Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 10:5 - ಕನ್ನಡ ಸತ್ಯವೇದವು C.L. Bible (BSI)

5 ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅಯ್ಯೋ, ಅಶ್ಶೂರವೇ ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೌದ್ರವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆಹಾ, ಅಶ್ಶೂರವೇ, ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೋಷವೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ದೇವರು ಹೀಗೆ ಹೇಳುವನು: “ನಾನು ಕೋಪಗೊಂಡಾಗ ಬೆತ್ತವನ್ನು ಹೇಗೆ ಉಪಯೋಗಿಸುವೆನೋ ಹಾಗೆಯೇ ಇಸ್ರೇಲನ್ನು ಶಿಕ್ಷಿಸಲು ಅಶ್ಶೂರವನ್ನು ಉಪಯೋಗಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ಅಯ್ಯೋ, ನನ್ನ ಕೋಪದ ಕೋಲಾದ ಅಸ್ಸೀರಿಯವೇ, ನನ್ನ ಕೈಯಲ್ಲಿರುವ ಬೆತ್ತವು ನನ್ನ ಕೋಪವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 10:5
31 ತಿಳಿವುಗಳ ಹೋಲಿಕೆ  

ಅಸ್ಸೀರಿಯವನ್ನು ಸರ್ವೇಶ್ವರ ತಮ್ಮ ಭುಜಬಲದಿಂದ ಧ್ವಂಸಮಾಡುವರು; ನಿನೆವೆ ಪಟ್ಟಣವನ್ನು ಹಾಳುಬಿದ್ದ ಅವಶೇಷವಾಗಿ, ನೀರಿಲ್ಲದ ಮರುಭೂಮಿಯಾಗಿ ಮಾಡುವರು.


ಆಗ ಸರ್ವೇಶ್ವರ ತಮ್ಮ ಗಂಭೀರವಾದ ವಾಣಿಯನ್ನು ಕೇಳುವಂತೆ ಮಾಡುವರು. ತೀವ್ರಕೋಪ, ದಹಿಸುವ ಅಗ್ನಿಜ್ವಾಲೆ, ಸಿಡಿಯುವ ಮೋಡ, ಚಂಡಮಾರುತ, ಕಲ್ಮಳೆ - ಇವುಗಳಿಂದ ತಮ್ಮ ಶಿಕ್ಷಾಹಸ್ತವನ್ನು ಪ್ರದರ್ಶಿಸುವರು.


ನಶಿಸಿಬಿಡುವೆನಾ ಅಸ್ಸೀರಿಯರನು ನನ್ನ ನಾಡಿನಲಿ, ತುಳಿದುಬಿಡುವೆನು ಅವರನು ನನ್ನ ಬೆಟ್ಟಗಳಲಿ, ನೀಗುವುದಾಗ ನನ್ನ ಜನರಿಂದ ಅವರು ಹೂಡಿದ ನೊಗವು, ತೊಲಗುವುದಾಗ ಅವರು ಹೊರಿಸಿದ ಹೊರೆಯು.


ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು!


ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. ‘ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ’ ಎಂಬುವುದು ವ್ಯಕ್ತವಾಗುವುದು ನಿಮಗೆ.


ಅವರು ಬಂದಿರುವುದು ಭೂಮಿಯ ಕಟ್ಟಕಡೆಯ ನಾಡುಗಳಿಂದ; ಇಡೀ ರಾಷ್ಟ್ರವನ್ನು ಹಾಳುಮಾಡಲಿರುವರು ಸರ್ವೇಶ್ವರ ಕೋಪೋದ್ರೇಕದಿಂದ.


ಅವನು ‘ಅಪ್ಪಾ, ಅಮ್ಮಾ, ಎಂದು ಕೂಗಬಲ್ಲವನಾಗುವುದರೊಳಗೆ ಅಸ್ಸೀರಿಯದ ಅರಸನು ದಮಸ್ಕಸ್ಸಿನ ಆಸ್ತಿಪಾಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ಹೊರಿಸಿಕೊಂಡು ಹೋಗುವನು,” ಎಂದು ಸರ್ವೇಶ್ವರಸ್ವಾಮಿ ಹೇಳಿದರು.


ಸಜ್ಜನರ ನಾಡಿನಲಿ ಉಳಿಯದು ದುರ್ಜನರ ದಬ್ಬಾಳಿಕೆ I ಉಳಿಯಿತಾದರೆ ಸಜ್ಜನರೂ ಕೈಹಚ್ಚಬಹುದು ಅಕ್ರಮಕೆ II


ಇಳೆಯ ಮಾನವರಿಂದ ಪ್ರಭು, ಎನ್ನನು ಕೈಯಾರೆ ಕಾಪಾಡು I ಜಗವೇ ತಮ್ಮ ಪಾಲಿನ ಪರಿಮಿತಿ ಎನ್ನುವವರಿಂದ ಕಾದಿಡು II ಅವರಾದರೊ ನಿನ್ನ ನಿಧಿಯಿಂದ ಉದರ ತುಂಬಿಸಿಕೊಳ್ಳಲಿ I ಮಕ್ಕಳು, ಮರಿಮಕ್ಕಳಿಗೆ ಯಥೇಚ್ಛವಾಗಿ ಉಳಿಸಿಕೊಳ್ಳಲಿ II


ಅವನು ಆ ನಾಡಿನಿಂದ ಹೊರಟು ಅಸ್ಸೀರಿಯಾ ನಾಡಿಗೆ ಬಂದು ನಿನೆವೆ, ರಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ


“ಕೇಳು, ಇದನ್ನೆಲ್ಲಾ ಬಹುಕಾಲದ ಹಿಂದೆ ಗೊತ್ತುಮಾಡಿದವನು ನಾನೇ, ಪೂರ್ವಕಾಲದಲ್ಲಿ ನಿರ್ಣಯಿಸಿದುದನ್ನು ಈಗ ನೆರವೇರಿಸಿದ್ದೇನೆ. ಕೋಟೆ ನಗರಗಳನ್ನು ನೀನು ಹಾಳುದಿಬ್ಬಗಳನ್ನಾಗಿಸಿದೆ. ಆದರೆ ಸಾಧ್ಯವಾಯಿತಿದು ನನ್ನಿಂದಲೇ; ನಿನಗಿದು ತಿಳಿಯದೆ ಹೋಯಿತೆ?


ಸರ್ವೇಶ್ವರ ನಿನ್ನ ಮೇಲೂ ನಿನ್ನ ಪ್ರಜೆಯ ಮೇಲೂ ನಿನ್ನ ತಂದೆಯ ಮನೆತನದ ಮೇಲೂ ಭೀಕರ ದಿನಗಳನ್ನು ಬರಮಾಡುವರು. ಇಸ್ರಯೇಲ್ ರಾಜ್ಯ ಜುದೇಯ ನಾಡಿನಿಂದ ಬೇರ್ಪಟ್ಟ ದಿನ ಮೊದಲುಗೊಂಡು ಇದುವರೆಗೂ ಅಂಥ ದಿನಗಳು ಬಂದಿರಲಿಲ್ಲ. ಅಸ್ಸೀರಿಯದ ಅರಸನೇ ಆ ದುರ್ದಿನಗಳ ಪ್ರತೀಕ.


ಆ ದಿನದಂದು ಯೂಫ್ರೆಟಿಸ್ ನದಿಯಾಚೆ ಇರುವ ಅಸ್ಸೀರಿಯದ ರಾಜನೆಂಬ ಹಜಾಮನ ಕತ್ತಿಯಿಂದ ಸರ್ವೇಶ್ವರ ನಿನ್ನ ತಲೆಯನ್ನೂ ಗಡ್ಡವನ್ನೂ ಕಾಲುಗೂದಲನ್ನೂ ಬೋಳಿಸುವರು.


ಆದುದರಿಂದ ಸ್ವಾಮಿಯಾದ ನಾನು ಅಸ್ಸೀರಿಯದ ಅರಸನನ್ನೂ ಅವನ ಚದುರಂಗ ಬಲವನ್ನೂ ಬರಮಾಡುವೆನು: ಅದು ಯೂಫ್ರಟಿಸ್ ಮಹಾನದಿಯ ಪ್ರವಾಹದಂತೆ ರಭಸವಾಗಿ ಹರಿದುಬರುವುದು.


ನಿಮ್ಮ ಮೇಲಿರುವ ನನ್ನ ಕೋಪ ಬಹುಬೇಗನೆ ಇಳಿದು, ಅವರ ಮೇಲೆ ತಿರುಗಿಕೊಳ್ಳುವುದು.


ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಪ್ರತಿಜ್ಞೆಯಿದು : “ನೆರವೇರಿಯೇ ತೀರುವುದು ನಾ ಸಂಕಲ್ಪಿಸಿದ್ದು, ಈಡೇರಿಯೇ ತೀರುವುದು ನಾ ಯೋಚಿಸಿದ್ದು.


ಬಾಬಿಲೋನಿನ ನಾಡನ್ನು ನೋಡು. ಅದರ ಜನಾಂಗ ನಿರ್ನಾಮವಾಯಿತು. ಅಸ್ಸೀರಿಯದವರು ಆ ನಾಡನ್ನು ಕಾಡುಮೃಗಗಳಿಗೆ ಈಡುಮಾಡಿದರು. ಅಲ್ಲಿ ಬುರುಜುಗಳನ್ನು ಕಟ್ಟಿಕೊಂಡರು. ಇದರ ಕೋಟೆಗಳನ್ನಾದರೋ ಕೆಡವಿ ನಾಶಮಾಡಿದರು.


ನನ್ನ ಜನರೇ, ಹೋಗಿ; ನಿಮ್ಮ ನಿಮ್ಮ ಮನೆಗಳನ್ನು ಸೇರಿ ಬಾಗಿಲು ಮುಚ್ಚಿಕೊಳ್ಳಿ. ದೇವರ ಕೋಪ ತೀರುವತನಕ ಕೊಂಚಕಾಲ ಅವಿತುಕೊಳ್ಳಿ.


ಇಗೋ, ಸರ್ವೇಶ್ವರ ನಾಮಧೇಯನು ಬರುತಿಹನು ದೂರದಿಂದ; ಭುಗಿಲೇರುತಿದೆ ಆತನ ಕೋಪ ಏಳುತಿದೆ ದಟ್ಟವಾದ ಧೂಮ ಅದರಿಂದ. ದಹಿಸುವ ಅಗ್ನಿಯಂತಿದೆ ಆತನ ನಾಲಗೆ. ಭರಿತವಾಗಿದೆ ಆತನ ತುಟಿಗಳು ರೋಷದಿಂದ.


ಸರ್ವೇಶ್ವರ ಸ್ವಾಮಿ ಸಕಲ ರಾಷ್ಟ್ರಗಳ ಮೇಲೆ ಕೋಪಗೊಂಡಿದ್ದಾರೆ - ಅವುಗಳ ಸೈನ್ಯಗಳ ಮೇಲೆ ರೋಷಗೊಂಡಿದ್ದಾರೆ. ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ಸಂಹರಿಸಲು ನಿಶ್ಚಯಿಸಿದ್ದಾರೆ.


“ಇಗೋ, ದಂಡನೆಯ ದಿನ ಬಂದೆಬಿಟ್ಟಿತು; ನಿನಗೆ ದುರ್ಗತಿ ಅಂಕುರಿಸಿದೆ, ಕೋಲು ಹೂಬಿಟ್ಟಿದೆ, ಹೆಮ್ಮೆ ಚಿಗುರಿದೆ;


ಆದಕಾರಣ, ನಾನು ನನ್ನ ಕೋಪವನ್ನು ಅವರ ಮೇಲೆ ಸುರಿಸಿ, ನನ್ನ ರೋಷಾಗ್ನಿಯಿಂದ ಅವರನ್ನು ಧ್ವಂಸಮಾಡಿ, ಅವರ ದುರ್ನಡತೆಯ ಹೊಣೆಯನ್ನು ಅವರ ಮೇಲೆ ಹೊರಿಸಿದ್ದೇನೆ. ಇದು ಸರ್ವೇಶ್ವರನಾದ ದೇವರ ನುಡಿ.”


ಸರ್ವೇಶ್ವರಾ, ನನ್ನ ದೇವರೇ, ಪರಮಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ.


‘ಸೈಪ್ರಸ್’ ಎಂಬ ಸ್ಥಳದಿಂದ ಹಡಗುಗಳಲ್ಲಿ ಬರುವರು ಜನರು ಸೋಲಿಸುವರವರು ಅಶ್ಯೂರ್ಯರನ್ನೂ ಏಬೆರ್ ಜರನ್ನೂ; ಅವರಿಗೂ ನಾಶವುಂಟಾಗುವುದು.”


ಈ ನಾಡನ್ನು, ಹಾಳುಮಾಡುವುದಕ್ಕೆ ಸರ್ವೇಶ್ವರಸ್ವಾಮಿಯ ಒಪ್ಪಿಗೆಯಿಲ್ಲದೆ ಇಲ್ಲಿಗೆ ನಾನು ಬಂದೆನೆಂದು ನೆನಸುತ್ತೀಯೋ? ‘ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು’ ಎಂದು ಆ ಸರ್ವೇಶ್ವರಸ್ವಾಮಿಯೇ ನನಗೆ ಆಜ್ಞೆ ಮಾಡಿದ್ದಾರೆ, ಎಂಬ ಈ ಮಾತುಗಳು ಅರಸನವು,” ಎಂದನು.


ಅನಂತರ ನಾನು ಅರೀಯೇಲನ್ನು ಬಾಧಿಸುವೆನು. ಅಲ್ಲಿ ಅರಚಾಟ ಕಿರಿಚಾಟ ಇರುವುದು. ಆ ಪಟ್ಟಣವು ವಾಸ್ತವವಾಗಿ ನನಗೆ ಅರೀಯೇಲಾಗಿಯೇ ಪರಿಣಮಿಸುವುದು.


ಇವರು ದಂಗೆ ಏಳುವ ಜನರು. ಸುಳ್ಳಾಡುವ ಪೀಳಿಗೆ, ಸರ್ವೇಶ್ವರನ ಉಪದೇಶಕ್ಕೆ ಕಿವಿಗೊಡದ ಸಂತಾನ,


“(ಉತ್ತರದ) ರಾಜನು ಮನಸ್ಸು ಬಂದ ಹಾಗೆ ನಡೆದು ತಾನು ಎಲ್ಲ ದೇವರುಗಳಿಗಿಂತಲೂ ದೊಡ್ಡವನೆಂದು ತನ್ನನ್ನೇ ಹೆಚ್ಚಿಸಿಕೊಂಡು ಗರ್ವಿಷ್ಠನಾಗುವನು. ದೇವಾಧಿದೇವರನ್ನು ಅತಿಯಾಗಿ ದೂಷಿಸುವನು. ನಿಮ್ಮ ಮೇಲಿನ ದೈವಕೋಪ ತೀರುವ ತನಕ ಅವನು ವೃದ್ಧಿಯಾಗುವನು. ದೈವಸಂಕಲ್ಪ ನೆರವೇರಲೇಬೇಕು.


ನಿನೆವೆಯನ್ನು ಕುರಿತ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಪ್ರವಾದಿಗೆ ಆದ ದೈವದರ್ಶನವಿದು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು