Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:42 - ಕನ್ನಡ ಸತ್ಯವೇದವು C.L. Bible (BSI)

42 ರಾಷ್ಟ್ರಗಳ ಕಣ್ಣಿಗೆ ಬಾಬಿಲೋನ್ ಭೀಕರವಾಗಿಬಿಟ್ಟಿದೆ, ಸಮುದ್ರವೆ ಬಾಬಿಲೋನಿಯದ ಮೇಲೆ ನುಗ್ಗಿಬಿಟ್ಟಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಬಾಬೆಲು ಜನಾಂಗಗಳ ಬೆರಗಿಗೆ ಈಡಾಗಿದೆ! ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ಸಮುದ್ರವು ಬಾಬಿಲೋನಿನ ಮೇಲೆ ನುಗ್ಗುವುದು. ಅದರ ಆರ್ಭಟಿಸುವ ತೆರೆಗಳು ಅದನ್ನು ಮುಚ್ಚಿಬಿಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಸಮುದ್ರವೇ ಬಾಬಿಲೋನಿನ ಮೇಲೆ ನುಗ್ಗಿಬಿಟ್ಟಿದೆ, ಲೆಕ್ಕವಿಲ್ಲದೆ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:42
15 ತಿಳಿವುಗಳ ಹೋಲಿಕೆ  

ಆ ಏಳುಸಾರಿ ಅರವತ್ತೆರಡು ವರ್ಷಗಳು ಮುಗಿದ ಮೇಲೆ ಅಭಿಷಿಕ್ತನನ್ನು ಅನ್ಯಾಯವಾಗಿ ಕೊಲ್ಲುವರು. ದಂಡೆತ್ತಿಬರುವ ರಾಜನ ಜನರು ನಗರವನ್ನೂ ಪವಿತ್ರಾಲಯವನ್ನೂ ಹಾಳುಮಾಡುವರು. ಪ್ರಳಯದಿಂದಲೋ ಎಂಬಂತೆ ನಗರವು ನಾಶವಾಗುವುದು. ಅಂತ್ಯದವರೆಗೆ ಯುದ್ಧವೂ ನಿಶ್ಚಿತ ವಿನಾಶವೂ ಸಂಭವಿಸುವುವು.


“ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು.


ಬಾಬಿಲೋನನ್ನು ನಾನು ಹಾಳುಮಾಡಿಬಿಡುತ್ತೇನೆ ಅದರ ಸದ್ದುಗದ್ದಲವನ್ನು ಅಡಗಿಸಿಬಿಡುತ್ತೇನೆ. ಮಹಾ ಜಲಪ್ರವಾಹಗಳು ಭೋರ್ಗರೆಯುವಂತೆ ಅಲೆ ಅಲೆಯಾಗಿ ಬಂದ ಶತ್ರುಗಳು ಘೋಷಿಸಿ ಆರ್ಭಟಿಸುತ್ತಿದ್ದಾರೆ.


ಸಮುದ್ರಗಳು ಪ್ರಭು, ಮೊರೆಯುತಿಹವು I ಗರ್ಜನೆಗೈದು ಭೋರ್ಗರೆಯುತಿಹವು II


ಭೋರ್ಗರೆವ ಸಮುದ್ರಗಳನು, ಗರ್ಜಿಸುವ ತರಂಗಗಳನು I ದೊಂಬಿಯೇಳುವ ಜನಾಂಗಗಳನು ಶಮನಗೊಳಿಸುವವನು ನೀನು II


ನಿನ್ನ ಜಲಪಾತಗಳ ಘನನಿನಾದ, ಮಡುವು ಮಡುವನು ಕರೆದಂತಿದೆ I ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ ಹಾದು ಹೋದಂತಿವೆ II


ಮೇಲಣಲೋಕದಿಂದ ಹಿಡಿದುಕೊಂಡನು ಕೈಚಾಚಿ I ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ II


ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು I ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು II


ಕಡಲಡವಿಯ ಕುರಿತು ದೈವೋಕ್ತಿ : ದಕ್ಷಿಣ ಸೀಮೆಯ ನಾಡನ್ನು ಕಸದಂತೆ ಗುಡಿಸುವ ಸುಂಟರಗಾಳಿಯ ಹಾಗೆ, ಅರಣ್ಯದ ಕಡೆಯ ಭಯಂಕರ ನಾಡಿನಿಂದ ಗಂಡಾಂತರ ಬರಲಿದೆ.


ಆದುದರಿಂದ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಟೈರೇ, ಇಗೋ ನಿನಗೆ ವಿರುದ್ಧವಾಗಿದ್ದೇನೆ; ಸಮುದ್ರವು ತೆರೆಗಳನ್ನು ಎಬ್ಬಿಸುವಂತೆ ನಾನು ಬಹುಜನಾಂಗಗಳನ್ನು ನಿನ್ನ ವಿರುದ್ಧ ಎಬ್ಬಿಸುವೆನು.


ಆಮೇಲೆ ಉತ್ತರರಾಜನ ಮಕ್ಕಳು ಯುದ್ಧಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯ ಬೆಳೆದು ತುಂಬಿತುಳುಕುವ ಪ್ರವಾಹದಂತೆ ಹಬ್ಬಿಕೊಳ್ಳುವುದು. ಅವರು ಮತ್ತೆ ಯುದ್ಧಕ್ಕೆ ಹೊರಟು ದಕ್ಷಿಣರಾಜನ ದುರ್ಗದವರೆಗೆ ನುಗ್ಗುವರು.


ಅದರ ಸಾರಾಂಶ ಇದು: ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು