Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 14:18 - ಕನ್ನಡ ಸತ್ಯವೇದವು C.L. Bible (BSI)

18 ಸಂಭ್ರಮದಿ ಸ್ವಂತ ಸಮಾಧಿಗಳಲಿ ನಿರಂತರ ನಿದ್ರಿಸುತಿಹರು ಸಕಲ ರಾಷ್ಟ್ರಗಳ ಅರಸರು, ಸಮಸ್ತ ರಾಜರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಜನಾಂಗಗಳ ಎಲ್ಲಾ ಅರಸರೂ, ಹೌದು, ಸಕಲ ಅರಸರೂ ತಮ್ಮ ತಮ್ಮ ವೈಭವದೊಡನೆ ಸಮಾಧಿಗಳಲ್ಲಿ ದೀರ್ಘ ನಿದ್ರೆ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಜನಾಂಗಗಳ ಎಲ್ಲಾ ಅರಸರೂ, ಹೌದು, ಸಕಲ ರಾಜರೂ ತಮ್ಮ ತಮ್ಮ ಮನೆಗಳಲ್ಲಿ ವೈಭವದೊಡನೆ ದೀರ್ಘನಿದ್ರೆಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಭೂಲೋಕದ ಪ್ರತಿಯೊಬ್ಬ ಅರಸನು ವೈಭವದೊಂದಿಗೆ ಕಾಲವಾದನು. ಪ್ರತಿಯೊಬ್ಬ ಅರಸನಿಗೆ ಸ್ವಂತ ಸಮಾಧಿ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಜನಾಂಗಗಳ ಅರಸರೆಲ್ಲಾ ವೈಭವದಿಂದ ತಮ್ಮ ತಮ್ಮ ಸಮಾಧಿಗಳಲ್ಲಿ ಮಲಗುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 14:18
11 ತಿಳಿವುಗಳ ಹೋಲಿಕೆ  

ನಿನಗೇನು ಕೆಲಸವಿಲ್ಲಿ? ನಿನಗಾರಿಹರಿಲ್ಲಿ? ತೋಡಿಸಿಕೊಂಡಿರುವೆಯಾ ಗೂಡನ್ನಿಲ್ಲಿ? ಗೋರಿಯನ್ನು ಕೊರೆಯಿಸಿಕೊಂಡಿರುವೆಯಾ ಎತ್ತರದ ಬಂಡೆಯಲ್ಲಿ? ಕೆತ್ತಿಸಿಕೊಂಡಿರುವೆಯಾ ನಿನಗೊಂದು ನಿವಾಸವನಿಲ್ಲಿ?


ನನ್ನನು ಮರಣಕ್ಕೆ ಗುರಿಮಾಡುವೆಯೆಂದು ತಿಳಿದಿದೆ ಸಮಸ್ತಜೀವಿಗಳು ತೆರಳುವ ಮಂದಿರಕ್ಕೆ ಸೇರಿಸುವೆಯೆಂದು ಗೊತ್ತೇ ಇದೆ.


ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಸಿರಿಯಾದವರು ಬಿಟ್ಟುಹೋದರು. ಅವನ ಸೇವಕರೇ, ಯಾಜಕ ಯೆಹೋಯಾದನ ಮಗನ ವಧೆಯ ನಿಮಿತ್ತ, ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದನಗರದೊಳಗೆ ಸಮಾಧಿಮಾಡಿದರು; ಆದರೆ ರಾಜಸ್ಮಶಾನದಲ್ಲಿ ಮಾಡಲಿಲ್ಲ.


ಅವನು ಇಸ್ರಯೇಲರ ವಿಷಯದಲ್ಲೂ ದೇವರ ಮತ್ತು ದೇವಾಲಯದ ವಿಷಯದಲ್ಲೂ ಹಲವಾರು ಸತ್ಕಾರ್ಯಗಳನ್ನು ಮಾಡಿದ್ದರಿಂದ ಅವನ ಶವವನ್ನು ದಾವೀದ ನಗರದೊಳಗೆ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು.


ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು.


ಒಬ್ಬನು ನೂರಾರು ಮಕ್ಕಳನ್ನು ಪಡೆಯಬಹುದು, ಹಣ್ಣುಹಣ್ಣು ಮುದುಕನಾಗುವ ತನಕ ಬದುಕಬಹುದು. ಆದರೆ ಜೀವನದಲ್ಲಿ ಸುಖಾನುಭವ ಇಲ್ಲದೆ, ಉತ್ತರಕ್ರಿಯೆಯೂ ಇಲ್ಲದೆಹೋದರೆ ಏನು ಪ್ರಯೋಜನ? ಅವನಿಗಿಂತ ಗರ್ಭಸ್ರಾವದ ಪಿಂಡವೇ ಮೇಲು ಎಂದುಕೊಂಡೆ.


ನಗರಗಳನು ಕೆಡವಿಸಿದವನು, ನಾಡನು ಕಾಡಾಗಿಸಿದವನು, ಖೈದಿಗಳನು ಬಂಧನದಿಂದ ಬಿಡಿಸಿದವನು ಈತನೇ ಅಲ್ಲವೆ?’ ಎಂದಾಡಿಕೊಳ್ವರು.


ನಿನ್ನನ್ನಾದರೊ ಕೊಳೆತ ಕಡ್ಡಿಯಂತೆ ಬಿಸಾಡಿಹರು ಕೆಳಕೆ ಗೋರಿಯಿಲ್ಲದ ನಿನ್ನ ಶವ ಈಡಾಗಿದೆ ಪರರ ತುಳಿತಕ್ಕೆ, ಕತ್ತಿ ತಿವಿದ, ಕಲ್ಲುಗುಂಡಿಗೆ ಪಾಲಾದ ಹೆಣಗಳೇ ನಿನ್ನ ಹೊದಿಕೆ.


ಸೇವಕರು ಶವವನ್ನು ಸಮಾಧಿಮಾಡುವುದಕ್ಕಾಗಿ ಹೋದರು. ಆದರೆ ಅವರಿಗೆ ಆಕೆಯ ತಲೆಬುರುಡೆ, ಕೈಕಾಲುಗಳು ಹೊರತಾಗಿ ಬೇರೇನೂ ಸಿಕ್ಕಲಿಲ್ಲ.


ಪಾಳು ಪೊಡವಿಯಲ್ಲಿ ನೆಲಮಾಳಿಗೆಗಳನ್ನು ನಿರ್ಮಿಸಿಕೊಂಡಿದ್ದ ರಾಜ-ಮಂತ್ರಿಗಳೊಡನೆ ನಾನಿರುತ್ತಿದ್ದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು