Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 7:28 - ಕನ್ನಡ ಸತ್ಯವೇದವು C.L. Bible (BSI)

28 ಆದಕಾರಣ ನೀನು ಅವರಿಗೆ - ‘ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದುಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದುಹೋಗಿದೆ’ ಎಂದು ಹೇಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆದಕಾರಣ ನೀನು ಅವರಿಗೆ, ತಮ್ಮ ದೇವರಾದ ಯೆಹೋವನ ಧ್ವನಿಗೆ ಕಿವಿಗೊಡದೆ, ಶಿಕ್ಷಿತರಾಗದೆ ಇರುವ ಜನಾಂಗ ಇದುವೇ, ಸತ್ಯವು ಅವರ ಬಾಯಿಂದ ನಿರ್ಮೂಲವಾಗಿ ಅಳಿದುಹೋಗಿದೆ” ಎಂದು ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆದಕಾರಣ ನೀನು ಅವರಿಗೆ - ತಮ್ಮ ದೇವರಾದ ಯೆಹೋವನ ಧ್ವನಿಗೆ ಕಿವಿಗೊಡದೆ ಶಿಕ್ಷಿತರಾಗದೆ ಇರುವ ಜನವು ಇದೇ, ಸತ್ಯವು ಅವರ ಬಾಯಿಂದ ನಿರ್ಮೂಲವಾಗಿ ಅಳಿದುಹೋಗಿದೆ ಎಂದು ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸದ ಜನಾಂಗವಿದು. ಈ ಜನರು ದೇವರ ಧರ್ಮೋಪದೇಶವನ್ನು ಕೇಳಲಿಲ್ಲ. ಈ ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆದ್ದರಿಂದ ಅವರಿಗೆ ಹೀಗೆ ಹೇಳು, ‘ಇದು ಅವರ ದೇವರಾದ ಯೆಹೋವ ದೇವರಿಗೆ ವಿಧೇಯನಾಗದ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸದಂಥ ಜನಾಂಗವಾಗಿದೆ. ಸತ್ಯವು ನಾಶವಾಯಿತು. ಇದು ಅವರ ಬಾಯಿಂದ ತೆಗೆದುಹಾಕಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 7:28
21 ತಿಳಿವುಗಳ ಹೋಲಿಕೆ  

ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ. ಶಿಕ್ಷಣಕ್ಕೆ ಒಳಪಡಲಿಲ್ಲ. ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ, ತನ್ನ ದೇವರ ಸನ್ನಿಧಿಗೆ ಬರಲಿಲ್ಲ.


ಅವರು ನನಗೆ ಅಭಿಮುಖರಾಗದೆ ಬೆನ್ನುಮಾಡಿದ್ದಾರೆ. ನಾನು ಅವರಿಗೆ ಎಡೆಬಿಡದೆ ಬೋಧಿಸುತ್ತಾ ಬಂದರೂ ನನ್ನ ಉಪದೇಶವನ್ನು ಅಂಗೀಕರಿಸಲಿಲ್ಲ, ನನಗೆ ಕಿವಿಗೊಡಲೂ ಇಲ್ಲ.


ಸರ್ವೇಶ್ವರನಲ್ಲಿ ಭಯಭಕ್ತಿಯೇ ಜ್ಞಾನಕ್ಕೆ ಮೂಲ; ಮೂರ್ಖರಿಗಾದರೋ ಜ್ಞಾನ, ಶಿಸ್ತು ಎಂದರೆ ತಾತ್ಸಾರ.


ಇದರಿಂದಲಾದರೂ ಜೆರುಸಲೇಮ್ ನಗರ ನನಗೆ ಭಯಪಡುವುದು, ನಾನು ಕಲಿಸಿದ ಪಾಠವನ್ನು ಎಂದಿಗೂ ಮರೆಯದು’ ಎಂದುಕೊಂಡೆ. ಆದರೆ ಅದರ ನಿವಾಸಿಗಳು ತಮ್ಮ ನಡತೆಯನ್ನು ಕೆಡಿಸಿಕೊಳ್ಳಲು ಮತ್ತಷ್ಟು ಕಾತರರಾದರು.”


ಇಸ್ರಯೇಲಿನವರೇ, ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಆಲಿಸಿರಿ: “ಈ ದೇಶದಲ್ಲಿ ಸತ್ಯ, ಪ್ರೀತಿ, ಭಕ್ತಿ ಎಂಬುದೇ ಇಲ್ಲ. ಇಲ್ಲಿನ ನಿವಾಸಿಗಳ ಮೇಲೆ ಸರ್ವೇಶ್ವರ ಆಪಾದನೆ ಹೊರಿಸಿದ್ದಾರೆ.


ಜೆರುಸಲೇಮ್, ಎಚ್ಚರಿಕೆಯಿಂದ ನಡೆದುಕೊ. ಇಲ್ಲವಾದರೆ ನಾನು ನಿನ್ನನ್ನು ಅಗಲಿಬಿಡುವೆನು. ನಿನ್ನನ್ನು ಪಾಳುಬಿದ್ದ ನಿರ್ಜನ ಪ್ರದೇಶವಾಗಿಸುವೆನು.”


ಸ್ವಾಮಿ ಸರ್ವೇಶ್ವರನ ಕಣ್ಣು ನಾಟಿಸುವುದು ಸತ್ಯದ ಮೇಲೆ. ಅವರು ದಂಡಿಸಿದರೂ ನೀವು ಪಶ್ಚಾತ್ತಾಪಪಡಲಿಲ್ಲ. ಅವರು ನಸುಕಿದರೂ ನೀವು ತಿದ್ದುಕೊಳ್ಳಲು ಒಪ್ಪಲಿಲ್ಲ. ನಿಮ್ಮ ಮುಖವನ್ನು ಕಲ್ಲಿಗಿಂತ ಕಠಿಣ ಮಾಡಿಕೊಂಡಿರಿ. ಅವರಿಗೆ ಅಭಿಮುಖರಾಗಲು ಸಮ್ಮತಿಸದೆಹೋದಿರಿ.


ಜೆರುಸಲೇಮಿನ ಜನರೇ, ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನೋಡಿ ಅಲ್ಲಿನ ಚೌಕಗಳಲ್ಲಿ ಹುಡುಕಾಡಿ ನೋಡಿ. ನೀತಿಯನ್ನು ಕೈಗೊಂಡು ಸತ್ಯವನ್ನರಸುವವನು ಒಬ್ಬನಾದರೂ ಇದ್ದಾನೆಯೇ? ಅಂಥ ಸತ್ಪುರುಷ ಸಿಕ್ಕುತ್ತಾನೆಯೆ ಎಂಬುದನ್ನು ನೀವೇ ನಿಶ್ಚಯಿಸಿರಿ; ಸಿಕ್ಕಿದ್ದೇ ಆದರೆ ಸರ್ವೇಶ್ವರ ಸ್ವಾಮಿ ಆ ನಗರವನ್ನು ಕ್ಷಮಿಸುವರು.


ನಾನು ನಿಮ್ಮನ್ನು ದಂಡಿಸಿದ್ದು ವ್ಯರ್ಥವಾಯಿತು, ನೀವು ತಿದ್ದುಕೊಳ್ಳಲಿಲ್ಲ. ಸಂಹರಿಸುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ಕತ್ತಿಗೆ ತುತ್ತಾಗಿಸಿದ್ದೀರಿ.


ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ I ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ II


ಸರ್ವೇಶ್ವರ ಸ್ವಾಮಿ ಕಾವಲುಗಾರರನ್ನು ನೇಮಿಸಿ, “ಕಹಳೆಯ ಕೂಗನ್ನು ಕೇಳಿ” ಎಂದರು. ಅವರು “ಇಲ್ಲ, ಕೇಳುವುದಿಲ್ಲ” ಎಂದು ಉತ್ತರಿಸಿದರು.


ನನ್ನ ಮಾತನ್ನು ಕೇಳದೆಹೋದ ತಮ್ಮ ಮೂಲಪಿತೃಗಳ ದುಷ್ಕೃತ್ಯಗಳ ಕಡೆ ಈ ಜನರು ತಿರುಗಿಕೊಂಡಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸುತ್ತಿದ್ದಾರೆ. ಅವುಗಳನ್ನು ಪೂಜಿಸುತ್ತಿದ್ದಾರೆ. ನಾನು ಅವರ ಪೂರ್ವಜರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ಮೀರಿದ್ದಾರೆ.


ಅವರಾದರೋ ನನಗೆ ಕಿವಿಗೊಡಲಿಲ್ಲ. ಕೇಳಲಿಕ್ಕೂ ಕಲಿತುಕೊಳ್ಳಲಿಕ್ಕೂ ಅವರು ಒಪ್ಪಲಿಲ್ಲ.


ಹುಸಿಯ ನುಡಿವರು ನೆರೆಯವರೊಡನೆ ಪ್ರತಿಯೋರ್ವರು I ಕಪಟ ಮನದ ತುಟಿಮಾತಿನ ಸ್ತುತಿಗಾರರವರು II


ಇವರು ದಂಗೆ ಏಳುವ ಜನರು. ಸುಳ್ಳಾಡುವ ಪೀಳಿಗೆ, ಸರ್ವೇಶ್ವರನ ಉಪದೇಶಕ್ಕೆ ಕಿವಿಗೊಡದ ಸಂತಾನ,


ಅವರೆಲ್ಲರು ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ತಾಮ್ರ, ಕಬ್ಬಿಣಕ್ಕೆ ಸಮಾನರು, ಎಲ್ಲರೂ ಕೇಡಿಗರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು