Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 7:13 - ಕನ್ನಡ ಸತ್ಯವೇದವು C.L. Bible (BSI)

13 ನಾನು ತಡಮಾಡದೆ ನುಡಿದ ಮಾತುಗಳನ್ನು ನೀವು ಕೇಳದೆ, ನಿಮ್ಮನ್ನು ಕರೆದ ನನಗೆ ಓಗೊಡದೆ, ಈ ಕೃತ್ಯಗಳನ್ನೆಲ್ಲ ಮಾಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನಾನು ಸಾವಕಾಶ ಮಾಡದೆ ನಿಮಗೆ ನುಡಿದ ಮಾತುಗಳನ್ನು ನೀವು ಕೇಳದೆ, ನಿಮ್ಮನ್ನು ಕರೆದ ನನಗೆ ಉತ್ತರ ಕೊಡದೆ ಈ ಕೃತ್ಯಗಳನ್ನೆಲ್ಲಾ ನಡೆಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನಾನು ಸಾವಕಾಶ ಮಾಡದೆ ನಿಮಗೆ ನುಡಿದ ಮಾತುಗಳನ್ನು ನೀವು ಕೇಳದೆ ನಿಮ್ಮನ್ನು ಕರೆದ ನನಗೆ ಉತ್ತರಕೊಡದೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಇಸ್ರೇಲಿನ ಜನರಾದ ನೀವು ಈ ದುಷ್ಕೃತ್ಯಗಳನ್ನು ಮಾಡುತ್ತಿದ್ದೀರಿ.” ಇದು ಯೆಹೋವನಾದ ನನ್ನ ಮಾತು: “ನಾನು ನಿಮಗೆ ಮತ್ತೆಮತ್ತೆ ಹೇಳಿದೆ, ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ನಾನು ನಿಮ್ಮನ್ನು ಕೂಗಿದೆ, ಆದರೆ ನೀವು ಉತ್ತರ ಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಈಗ ಯೆಹೋವ ದೇವರು ಹೇಳುವುದೇನೆಂದರೆ, ನೀವು ಈ ಕೆಲಸಗಳನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮನ್ನು ಕರೆದರೂ, ನೀವು ಉತ್ತರ ಕೊಡದೆ ಹೋದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 7:13
27 ತಿಳಿವುಗಳ ಹೋಲಿಕೆ  

ನೀವೆಲ್ಲರು ಕೊಲೆಗೆ ಗುರಿಯಾಗುವಿರಿ, ಕತ್ತಿಗೆ ತುತ್ತಾಗುವಿರಿ. ಏಕೆಂದರೆ, ನಾನು ಕೂಗಿದಾಗ ನೀವು ಉತ್ತರಕೊಡಲಿಲ್ಲ, ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೇ ನಡೆಸಿ ನನಗೆ ಇಷ್ಟವಿಲ್ಲದ್ದನ್ನೇ ಆಯ್ಕೆಮಾಡಿಕೊಂಡಿರಿ.


ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದು ಇದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ.


ನಾನು ನಿಮ್ಮನ್ನು ಕರೆದಾಗ ತಿರಸ್ಕರಿಸಿದಿರಿ. ನಾನು ನಿಮಗೆ ಕೈ ನೀಡಿದಾಗ ಗಮನಿಸದೆ ಹೋದಿರಿ.


“ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿಯು ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆನು. ಆದರೆ ನೀವು ಒಪ್ಪಲಿಲ್ಲ.


ಆಗ ಹೀಗೆಂದೆ: ‘ನಾನು ಕೂಗಿದಾಗ ಅವರು ಕೇಳದೆಹೋದರು; ಅವರು ಕೂಗಿದಾಗ ನಾನು ಕೇಳಲಿಲ್ಲ.’


ಅವರು ನನ್ನ ಕಡೆಯಿಂದ ದೂರಹೋಗುವ ಹಠಹಿಡಿದಿದ್ದಾರೆ; ಅವರು ನೊಗದ ಭಾರವನ್ನು ತಾಳದೆ ಕೂಗಿಕೊಂಡರೂ ಅದನ್ನು ಬಿಚ್ಚುವವರು ಯಾರೂ ಇಲ್ಲ.


ದೂರ ಸರಿದರು ಆ ಇಸ್ರಯೇಲರು ನಾ ಕರೆದರೂ ನನ್ನ ಬಳಿಗೆ ಅರ್ಪಿಸುತ್ತಾ ಬಂದರು ಯಜ್ಞವನ್ನು ಬಾಳ್ ದೇವತೆಗಳಿಗೆ ಧೂಪಾರತಿ ಬೆಳಗುತ್ತಾ ಬಂದರು ಆ ವಿಗ್ರಹಗಳಿಗೆ.


ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲಾ ಅವರ ಬಳಿಗೆ ತಡಮಾಡದೆ ಕಳುಹಿಸುತ್ತಾಬಂದೆ. ‘ಎಚ್ಚರಿಕೆ, ನಾನು ಹೇಸುವ ಈ ಅಸಹ್ಯಕಾರ್ಯಗಳನ್ನು ಮಾಡಬೇಡಿ’ ಎಂದು ಪ್ರಕಟಿಸುತ್ತಾ ಬಂದೆ.


ಆದ್ದರಿಂದ ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲಿನ ದೇವರೂ ಆದ ನಾನು ಹೇಳುವುದನ್ನು ಗಮನಿಸು: ಯೆಹೂದ್ಯರಿಗೂ ಜೆರುಸಲೇಮಿನವರೆಲ್ಲರಿಗೂ ನಾನು ಕೊಟ್ಟ ಶಾಪದ ಕೇಡುಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು. ನಾನು ಹೇಳಿದರೂ ಅವರು ಕೇಳಲಿಲ್ಲ, ಕೂಗಿದರೂ ಉತ್ತರಕೊಡಲಿಲ್ಲ’.”


ಇದಲ್ಲದೆ, ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲ ನಿಮ್ಮ ಬಳಿಗೆ ನಿರಂತರವಾಗಿ ಕಳಿಸುತ್ತಾ ಬಂದೆ. ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸದಿರಿ. ಹಾಗೆ ಮಾಡಿದರೆ ನಾನು ನಿಮಗೂ ನಿಮ್ಮ ಪೂರ್ವಜರಿಗೂ ಅನುಗ್ರಹಿಸಿದ ನಾಡಿನಲ್ಲಿ ಸುಖವಾಸಿಗಳಾಗಿರುವಿರಿ ಎಂದು ಅವರ ಮುಖಾಂತರ ಎಚ್ಚರಿಸಿದೆ. ಆದರೆ ನೀವು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.


“ಆಮೋನನ ಮಗನೂ ಜುದೇಯದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೇ ವರ್ಷದಿಂದ ಈ ದಿನದವರೆಗೆ, ಅಂದರೆ ಕಳೆದ ಇಪ್ಪತ್ತು ಮೂರು ವರ್ಷಗಳಿಂದ ಸರ್ವೇಶ್ವರ ಸ್ವಾಮಿ ತಮ್ಮ ವಾಕ್ಯವನ್ನು ನನಗೆ ತಿಳಿಸಿದ್ದಾರೆ. ಅದನ್ನು ನಾನು ನಿಮಗೆ ತಡಮಾಡದೆ ಪ್ರಕಟಿಸುತ್ತಾ ಬಂದಿದ್ದೇನೆ. ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ.


ನಿಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನದಿಂದ ಇಂದಿನವರೆಗೂ ನಾನು ಅವರಿಗೆ ನನ್ನ ಮಾತನ್ನು ಕೇಳಿರೆಂದು ತಡಮಾಡದೆ ಖಂಡಿತವಾಗಿ ಆಜ್ಞಾಪಿಸುತ್ತಾ ಬಂದಿದ್ದೇನೆ.


ಆದುದರಿಂದ ಅವರಿಗೆ ಆಪತ್ತು ಬಂದೊದಗುವಂತೆ ಮಾಡುವೆನು. ಅವರು ಅಂಜುತ್ತಿದ್ದ ವಿಪತ್ತುಗಳನ್ನೇ ಅವರ ಮೇಲೆ ಬರಮಾಡುವೆನು. ಏಕೆಂದರೆ, ನಾನು ಕೂಗಿದಾಗ ಯಾರೂ ಉತ್ತರಿಸಲಿಲ್ಲ, ನಾನು ಹೇಳಿದಾಗ ಅವರು ಕೇಳಲಿಲ್ಲ. ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು, ನನಗೆ ಇಷ್ಟವಲ್ಲದ್ದನ್ನೇ ಆಯ್ಕೆಮಾಡಿಕೊಂಡರು.”


ನಾನು ರಕ್ಷಿಸಲು ಬಂದಾಗ ಯಾರೂ ಕಾದಿರಲಿಲ್ಲ, ಏಕೆ? ನಾನು ಕೂಗಿಕರೆದಾಗ ಯಾರೂ ಉತ್ತರಕೊಡಲಿಲ್ಲ, ಏಕೆ? ನನ್ನ ಹಸ್ತವು ರಕ್ಷಿಸಲಾರದ ಮೋಟುಗೈಯೋ? ಉದ್ಧರಿಸುವ ಶಕ್ತಿ ನನ್ನಲ್ಲಿ ಇಲ್ಲವೋ? ಬರಿ ಗರ್ಜನೆಯಿಂದ ಬತ್ತಿಸಬಲ್ಲೆ ಸಮುದ್ರವನು ಬೆಂಗಾಡಾಗಿಸಬಲ್ಲೆ ನಾ ನದಿಸರೋವರಗಳನು ಬಾಯಾರಿ ಸತ್ತು ನಾರುವಂತೆ ಮಾಡಬಲ್ಲೆ ಅಲ್ಲಿಯ ಮೀನುಗಳನು.


ಇಸ್ರಯೇಲ್ ವಂಶವೆಲ್ಲವು ಹಾಗು ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕ್ಟಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನಗೆ ಕಿವಿಗೊಡದೆಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.”


ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆಹೋದರೆ,


ಅವರು ನನಗೆ ಅಭಿಮುಖರಾಗದೆ ಬೆನ್ನುಮಾಡಿದ್ದಾರೆ. ನಾನು ಅವರಿಗೆ ಎಡೆಬಿಡದೆ ಬೋಧಿಸುತ್ತಾ ಬಂದರೂ ನನ್ನ ಉಪದೇಶವನ್ನು ಅಂಗೀಕರಿಸಲಿಲ್ಲ, ನನಗೆ ಕಿವಿಗೊಡಲೂ ಇಲ್ಲ.


‘ರೇಕಾಬನ ಮಗ ಯೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇ ಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.


ನೀವು ಸರ್ವೇಶ್ವರ ಸ್ವಾಮಿಯ ಮಾತನ್ನು ಕೇಳದೆ, ಅವರ ಧರ್ಮಶಾಸ್ತ್ರವನ್ನೂ ನಿಬಂಧನೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸದೆ, ಪಾಪಮಾಡಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿದ್ದರಿಂದಲೇ ಇಂಥಾ ವಿಪತ್ತು ನಿಮಗೆ ಸಂಭವಿಸಿದೆ.”


ಕಣ್ಣಿದ್ದರೂ ಕಾಣದ, ಕಿವಿಯಿದ್ದರೂ ಕೇಳದ, ಬುದ್ಧಿಯಿಲ್ಲದ ಜನರೇ, ಸರ್ವೇಶ್ವರನ ಈ ಮಾತನ್ನು ಕೇಳಿರಿ;


ಅದಕ್ಕೆ ನಾನು, “ಅಯ್ಯೋ ! ಯಾರ ಸಂಗಡ ನಾನು ಮಾತಾಡಿ ಅವರು ಗಮನಿಸುವಂತೆ ಮಾಡಲಿ? ಅವರ ಕಿವಿ ಮಂದ . ಅವರು ಕೇಳಿಸಿಕೊಳ್ಳುವುದಿಲ್ಲ . ಸರ್ವೇಶ್ವರ ಆದ ನಿಮ್ಮ ಮಾತು ಎಂದರೆ ಅವರಿಗೆ ತಿರಸ್ಕಾರ. ಅದು ಅವರಿಗೆ ರುಚಿಸುವುದಿಲ್ಲ.


ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಪ್ರತಿಯೊಬ್ಬನು ತನ್ನ ದುಷ್ಟ ಹೃದಯದ ನಿಮಿತ್ತ ಹಟಮಾರಿಯಂತೆ ನಡೆದುಕೊಂಡನು. ಆದಕಾರಣ, ಕೈಗೊಳ್ಳಬೇಕೆಂದು ನಾನು ಆಜ್ಞಾಪಿಸಿದ್ದರೂ ಅವರು ಕೈಗೊಳ್ಳದೆಹೋದ ಆ ಒಡಂಬಡಿಕೆಯಲ್ಲೆ ಸೂಚಿಸಲಾಗಿರುವ ಶಾಪಗಳನ್ನೆಲ್ಲ ಅವರ ಮೇಲೆ ಬರಮಾಡಿದೆ.”


ಈ ದುಷ್ಟಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬರುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು.


ಏಕೆಂದರೆ ಅವರು ನನ್ನ ಮಾತುಗಳನ್ನು ಕೇಳದೆಹೋದರು. ನನ್ನ ದಾಸರಾದ ಪ್ರವಾದಿಗಳನ್ನು ಪದೇಪದೇ ಅವರ ಬಳಿಗೆ ಕಳಿಸಿದರೂ ಕೇಳಲೊಲ್ಲದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.


ತಮ್ಮ ಮಾತಿಗೆ ಕಿವಿಗೊಡದ ಈ ಜನರನ್ನು ಸರ್ವೇಶ್ವರ ತಳ್ಳಿಬಿಡುವರು. ಇತರ ಜನಾಂಗಗಳ ಮಧ್ಯೆ ಅವರು ಅಲೆಮಾರಿಗಳಂತೆ ಇರುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು