ಯೆರೆಮೀಯ 7:2 - ಕನ್ನಡ ಸತ್ಯವೇದವು C.L. Bible (BSI)2 “ನೀನು ನನ್ನ ಆಲಯದ ಬಾಗಿಲಲ್ಲಿ ನಿಂತು ಈ ವಾಕ್ಯವನ್ನು ಸಾರು - ‘ಸರ್ವೇಶ್ವರ ಸ್ವಾಮಿಗೆ ಅಡ್ಡಬೀಳಲು ಈ ದ್ವಾರಗಳನ್ನು ಪ್ರವೇಶಿಸುವ ಎಲ್ಲ ಯೆಹೂದ್ಯರೇ, ಸರ್ವೇಶ್ವರನ ನುಡಿಯನ್ನು ಕೇಳಿ; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 “ನೀನು ಯೆಹೋವನ ಆಲಯದ ಬಾಗಿಲಿನಲ್ಲಿ ನಿಂತು ಈ ವಾಕ್ಯವನ್ನು ಅಲ್ಲಿ ಸಾರು, ಯೆಹೋವನಿಗೆ ಅಡ್ಡಬೀಳುವುದಕ್ಕೆ ಈ ದ್ವಾರಗಳನ್ನು ಪ್ರವೇಶಿಸುವ ಸಕಲ ಯೆಹೂದ್ಯರೇ, ಯೆಹೋವನ ನುಡಿಯನ್ನು ಕೇಳಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ನೀನು ಯೆಹೋವನ ಆಲಯದ ಬಾಗಿಲಿನಲ್ಲಿ ನಿಂತು ಈ ವಾಕ್ಯವನ್ನು ಅಲ್ಲಿ ಸಾರು - ಯೆಹೋವನಿಗೆ ಅಡ್ಡಬೀಳುವದಕ್ಕೆ ಈ ದ್ವಾರಗಳನ್ನು ಪ್ರವೇಶಿಸುವ ಸಕಲ ಯೆಹೂದ್ಯರೇ, ಯೆಹೋವನ ನುಡಿಯನ್ನು ಕೇಳಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 “ಯೆರೆಮೀಯನೇ, ಯೆಹೋವನ ಆಲಯದ ಹೆಬ್ಬಾಗಿಲಿನ ಹತ್ತಿರ ನಿಂತುಕೊಂಡು ಈ ಸಂದೇಶವನ್ನು ಸಾರು: “‘ಇದು ಯೆಹೋವನ ಸಂದೇಶ. ಯೆಹೂದದ ಜನರೆಲ್ಲರೇ, ಯೆಹೋವನನ್ನು ಆರಾಧಿಸಲು ಈ ದ್ವಾರದಿಂದ ಪ್ರವೇಶ ಮಾಡುವ ಜನರೇ, ಈ ಸಂದೇಶವನ್ನು ಕೇಳಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 “ಯೆಹೋವ ದೇವರ ಆಲಯದ ಬಾಗಿಲಲ್ಲಿ ನಿಂತುಕೊಂಡು ಈ ವಾಕ್ಯವನ್ನು ಅಲ್ಲಿ ಸಾರು: “ ‘ಯೆಹೂದ್ಯರೇ, ಯೆಹೋವ ದೇವರನ್ನು ಆರಾಧಿಸುವುದಕ್ಕೆ ಈ ಬಾಗಿಲುಗಳಲ್ಲಿ ಸೇರುವವರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಅಧ್ಯಾಯವನ್ನು ನೋಡಿ |
ಇದಲ್ಲದೆ ಯೆರೆಮೀಯನು ಆ ಎಲ್ಲ ಜನರಿಗೆ ಮುಖ್ಯವಾಗಿ ಮಹಿಳೆಯರಿಗೆ, ಹೀಗೆ ಹೇಳಿದನು: “ಈಜಿಪ್ಟಿನಲ್ಲಿರುವ ಯೆಹೂದ್ಯರೇ, ನಿಮ್ಮೆಲ್ಲರಿಗೆ ಸರ್ವೇಶ್ವರ ಹೀಗೆನ್ನುತ್ತಾರೆ - ‘ಗಗನದೊಡತಿಗೆ ಧೂಪಾರತಿ ಎತ್ತಿ ಪಾನನೈವೇದ್ಯವನ್ನು ಸುರಿಯುತ್ತೇವೆ. ಅದಕ್ಕಾಗಿ ಮಾಡಿಕೊಂಡ ಹರಕೆಯನ್ನು ಖಂಡಿತವಾಗಿ ತೀರಿಸುತ್ತೇವೆ ಎಂಬುದಾಗಿ ನೀವೂ ನಿಮ್ಮ ಹೆಂಡತಿಯರೂ ಬಾಯಿಂದ ಪ್ರತಿಜ್ಞೆಮಾಡಿದ್ದೀರಿ, ಕೈಯಿಂದ ನೆರವೇರಿಸಿದ್ದೀರಿ! ಸರಿಸರಿ, ನಿಮ್ಮ ಹರಕೆಗಳನ್ನು ತೀರಿಸಿರಿ, ಅವುಗಳನ್ನು ಬಿಡದೆ ನೆರವೇರಿಸಿರಿ!