಧೂಳು ಪಾಲಾಗುವುದು.


ಮುಂದೆ ನೀವು ಅಮ್ಮೋನಿಯರ ಹತ್ತಿರಕ್ಕೆ ಬರುವಾಗ ಅವರಿಗೆ ವೈರಿಗಳಾಗಿ ನಡೆದು ಯುದ್ಧಮಾಡಬೇಡಿ. ನಾನು ಆ ನಾಡನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸೊತ್ತಾಗಿ ಕೊಟ್ಟಿದ್ದೇನೆ. ಆದುದರಿಂದ ನಿಮಗೆ ಅದರಲ್ಲಿ ಕಿಂಚಿತ್ತು ಭಾಗವನ್ನೂ ಕೊಡುವುದಿಲ್ಲ.


ಯೆಹೂದ ಜನತೆ ಪೇಳ್ವರವರಿಗೆ : “ನಮ್ಮ ಕಿವಿಗೆ ಬಿದ್ದಿದೆ ಮೋವಾಬ್ಯರ ಮದ, ತಿಳಿದಿದೆ ನಮಗೆ ಅವರ ದುರಹಂಕಾರ, ಅವರ ಒಣ ಡಂಭಾಚಾರ, ಗರ್ವೋದ್ರೇಕ".


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು