Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:38 - ಕನ್ನಡ ಸತ್ಯವೇದವು C.L. Bible (BSI)

38 ಬಾಬಿಲೋನಿನವರು ಯುವಸಿಂಹಗಳಂತೆ ಒಟ್ಟಿಗೆ ಗರ್ಜಿಸುವರು, ಸಿಂಹದ ಮರಿಗಳಂತೆ ಗುರುಗುಟ್ಟುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಆ ದೇಶದವರು ಪ್ರಾಯದ ಸಿಂಹಗಳಂತೆ ಒಟ್ಟಿಗೆ ಗರ್ಜಿಸುತ್ತಿದ್ದಾರೆ, ಸಿಂಹದ ಮರಿಗಳ ಹಾಗೆ ಗುರುಗುಟ್ಟುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಆ ದೇಶದವರು ಪ್ರಾಯದ ಸಿಂಹಗಳಂತೆ ಒಟ್ಟಿಗೆ ಗರ್ಜಿಸುತ್ತಿದ್ದಾರೆ, ಸಿಂಹದ ಮರಿಗಳ ಹಾಗೆ ಗುರುಗುಟ್ಟುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 “ಬಾಬಿಲೋನಿನ ಜನರು ಗರ್ಜಿಸುವ ಪ್ರಾಯದ ಸಿಂಹಗಳಂತಿದ್ದಾರೆ. ಅವರು ಮರಿಸಿಂಹಗಳಂತೆ ಗುರುಗುಟ್ಟುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು. ಸಿಂಹಗಳ ಮರಿಗಳ ಹಾಗೆ ಶಬ್ದಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:38
10 ತಿಳಿವುಗಳ ಹೋಲಿಕೆ  

ಶತ್ರುಗಳು ಯುವ ಸಿಂಹಗಳಂತೆ ಅವನಿಗೆ ವಿರುದ್ಧ ಗರ್ಜಿಸಿ ಆರ್ಭಟಿಸುತ್ತಿವೆ; ಅವನ ನಾಡನ್ನು ಹಾಳುಮಾಡಿವೆ, ಅವನ ಊರುಗಳು ಸುಟ್ಟು ನಿರ್ಜನವಾಗಿವೆ.


ಆಹಾ! ಕೇಳಿಬರುತ್ತಿದೆ ಕುರುಬರ ಗೋಳಾಟ ಬರಡಾಗಿದೆ ಅವರ ಹುಲ್ಲುಗಾವಲ ನೋಟ ಕೇಳಿರಿ, ಇಗೋ, ಯುವಸಿಂಹಗಳ ಆಕ್ರಂದನ ಏಕೆನೆ ಪಾಳುಬಿದ್ದಿದೆ ಜೋರ್ಡನಿನ ದಟ್ಟವನ!


ಅಲ್ಲಿರದು ಸಿಂಹ ಸಿಂಹಿಣಿ, ಅಲ್ಲಿ ಸೇರದು ಕ್ರೂರ ಪ್ರಾಣಿ. ಕಾಣಸಿಗದಲ್ಲಿ ಇದಾವ ಹಾನಿ, ಪಾಪವಿಮುಕ್ತರೇ ನಡೆವರಲ್ಲಿ.


ಮುರಿದುಬಿಡು ಹೇ ದೇವಾ, ಆ ದುರುಳರ ಹಲ್ಲುಗಳನು I ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ ಕೋರೆಗಳನು II


ಯುವ ಕೇಸರಿಗೆ ಇರಬಹುದು ಹಸಿವು, ದಾಹ I ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ II


ಅವನ ಶಕ್ತಿ ಇಂಗಿಹೋಯಿತು. ಆಗ ಅವಳು, “ಸಂಸೋನರೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಿದಳು. ಅವನು ಎಚ್ಚೆತ್ತು, “ಮುಂಚಿನಂತೆಯೇ ಈಗಲೂ ಕೊಸರಿಕೊಂಡು ಹೋಗುವೆನು,” ಎಂದುಕೊಂಡನು. ಆದರೆ ಸರ್ವೇಶ್ವರ ತನ್ನನ್ನು ಬಿಟ್ಟುಹೋಗಿ ಇದ್ದಾರೆಂಬುದು ಅವನಿಗೆ ತಿಳಿಯಲಿಲ್ಲ.


ತಮ್ಮ ತಂದೆ ಮತ್ತು ಅವನ ಜನರೂ ಶೂರರಾಗಿದ್ದಾರೆಂದೂ, ಈಗಲಾದರೋ ಅವರು ಮರಿಯನ್ನು ಕಳೆದುಕೊಂಡ ಕರಡಿಯಂತೆ ರೋಷ ಉಳ್ಳವರಾಗಿದ್ದಾರೆಂದೂ ತಮಗೆ ಗೊತ್ತುಂಟಲ್ಲವೆ? ಇದಲ್ಲದೆ ತಮ್ಮ ತಂದೆ ಯುದ್ಧ ನಿಪುಣನು; ಜನರ ಮಧ್ಯದಲ್ಲಿ ರಾತ್ರಿ ಕಳೆಯುವುದಿಲ್ಲ.


ಗರ್ಜಿಸುತಿಹರು ಸೈನಿಕರು ಸಿಂಹದಂತೆ, ಆರ್ಭಟಿಸುತಿಹರವರು ಪ್ರಾಯದ ಸಿಂಹಗಳಂತೆ, ಗುರುಗುಟ್ಟುತಿಹರು ಬೇಟೆ ಹಿಡಿದ ಕೇಸರಿಯಂತೆ. ಅದನ್ನೆತ್ತಿಕೊಂಡು ಓಡುತಿಹರು, ಬಿಡಿಸುವರಾರೂ ಇಲ್ಲದಂತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು