ಯೆರೆಮೀಯ 51:8 - ಕನ್ನಡ ಸತ್ಯವೇದವು C.L. Bible (BSI)8 ಬಾಬಿಲೋನ್ ತಟ್ಟನೆ ಬಿದ್ದು ಹಾಳಾಯಿತು. ಅದಕ್ಕಾಗಿ ಗೋಳಾಡಿ. ಅದರ ನೋವನ್ನು ನೀಗಿಸಲು ಔಷಧವನ್ನು ತನ್ನಿ. ಒಂದು ವೇಳೆ ಅದು ಗುಣವಾದೀತು! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಬಾಬೆಲ್ ತಟ್ಟನೆ ಬಿದ್ದು ಹಾಳಾಯಿತು! ಅದಕ್ಕಾಗಿ ಗೋಳಾಡಿರಿ; ಅದರ ನೋವನ್ನು ನೀಗಿಸುವುದಕ್ಕೆ ಔಷಧವನ್ನು ಸಂಪಾದಿಸಿರಿ, ಗುಣವಾದೀತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಬಾಬೆಲ್ ತಟ್ಟನೆ ಬಿದ್ದು ಹಾಳಾಯಿತು! ಅದಕ್ಕಾಗಿ ಅರಿಚಿರಿ; ಅದರ ನೋವನ್ನು ನೀಗಿಸುವದಕ್ಕೆ ಔಷಧವನ್ನು ಸಂಪಾದಿಸಿರಿ, ಗುಣವಾದೀತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಬಾಬಿಲೋನ್ ಬೀಳುವುದು; ಬೇಗನೆ ಮುರಿದುಹೋಗುವುದು. ಅದರ ಸಲುವಾಗಿ ಗೋಳಾಡಿರಿ. ಅದರ ನೋವಿಗಾಗಿ ಔಷಧಿಯನ್ನು ತೆಗೆದುಕೊಂಡು ಬನ್ನಿ, ಒಂದುವೇಳೆ ಅದು ಗುಣಹೊಂದಬಹುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಇದ್ದಕ್ಕಿದ್ದ ಹಾಗೆ ಬಾಬಿಲೋನ್ ಬಿದ್ದು ಹಾಳಾಗಿದೆ; ಅದರ ವಿಷಯ ಗೋಳಾಡಿರಿ; ಅದರ ನೋವಿಗೆ ತೈಲ ತೆಗೆದುಕೊಳ್ಳಿರಿ; ಒಂದು ವೇಳೆ ವಾಸಿಯಾದೀತು. ಅಧ್ಯಾಯವನ್ನು ನೋಡಿ |