Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 52:11 - ಕನ್ನಡ ಸತ್ಯವೇದವು C.L. Bible (BSI)

11 ಇದಲ್ಲದೆ ಬಾಬಿಲೋನಿಯದ ಆ ಅರಸನು ಚಿದ್ಕೀಯನ ಎರಡು ಕಣ್ಣುಗಳನ್ನು ಕಿತ್ತು ಅವನಿಗೆ ಬೇಡಿ ಹಾಕಿ ಬಾಬಿಲೋನಿಗೆ ತೆಗೆದುಕೊಂಡು ಹೋಗಿ ಜೀವನಾವಧಿಯವರೆಗೆ ಅವನನ್ನು ಸೆರೆಯಲ್ಲಿಟ್ಟ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇದಲ್ಲದೆ ಬಾಬೆಲಿನ ಅರಸನು ಚಿದ್ಕೀಯನ ಎರಡು ಕಣ್ಣುಗಳನ್ನೂ ಕಿತ್ತು, ಅವನಿಗೆ ಬೇಡಿ ಹಾಕಿ ಬಾಬಿಲೋನಿಗೆ ತೆಗೆದುಕೊಂಡು ಹೋಗಿ, ಅವನು ಜೀವದಿಂದ ಇರುವವರೆಗೆ ಸೆರೆಯಲ್ಲಿ ಇಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇದಲ್ಲದೆ ಬಾಬೆಲಿನ ಅರಸನು ಚಿದ್ಕೀಯನ ಎರಡು ಕಣ್ಣುಗಳನ್ನೂ ಕಿತ್ತು ಅವನಿಗೆ ಬೇಡಿ ಹಾಕಿ ಬಾಬೆಲಿಗೆ ತೆಗೆದುಕೊಂಡು ಹೋಗಿ ಅವನು ಜೀವದಿಂದಿರುವವರೆಗೆ ಸೆರೆಯಲ್ಲಿ ಇಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ತರುವಾಯ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣುಗಳನ್ನು ಸಹ ಕೀಳಿಸಿದನು. ಅವನಿಗೆ ಕಂಚಿನ ಸರಪಳಿಗಳನ್ನು ಬಿಗಿಸಿದನು. ಆಮೇಲೆ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಬಾಬಿಲೋನಿನಲ್ಲಿ ಚಿದ್ಕೀಯನನ್ನು ಸೆರೆಮನೆಯಲ್ಲಿ ಇಟ್ಟನು. ಚಿದ್ಕೀಯನು ಸಾಯುವವರೆಗೆ ಸೆರೆಮನೆಯಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಬೇಡಿಹಾಕಿಸಿ, ಬಾಬಿಲೋನಿಗೆ ತೆಗೆದುಕೊಂಡುಹೋಗಿ, ಜೀವನಾವಧಿಯವರೆಗೆ ಅವನನ್ನು ಸೆರೆಯಲ್ಲಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 52:11
7 ತಿಳಿವುಗಳ ಹೋಲಿಕೆ  

ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು: ಬಾಬಿಲೋನಿಯಾ ದೇಶದ ಬಾಬಿಲೋನ್ ನಗರಕ್ಕೆ ಅವನನ್ನು ಒಯ್ಯುವೆನು; ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡನು.


ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಬೇಡಿಹಾಕಿಸಿ, ಬಾಬಿಲೋನಿಗೆ ಸಾಗಿಸಿದನು.


“ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ಇವನು ಯಾವನಿಂದ ಅರಸನಾಗಿ ನೇಮಕಗೊಂಡನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾವನ ಒಪ್ಪಂದವನ್ನು ಮೀರಿದನೋ, ಆ ಅರಸನ ಬಳಿಯಲ್ಲೆ, ಅಂದರೆ ಬಾಬಿಲೋನೆಂಬ ಅವನ ವಾಸಸ್ಥಾನದಲ್ಲೆ, ಇವನು ಸಾಯುವುದು ಖಂಡಿತ.


ಬಳಿಕ ನಾನು ಜುದೇಯದ ಅರಸ ಚಿದ್ಕೀಯನನ್ನೂ ಅವನ ಸೇವಕರನ್ನೂ ಹಾಗೂ ವ್ಯಾಧಿ, ಖಡ್ಗ, ಕ್ಷಾಮಗಳಿಂದ ಅಳಿಯದೆ ಉಳಿದ ಪ್ರಜೆಗಳನ್ನೂ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಕೈಗೂ ಅವರ ಪ್ರಾಣವನ್ನು ಹುಡುಕುತ್ತಿರುವ ಅವರ ಶತ್ರುಗಳ ಕೈಗೂ ಬಿಟ್ಟುಬಿಡುವೆನು. ಅವನು ಅವರನ್ನು ಕತ್ತಿಯಿಂದ ಕೊಂದುಹಾಕುವನು. ಅವರನ್ನು ಕರುಣಿಸನು, ಕನಿಕರಿಸನು, ಉಳಿಯಗೊಳಿಸನು.”


ತನ್ನ ಗರ್ಭಗುಡಿಯನ್ನೂ ಉತ್ಸವಸ್ಥಾನವನ್ನೂ ಹಾಳುಮಾಡಿದ ತೋಟದ ಗುಡಿಸಲನ್ನೋ ಎಂಬಂತೆ. ಮಹೋತ್ಸವಗಳನ್ನೂ ಸಬ್ಬತ್‍ದಿನಗಳನ್ನೂ ಅಳಿಸಿಬಿಟ್ಟ ನೆನಪಿಗೂ ಬಾರದಂತೆ. ರಾಜರನ್ನೂ ಯಾಜಕರನ್ನೂ ಸರ್ವೇಶ್ವರ ಧಿಕ್ಕರಿಸಿದ ಅತಿ ರೋಷಾವೇಷಗೊಂಡವನಂತೆ.


ಅವರು ಆಯುಧ, ರಥ, ಸರಕುಗಾಡಿ, ಜನಾಂಗಗಳ ಸಮೂಹ, ಇವುಗಳೊಂದಿಗೆ ನಿನ್ನ ಮೇಲೆ ಬೀಳುವರು; ಗುರಾಣಿ, ಖೇಡ್ಯ, ಶಿರಸ್ತ್ರಾಣ, ಇವುಗಳನ್ನು ಧರಿಸಿ, ನಿನಗೆ ವಿರುದ್ಧ ಸುತ್ತುಮುತ್ತಲು ವ್ಯೂಹ ಕಟ್ಟುವರು. ನ್ಯಾಯತೀರಿಸುವ ಅಧಿಕಾರವನ್ನು ನಾನು ಅವರಿಗೆ ಕೊಡುವೆನು; ಅವರು ತಮ್ಮ ನ್ಯಾಯಾನುಸಾರ ತೀರ್ಪುನೀಡಿ ನಿನ್ನನ್ನು ದಂಡಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು