ನೀನು ನಿನ್ನ ಸೇವಕರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ. ಅಲ್ಲದೆ, ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ : ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ. ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ, ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ. ಒಳಹೊಕ್ಕಿದ್ದೇನೆ ಅಲ್ಲಿನ ದೂರದ ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡುಮೇಡುಗಳನ್ನೇ