Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:46 - ಕನ್ನಡ ಸತ್ಯವೇದವು C.L. Bible (BSI)

46 ನಿಮ್ಮ ಎದೆ ಕುಂದದಿರಲಿ. ನಾಡಿನಲ್ಲಿ ಕಿವಿಗೆ ಬೀಳುವ ಸುದ್ದಿ ನಿಮ್ಮನ್ನು ಹೆದರಿಸದಿರಲಿ. ಒಂದು ವರ್ಷ ಒಂದು ಸುದ್ದಿಯಾದರೆ ಮತ್ತೊಂದು ವರ್ಷ ಮತ್ತೊಂದು ಸುದ್ದಿ. ಹಿಂಸಾಚಾರ ಪ್ರಬಲವಾಗುತ್ತಿದೆ ನಾಡಿನಲ್ಲಿ. ಅಧಿಕಾರಿಗೆ ಅಧಿಕಾರಿಯೇ ವಿರೋಧಿ ಅಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ನಿಮ್ಮ ಎದೆಯು ಕುಂದದಿರಲಿ, ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಯು ನಿಮ್ಮನ್ನು ಹೆದರಿಸದಿರಲಿ; ಒಂದು ವರ್ಷ ಒಂದು ಸುದ್ದಿಯು, ಮತ್ತೊಂದು ವರ್ಷ ಮತ್ತೊಂದು ಸುದ್ದಿಯು ಹರಡುತ್ತಿರುವವು; ಬಲಾತ್ಕಾರವು ದೇಶದಲ್ಲಿ ಪ್ರಬಲವಾಗುವುದು, ಅಧಿಕಾರಿಯು ಅಧಿಕಾರಿಗೆ ವಿರೋಧಿಯಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ನಿಮ್ಮ ಎದೆಯು ಕುಂದದಿರಲಿ, ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಯು ನಿಮ್ಮನ್ನು ಹೆದರಿಸದಿರಲಿ; ಒಂದು ವರುಷ ಒಂದು ಸುದ್ದಿಯು, ಮತ್ತೊಂದು ವರುಷ ಮತ್ತೊಂದು ಸುದ್ದಿಯು ಹರಡುತ್ತಿರುವವು; ಬಲಾತ್ಕಾರವು ದೇಶದಲ್ಲಿ ಪ್ರಬಲವಾಗುವದು, ಅಧಿಕಾರಿಯು ಅಧಿಕಾರಿಗೆ ವಿರೋಧಿಯಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 “ನನ್ನ ಜನರೇ, ದುಃಖಿಸಬೇಡಿ, ಸುದ್ದಿಗಳು ಹಬ್ಬುತ್ತವೆ. ಆದರೆ ಹೆದರಬೇಡಿ. ಒಂದು ಸುದ್ದಿ ಈ ವರ್ಷ ಬರುವುದು. ಮುಂದಿನ ವರ್ಷ ಮತ್ತೊಂದು ಸುದ್ದಿ ಬರಬಹುದು. ದೇಶದಲ್ಲಿ ಭಯಂಕರವಾದ ಯುದ್ಧದ ಬಗ್ಗೆ ಸುದ್ದಿಗಳು ಕೇಳಿಬರುವವು. ರಾಜರುಗಳು ಬೇರೆ ರಾಜರುಗಳೊಂದಿಗೆ ಯುದ್ಧ ಮಾಡುತ್ತಿರುವ ವದಂತಿಗಳು ಕೇಳಿಬರುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಗೆ ನೀವು ಭಯಪಡದ ಹಾಗೆ, ಒಂದು ವರ್ಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರ್ಷದಲ್ಲಿ ಇನ್ನೊಂದು ಸುದ್ದಿಯೂ ಬರುವುದು. ದೇಶದಲ್ಲಿ ಬಲಾತ್ಕಾರವಿರುವುದು, ಆಳುವವನು ಆಳುವವನಿಗೆ ವಿರೋಧವಾಗಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:46
16 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಇಂತೆನ್ನುತ್ತಾರೆ : “ನಾನು ಈಜಿಪ್ಟಿನವರಲ್ಲಿ ಒಳಜಗಳವನ್ನು ಎಬ್ಬಿಸುವೆನು. ಅಣ್ಣತಮ್ಮಂದಿರು, ನೆರೆಹೊರೆಯವರು, ನಗರನಗರಗಳು, ರಾಜರಾಜರುಗಳು ಪರಸ್ಪರ ಕಾದಾಡುವರು.


ಅವನ ಮೇಲೆ ಭಯಾತ್ಮನನ್ನು ಬರಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಅಲ್ಲೇ ಕತ್ತಿಗೆ ತುತ್ತಾಗುವಂತೆ ಮಾಡುವೆನು, ಇದು ಸರ್ವೇಶ್ವರನ ನುಡಿ, ಎಂದು ತಿಳಿಸಿರಿ,” ಎಂದು ಉತ್ತರಕೊಟ್ಟನು.


ಇವೆಲ್ಲವೂ ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು.”


ಅವರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು.


ಆ ಮುನ್ನೂರು ಮಂದಿ ಕೊಂಬುಗಳನ್ನು ಊದುತ್ತಿರುವಲ್ಲಿ ಪಾಳೆಯದವರು ಒಬ್ಬರನ್ನೊಬ್ಬರು ಹತಮಾಡಿಕೊಳ್ಳುವಂತೆ ಸರ್ವೇಶ್ವರ ಮಾಡಿದರು. ಪಾಳೆಯದವರು ಚೇರೆರದ ದಾರಿಯಲ್ಲಿರುವ ಬೇತ್‍ಷೀಟ್ಟದವರೆಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾ ಪ್ರಾಂತ್ಯದವರೆಗೂ ಓಡಿಹೋದರು.


“ನನ್ನ ದಾಸ ಯಕೋಬೇ, ಭಯಪಡಬೇಡ ಇಸ್ರಯೇಲೇ, ಅಂಜಬೇಡ, ಇಗೋ, ನಾನು ನಿನ್ನನ್ನು ಉದ್ಧರಿಸುವೆನು ದೂರದೇಶದಿಂದ ನಿನ್ನ ಸಂತಾನವನ್ನು ರಕ್ಷಿಸುವೆನು ಸೆರೆಹೋದ ಸೀಮೆಯಿಂದ. ಯಕೋಬು ಹಾಯಾಗಿ ಹಿಂತಿರುಗಿ ಬಾಳುವುದು ನೆಮ್ಮದಿಯಿಂದ. ಭಯಪಡಬೇಡ ನನ್ನ ದಾಸ ಯಕೋಬೇ, ನಾನಿದ್ದೇನೆ ನಿನ್ನೊಂದಿಗೆ.


ದೇವರೇ ನನ್ನ ಶಕ್ತಿಯನು ಕುಂದಿಸಿಹನು ಸರ್ವಶಕ್ತ ನನ್ನನು ಆತಂಕಗೊಳಿಸಿಹನು.


ಆಪತ್ತುಕಾಲದಲ್ಲಿ ನೀನು ಎದೆಗುಂದಿದವನಾದರೆ ನಿನ್ನ ಬಲವು ಅಸಮರ್ಪಕವಾದುದೆ.


ಭಯಪಡಬೇಡ, ನಾನಿರುವೆ ನಿನ್ನ ಸಂಗಡ ಕರೆತರುವೆ ನಿನ್ನ ಸಂತತಿಯನ್ನು ಮೂಡಣದಿಂದ ಒಟ್ಟುಗೂಡಿಸುವೆ ನಿನ್ನವರನ್ನು ಪಡುವಣದಿಂದ.


ಯಾವ ರಾಷ್ಟ್ರಗಳಿಗೆ ನಿನ್ನನ್ನು ಅಟ್ಟಿದೆನೋ ಆ ರಾಷ್ಟ್ರಗಳನ್ನೆಲ್ಲ ನಿರ್ಮೂಲ ಮಾಡುವೆನು. ನಿನ್ನನ್ನಾದರೋ, ನಿರ್ಮೂಲ ಮಾಡೆನು ಮಿತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡೆನು. ಸರ್ವೇಶ್ವರನಾದ ನನ್ನ ನುಡಿ ಇದು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು