Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 8:2 - ಕನ್ನಡ ಸತ್ಯವೇದವು C.L. Bible (BSI)

2 ಅವರು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ, ಪೂಜಿಸಿದ ಸೂರ್ಯ,‍ ಚಂದ್ರ, ತಾರಾಗಣಗಳ ಎದುರಿಗೇ ಆ ಎಲುಬುಗಳನ್ನು ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅನಂತರ ಅವರು ಅದನ್ನು ತಾವು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ ಪೂಜಿಸಿದ ಸೂರ್ಯ, ಚಂದ್ರ ತಾರಾಗಣಗಳ ಎದುರಿಗೆ ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಹೂಣಿಡುವುದಿಲ್ಲ; ಅವು ಭೂಮಿಯ ಮೇಲೆ ಗೊಬ್ಬರವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಆಶ್ರಯಿಸಿ ಪೂಜಿಸಿದ ಸೂರ್ಯಚಂದ್ರತಾರಾಗಣಗಳ ಎದುರಿಗೆ ಹರಡಿಬಿಡುವರು; ಅವುಗಳನ್ನು ಯಾರೂ ಕೂಡಿಸಿ ಹೂಣಿಡುವದಿಲ್ಲ; ಅವು ಭೂವಿುಯ ಮೇಲೆ ಗೊಬ್ಬರವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅವರು ಪ್ರೀತಿ ಮಾಡಿದಂಥ, ಸೇವಿಸಿದಂಥ, ಹಿಂಬಾಲಿಸಿದಂಥ, ಹುಡುಕಿದಂಥ, ಆರಾಧಿಸಿದಂಥ, ಸೂರ್ಯನ ಮುಂದೆಯೂ, ಚಂದ್ರನ ಮುಂದೆಯೂ, ಸಮಸ್ತ ಆಕಾಶ ಸೈನ್ಯದ ಮುಂದೆಯೂ ಅವುಗಳನ್ನು ತೆರೆದಿಡುವರು; ಹೌದು, ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರವಾಗುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 8:2
32 ತಿಳಿವುಗಳ ಹೋಲಿಕೆ  

ಅದಲ್ಲದೆ, ಜುದೇಯ ಪ್ರಾಂತ್ಯದ ಪಟ್ಟಣಗಳಲ್ಲೂ ಜೆರುಸಲೇಮಿನ ಸುತ್ತಣ ಪ್ರದೇಶದಲ್ಲೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ ಬಾಳ್ ದೇವತೆಗೂ ಸೂರ್ಯ ಚಂದ್ರ ನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಾರತಿಯೆತ್ತುವುದಕ್ಕಾಗಿ ಜುದೇಯದ ರಾಜರಿಂದ ನೇಮಿತರಾಗಿದ್ದ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.


ಆಗ ದೇವರು ಅವರಿಗೆ ವಿಮುಖರಾದರು. ಆಕಾಶದ ಗ್ರಹಗಳನ್ನೇ ಅವರು ಪೂಜಿಸಲೆಂದು ಬಿಟ್ಟುಬಿಟ್ಟರು. ಇದನ್ನು ಕುರಿತೇ ಪ್ರವಾದಿಗಳ ಗ್ರಂಥದಲ್ಲಿ: ‘ಓ ಇಸ್ರಯೇಲರೇ, ನೀವು ಮರಳುಗಾಡಿನಲ್ಲಿ ನಾಲ್ವತ್ತು ವರ್ಷಗಳಕಾಲ ದಹನಬಲಿಗಳನ್ನು ಅರ್ಪಿಸಿದ್ದು ನನಗಲ್ಲ.


ಜನರ ಹೆಣಗಳು ನೆಲದ ಮೇಲೆ ಬಿದ್ದು ಗೊಬ್ಬರವಾಗುವುವು ಅವು ಹೊಲ ಕೊಯ್ಯುವವನ ಹಿಂದೆ ಯಾರೂ ಕೂಡಿಸದೆ ಬಿದ್ದಿರುವ ಅರಿಗಳಂತಿರುವುವು - ಈ ಮಾತುಗಳನ್ನು ಸಾರುವಂತೆ ಸರ್ವೇಶ್ವರನಿಂದ ನನಗೆ ಅಪ್ಪಣೆಯಾಯಿತು.”


ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ ಭ್ರಮೆಗೊಂಡು, ಸೂರ್ಯ, ಚಂದ್ರ, ನಕ್ಷತ್ರಗಳೆನಿಸಿಕೊಳ್ಳುವ ಆಕಾಶದ ಪರಿವಾರಗಳನ್ನು ಆರಾಧಿಸಬಾರದು, ಪೂಜಿಸಬಾರದು. ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರ ಅವುಗಳನ್ನು ಜಗದ ಬೇರೆ ಎಲ್ಲ ಜನಾಂಗಗಳಿಗಾಗಿ ಕೊಟ್ಟಿದ್ದಾರೆ.


ಮಾಳಿಗೆಗಳ ಮೇಲೆ ನಿಂತು ಆಕಾಶದ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಆರಾಧಿಸುವವರನ್ನು ನಾಶಗೊಳಿಸುವೆನು; ಅಂತೆಯೇ ಸರ್ವೇಶ್ವರನ ಆರಾಧಕರೆಂದು ಪ್ರಮಾಣಮಾಡಿ, ಮಲ್ಕಾಮನ ಮೇಲೂ ಪ್ರಮಾಣ ಮಾಡುವವರನ್ನು ವಿನಾಶಗೊಳಿಸುವೆನು.


ಸರ್ವೇಶ್ವರನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆದುತಂದರು; ಇಗೋ, ಆ ಆಲಯದ ಬಾಗಿಲ ಮುಂದೆ, ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಸುಮಾರು ಇಪ್ಪತ್ತೈದು ಜನರು ಸರ್ವೇಶ್ವರನ ಆಲಯಕ್ಕೆ ಬೆನ್ನುಮಾಡಿ ಪೂರ್ವದ ಕಡೆಗೆ ಮುಖಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು.


ಈ ಕಾರಣ ಜುದೇಯದ ಅರಸ ಯೆಹೋಯಾಕೀಮನು ಆದ ನಿನ್ನ ವಿರುದ್ಧ ಸರ್ವೇಶ್ವರ ಹೀಗೆನ್ನುತ್ತಾರೆ - ಇವನ ಸಂತಾನದಲ್ಲಿ ಯಾವನೂ ದಾವೀದನ ಸಿಂಹಾಸನದಲ್ಲಿ ಕೂರನು. ಇವನ ಹೆಣವು ಬಿಸಾಡಲ್ಪಟ್ಟು ಹಗಲಿನ ತಾಪಕ್ಕೂ ಇರುಳಿನ ಚಳಿಗೂ ಈಡಾಗುವುದು.


ಇವನನ್ನು ಜೆರುಸಲೇಮಿನ ಬಾಗಿಲ ಹೊರಗಡೆ ಬಿಸಾಡುವರು ಕತ್ತೆಗೆ ತಕ್ಕ ಮರ್ಯಾದೆಯೊಂದಿಗೆ ಹೂಣುವರು.”


ಜೆರುಸಲೇಮಿನ ಮನೆಗಳೂ ಜುದೇಯದ ಅರಸರ ಮನೆಗಳೂ, ಅಂದರೆ ಯಾವ ಯಾವ ಮನೆಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಾರತಿ ಎತ್ತಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲ ಹೊಲಸಾಗಿ ತೋಫೆತ್ ಸ್ಥಳಕ್ಕೆ ಸಮಾನವಾಗುವುವು.”


ಅವರು ಘೋರ ಮರಣಕ್ಕೆ ಗುರಿಯಾಗುವರು. ಅವರಿಗಾಗಿ ಯಾರೂ ದುಃಖಿಸುವುದಿಲ್ಲ. ಅವರನ್ನು ಯಾರೂ ಹೂಣುವುದಿಲ್ಲ. ಅವರು ಗೊಬ್ಬರವಾಗಿ ಭೂಮಿಯ ಮೇಲೆ ಬಿದ್ದಿರುವರು. ಖಡ್ಗದಿಂದ ಹಾಗು ಕ್ಷಾಮದಿಂದ ಅವರು ನಾಶವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಜಂತುಗಳಿಗೂ ಆಹಾರವಾಗುವುವು.”


ಎಂದೋರಿನಲ್ಲವರು ಕೊಲೆಯಾದರು I ಹೊಲಗದ್ದೆಗಳಿಗೆ ಗೊಬ್ಬರವಾದರು II


ತನ್ನ ತಂದೆ ಹಿಜ್ಕೀಯನು ತೆಗೆದುಹಾಕಿದ್ದ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ ಇಸ್ರಯೇಲರ ಅರಸನಾದ ಅಹಾಬನಂತೆ ಬಾಳ್ ದೇವತೆಗಾಗಿ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭವನ್ನು ನಿಲ್ಲಿಸಿ, ನಕ್ಷತ್ರಮಂಡಲಕ್ಕೆ ಕೈಮುಗಿದು, ಆರಾಧಿಸಿದನು.


ಸರ್ವೇಶ್ವರ ಇಂತೆನ್ನುತ್ತಾರೆ, “ಮಾನವರ ಮೇಲೆ ಕಷ್ಟ - ಸಂಕಷ್ಟಗಳನ್ನು ಬರಮಾಡುವೆನು; ಅವರು ಕುರುಡರಂತೆ ತಡಕಾಡುವರು. ಏಕೆಂದರೆ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ; ಅವರ ರಕ್ತವನ್ನು ನೀರಿನಂತೆ ಚೆಲ್ಲಲಾಗುವುದು; ಅವರ ಹೆಣಗಳನ್ನು ಕಸದಂತೆ ಕೊಳೆಯಲು ಬಿಡಲಾಗುವುದು.”


ಒಬ್ಬನು ನೂರಾರು ಮಕ್ಕಳನ್ನು ಪಡೆಯಬಹುದು, ಹಣ್ಣುಹಣ್ಣು ಮುದುಕನಾಗುವ ತನಕ ಬದುಕಬಹುದು. ಆದರೆ ಜೀವನದಲ್ಲಿ ಸುಖಾನುಭವ ಇಲ್ಲದೆ, ಉತ್ತರಕ್ರಿಯೆಯೂ ಇಲ್ಲದೆಹೋದರೆ ಏನು ಪ್ರಯೋಜನ? ಅವನಿಗಿಂತ ಗರ್ಭಸ್ರಾವದ ಪಿಂಡವೇ ಮೇಲು ಎಂದುಕೊಂಡೆ.


ಸರ್ವ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.


ತಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ಮೀರಿ, ಎರಡು ಎರಕದ ಹೋರಿಕರುಗಳ ಮೂರ್ತಿಗಳನ್ನು ಮಾಡಿಕೊಂಡರು; ಅಶೇರ ವಿಗ್ರಹಸ್ಥಂಭಗಳನ್ನು ನಿಲ್ಲಿಸಿಕೊಂಡರು; ಆಕಾಶಸೈನ್ಯ ಹಾಗು ಬಾಳ್ ದೇವತೆಗಳನ್ನು ಪೂಜಿಸಿದರು;


ಅನ್ಯ ದೇವರುಗಳನ್ನಾಗಲಿ, ಪೂಜಿಸಬಾರದೆಂದು ನಿಷೇಧಿಸಿರುವ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ, ಪೂಜಿಸಿ, ಆರಾಧಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದುಷ್ಟವಾದುದನ್ನು ನಡೆಸಿದ್ದಾರೆ ಎಂದೂ


ದಿಗ್ಭ್ರಾಂತರಾಗುವರಿದೋ ಹಿಂದೆಂದು ಇಲ್ಲದಂತೆ ದುರುಳರು I ದೇವರಿಂದ ತಿರಸ್ಕೃತವಾದ ಅವರು ಪರಾಜಿತರಾಗುವರು I ದಿಕ್ಕುಪಾಲಾಗುವುವು ನಿಮ್ಮ ಮೇಲೆ ಬಿದ್ದವರ ಮೂಳೆಗಳು II


ಅವರ ಪ್ರವಾದನೆಗೆ ಕಿವಿಗೊಡುವ ಜನರು ಕೂಡ ಕ್ಷಾಮಖಡ್ಗಗಳಿಗೆ ತುತ್ತಾಗುವರು. ಜೆರುಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು. ಅವರನ್ನೂ ಅವರ ಮಡದಿ ಮಕ್ಕಳನ್ನೂ ಹೂಣಲು ಸಹ ಯಾರೂ ಇರುವುದಿಲ್ಲ. ಅವರ ದುಷ್ಟತನವನ್ನು ಅವರ ಮೇಲೆಯೆ ಸುರಿದುಬಿಡುವೆನು.”


ಆಗ ನೀನು ಅವರಿಗೆ ಹೀಗೆಂದು ಹೇಳಬೇಕು : ಸರ್ವೇಶ್ವರನ ಈ ಮಾತಿಗೆ ಕಿವಿಗೊಡಿ : ‘ನಿಮ್ಮ ಪೂರ್ವಜರು ನನ್ನನ್ನು ತೊರೆದುಬಿಟ್ಟರು. ಅನ್ಯದೇವತೆಗಳನ್ನು ಹಿಂಬಾಲಿಸಿದರು. ಅವುಗಳಿಗೆ ಸೇವೆಸಲ್ಲಿಸಿ ಪೂಜಿಸಿದರು. ನನ್ನನ್ನು ಬಿಟ್ಟುದಲ್ಲದೆ ನನ್ನ ಧರ್ಮವಿಧಿಗಳನ್ನು ಮೀರಿದರು.


ಹೆಣ ಹೂಣುವ, ಬೂದಿ ತುಂಬುವ ಕಣಿವೆಯಿಂದ, ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲಮೂಲೆ, ಇವುಗಳವರೆಗಿರುವ ಪ್ರದೇಶವೆಲ್ಲ ಸರ್ವೇಶ್ವರನಿಗೆ ಪರಿಶುದ್ಧ ಸ್ಥಾನವಾಗುವುದು. ಈ ನಗರ ಇನ್ನೆಂದಿಗೂ ನಿರ್ಮೂಲವಾಗದು, ನಾಶವಾಗದು.”


ನಾನು ಇಸ್ರಯೇಲರ ಹೆಣಗಳನ್ನು ಅವರ ಬೊಂಬೆಗಳ ಮುಂದೆ ಬಿಸಾಡಿ ನಿಮ್ಮ ಯಜ್ಞವೇದಿಗಳ ಸುತ್ತಲು ನಿಮ್ಮ ಎಲುಬುಗಳನ್ನು ಎರಚಿಬಿಡುವೆನು.


ನಿನ್ನನ್ನೂ ನಿನ್ನ ಎಲ್ಲ ಮೀನುಗಳನ್ನೂ ಕಾಡುಪಾಲು ಮಾಡುವೆನು; ನೀನು ಬಯಲಿನಲ್ಲಿ ಬಿದ್ದಿರುವೆ; ನಿನ್ನನ್ನು ಯಾರೂ ಹೊರರು, ಹೂಣಿಡರು; ನಿನ್ನನ್ನು ಭೂಜಂತುಗಳಿಗೂ ಆಕಾಶದ ಪಕ್ಷಿಗಳಿಗೂ ಆಹಾರ ಮಾಡಿದ್ದೇನೆ.


ಒರೆಬ್, ಜೇಬ್ ಎಂಬವರ ಗತಿಯೊದಗಲಿ ಇವರ ಸಿರಿವಂತರಿಗೆ I ಜೇಬಹ, ಚೆಲ್ಮುನ್ನರ ಪಾಡು ಬರಲಿರುವ ಸಕಲ ರಾಜರಿಗೆ I “ಬನ್ನಿ, ದೇವರ ನಾಡುಬೀಡನು ಆಕ್ರಮಿಸೋಣ” ಎಂದವರಿಗೆ II


ನಾನು : “ಮಹಿಳೆಯರೇ, ಸರ್ವೇಶ್ವರ ಸ್ವಾಮಿಯ ನುಡಿಯನ್ನು ಕೇಳಿರಿ ಅವರ ಬಾಯಿಂದ ಹೊರಟ ಮಾತಿಗೆ ಕಿವಿ ತೆಗೆಯಿರಿ ನಿಮ್ಮ ಹೆಣ್ಣುಮಕ್ಕಳಿಗೂ ಗೋಳಾಟವನ್ನು ಕಲಿಸಿರಿ ಪ್ರತಿಯೊಬ್ಬಳೂ ತನ್ನ ನೆರೆಯವಳಿಗೆ ಶೋಕಗೀತೆಯನ್ನು ಹೇಳಿಕೊಡಲಿ.


ಏಕೆಂದರೆ ಮೃತ್ಯು ನಮ್ಮ ಕಿಟಕಿಗಳನ್ನು ಏರಿಬಂದಿದೆ ನಮ್ಮ ಉಪ್ಪರಿಗೆಗಳೊಳಗೆ ನುಗ್ಗಿಬಿಟ್ಟಿದೆ ಬೀದಿಗಳಲ್ಲಿ ಮಕ್ಕಳೂ ಕಡಿದುಬಿದ್ದರು ಚೌಕಗಳಲ್ಲಿ ಯುವಕರೂ ಇಲ್ಲವಾದರು.


ಈ ನಾಡಿನಲ್ಲಿ ದೊಡ್ಡವರು ಹಾಗುಚಿಕ್ಕವರು ಸಾಯುವರು. ಅವರನ್ನು ಯಾರು ಹೂಣಿಡುವುದಿಲ್ಲ. ಅವರಿಗಾಗಿ ಯಾರೂ ಗೋಳಾಡುವುದಿಲ್ಲ. ದೇಹವನ್ನು ಹುಣ್ಣಾಗಿಸಿಕೊಳ್ಳುವುದಿಲ್ಲ. ತಲೆ ಬೋಳಿಸಿಕೊಳ್ಳುವುದಿಲ್ಲ.


ಆ ದಿನದಲ್ಲಿ ಸರ್ವೇಶ್ವರನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಿದ್ದಿರುವರು. ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣರು. ಭೂಮಿಯ ಮೇಲೆ ಗೊಬ್ಬರವಾಗಿ ಬಿದ್ದಿರುವರು.


ನಾನೇ ಅಪ್ಪಣೆಕೊಟ್ಟಿದ್ದೇನೆ. ಇದು ಸರ್ವೇಶ್ವರನಾದ ದೇವರ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು