Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 10:33 - ಕನ್ನಡ ಸತ್ಯವೇದವು C.L. Bible (BSI)

33 ಇಗೋ, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಮರದ ಕೊಂಬೆಗಳನ್ನು ದುಡುಮ್ಮನೆ ಬೀಳಿಸುವರು. ಉನ್ನತವಾದ ವೃಕ್ಷಗಳನ್ನು ಕಡಿದುಹಾಕುವರು. ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸುವನು. ಅವು ಧಡಮ್ಮನೆ ಬೀಳುವವು. ಉನ್ನತವಾದ ವೃಕ್ಷಗಳು ಕಡಿದು ಕೆಳಗೆ ಬೀಳುವವು. ಎತ್ತರವಾದ ಮರಗಳು ನೆಲದ ಪಾಲಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸಿ ಢಮ್ಮನೆ ಬೀಳಿಸುವನು; ಉನ್ನತ ವೃಕ್ಷಗಳು ಕಡಿದುಹೋಗುವವು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ನಮ್ಮ ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಆ ದೊಡ್ಡ ಮರವನ್ನು (ಅಶ್ಶೂರವನ್ನು) ಕಡಿದುಹಾಕುವದನ್ನು ನೋಡು! ತನ್ನ ಮಹಾಶಕ್ತಿಯಿಂದ ಆತನು ಮಹಾವೀರರೂ ದೊಡ್ಡಜನರೂ ಎನ್ನದೆ ಎಲ್ಲರನ್ನೂ ಕಡಿದುಹಾಕುವನು. ಇನ್ನುಮೇಲೆ ಅವರು ಮಹಾಜನರೆಂದು ಕರೆಯಲ್ಪಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಇಗೋ, ಕರ್ತದೇವರು ಆಗಿರುವ ಸೇನಾಧೀಶ್ವರ ಯೆಹೋವ ದೇವರು ಭಯಂಕರವಾಗಿ ಕೊಂಬೆಯನ್ನು ಕತ್ತರಿಸುವರು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವುವು, ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 10:33
17 ತಿಳಿವುಗಳ ಹೋಲಿಕೆ  

“ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲಮಾಡುವೆನು.


ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿನ ದೇವರಾದ ನಿಸ್ರೋಕನನ್ನು ಆರಾಧನೆ ಮಾಡುತ್ತಿರುವಾಗ, ಅದ್ರಮ್ಮೆಲೆಕ್ ಮತ್ತು ಸರೆಚೆರ್ ಎಂಬ ಅವನ ಇಬ್ಬರು ಮಕ್ಕಳು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ನಾಡಿಗೆ ಪಲಾಯನಗೈದರು. ಬಳಿಕ ಅವನ ಇನ್ನೊಬ್ಬ ಮಗ ಏಸರ್ ಹದ್ದೋನನು ಅರಸನಾದನು.


ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು.


ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ, ಕೀರ್ತಿಸುತ್ತೇನೆ: ಆತನ ಕಾರ್ಯಗಳೆಲ್ಲವು ಸತ್ಯ, ಆತನ ಮಾರ್ಗಗಳೆಲ್ಲವು ನ್ಯಾಯ, ಗರ್ವಿಷ್ಠರನ್ನು ಆತ ತಗ್ಗಿಸಬಲ್ಲ.


ಅಸ್ಸೀರಿಯದ ಅರಸನ ದಂಡಿನಲ್ಲಿದ್ದ ಎಲ್ಲ ಶೂರರನ್ನೂ ನಾಯಕರನ್ನೂ ಅಧಿಪತಿಗಳನ್ನೂ ಸಂಹರಿಸಿದರು; ಆ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದರು.


ನರಮಾನವರು ತಗ್ಗಿಹೋಗುವರು. ಕುಲೀನರು ಕುಗ್ಗಿಹೋಗುವರು. ಗರ್ವಿಷ್ಠರ ಸೊಕ್ಕು ಅಡಗಿಹೋಗುವುದು.


ನಿಮ್ಮ ಮೇಘಗರ್ಜನೆಗೆ ಜನಾಂಗಗಳು ಓಡುತ್ತವೆ. ನೀವು ಎದ್ದುನಿಂತಾಗ ರಾಷ್ಟ್ರಗಳು ದಿಕ್ಕುಪಾಲಾಗುತ್ತವೆ.


ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನಗೆ ವಿರುದ್ಧ ಏರ್ಪಡಿಸುವೆನು. ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಬೆಂಕಿಗೆ ಕಡಿದು ಹಾಕುವರು.


ದೊಡ್ಡಸ್ತಿಕೆಯಲ್ಲಿ ನಿನಗೆ ಸರಿಸಮಾನನಾರು? ಲೆಬನೋನಿನಲ್ಲಿ ದೇವದಾರು ವೃಕ್ಷವೊಂದಿತ್ತು; ಅದರ ರೆಂಬೆಗಳು ಅಂದ, ಅದರ ನೆರಳು ದಟ್ಟ ಅದರ ಎತ್ತರ ಬಹಳ, ಅದರ ತುದಿ ಮೇಘಚುಂಬಿತ.


ಆ ಸ್ವಾಮಿ ಇಂತೆನ್ನುತ್ತಾನೆ: “ನಿನ್ನ ಶತ್ರುಗಳು ಎಷ್ಟು ಬಲಾಢ್ಯರಾಗಿದ್ದರೂ ಎಷ್ಟು ಅಧಿಕ ಸಂಖ್ಯೆಯಲ್ಲಿದ್ದರೂ ಅವರು ನಾಶಕ್ಕೊಳಗಾಗುವರು; ಆ ದುರಾಲೋಚಕನು ಇಲ್ಲವಾಗುವನು. ನನ್ನ ಜನರೇ, ನಾನು ನಿಮ್ಮನ್ನು ಬಾಧಿಸಿದ್ದುಂಟು, ಆದರೆ ಇನ್ನು ಮುಂದೆ ಬಾಧಿಸುವುದಿಲ್ಲ.


ಗಿಡದಲ್ಲಿ ಮೊಗ್ಗು ಕಚ್ಚಿ, ಹೂ ಅರಳಿ, ಹೀಚು ದೋರೆಗಾಯಿಯಾಗುತ್ತಿರುವಾಗ, ಕೊಯಿಲು ಕಾಲಕ್ಕೆ ಮುಂಚೆಯೇ ಅದರ ಕೊಂಬೆಗಳನ್ನೂ ಕವಲುಗಳನ್ನೂ ಶತ್ರುಗಳು ಕತ್ತರಿಸಿಹಾಕುವರು.


ಕಲ್ಮಳೆ ಸುರಿದು ಕಾಡು ಹಾಳಾದರೂ ಶತ್ರುಗಳ ಪಟ್ಟಣವು ನೆಲಸಮವಾದರೂ ನೀವು ಸಂತೋಷದಿಂದ ಬಾಳುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು