Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:26 - ಕನ್ನಡ ಸತ್ಯವೇದವು C.L. Bible (BSI)

26 ಮೂಲೆಗಲ್ಲಿಗಾಗಲಿ, ಅಸ್ತಿವಾರದ ಕಲ್ಲಿಗಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು. ನೀನು ನಿತ್ಯನಾಶಕ್ಕೆ ಗುರಿಯಾಗುವೆ,” ಎನ್ನುತ್ತಾರೆ ಸರ್ವೇಶ್ವರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಮೂಲೆಗಲ್ಲಿಗಾಗಲಿ ಅಥವಾ ಅಸ್ತಿವಾರಕ್ಕಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು, ನೀನು ನಿತ್ಯನಾಶಕ್ಕೆ ಗುರಿಯಾಗುವಿ, ಇದು ಯೆಹೋವನ ನುಡಿ” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಮೂಲೆಗಲ್ಲಿಗಾಗಲಿ ಅಸ್ತಿವಾರಕ್ಕಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು, ನೀನು ನಿತ್ಯನಾಶನಕ್ಕೆ ಗುರಿಯಾಗುವಿ. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ನಿಮ್ಮಿಂದ ಜನರಿಗೆ ಮೂಲೆಗಲ್ಲಾಗುವಷ್ಟು ದೊಡ್ಡ ಕಲ್ಲು ಸಹ ಸಿಗಲಾರದು. ಜನರು ತಮ್ಮ ಕಟ್ಟಡದ ಅಸ್ತಿವಾರಕ್ಕಾಗಿ ಒಂದು ಕಲ್ಲುಬಂಡೆಯನ್ನು ಬಾಬಿಲೋನಿನಿಂದ ತೆಗೆದುಕೊಂಡು ಹೋಗಲಾರರು. ಏಕೆಂದರೆ ಶಾಶ್ವತವಾಗಿ ನಿಮ್ಮ ನಗರವು ಒಡೆದ ಕಲ್ಲುಗಳ ಗುಡ್ಡೆಯಾಗುವುದು.” ಯೆಹೋವನು ಹೀಗೆನ್ನುತ್ತಾನೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು. ನೀನು ಎಂದೆಂದಿಗೂ ಹಾಳಾಗುವೆ,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:26
10 ತಿಳಿವುಗಳ ಹೋಲಿಕೆ  

ಕಾಡು, ಕಗ್ಗಾಡು, ಬೆಂಗಾಡು ಆಗಿವೆ ಅದರ ನಗರಗಳು. ಆ ದೇಶದೊಳು ಯಾರೂ ವಾಸಿಸರು, ಯಾವ ನರಪ್ರಾಣಿಯೂ ಹಾದುಹೋಗದು.


ಆಗ ಬಾಬಿಲೋನ್ ಹಾಳುದಿಬ್ಬ ಆಗುವುದು. ಗುಳ್ಳೆನರಿಗಳ ಬೀಡಾಗುವುದು. ಅದು ಭಯಭೀತಿಗೂ ಸೀಳು ಪರಿಹಾಸ್ಯಕ್ಕೂ ಆಸ್ಪದವಾಗುವುದು.


ಪೊಡವಿ ನೊಂದು ನಡುಗುತ್ತಿದೆ! ಏಕೆಂದರೆ ಬಾಬಿಲೋನ್ ದೇಶ ಹಾಳುಬಿದ್ದು ನಿರ್ಜನವಾಗಲಿ ಎಂದು ಸರ್ವೇಶ್ವರ ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪ ಅಚಲವಾಗಿದೆ.


ಪರಿವರ್ತಿಸುವೆನಾ ನಾಡನು ಜವುಗು ನೆಲವನ್ನಾಗಿ, ಅಹುದು, ಮುಳ್ಳುಹಂದಿಗಳ ರೊಪ್ಪವನ್ನಾಗಿ, ಗುಡಿಸಿಬಿಡುವೆನು ನಾಶವೆಂಬ ಪೊರಕೆಯಿಂದ ಪೂರ್ತಿಯಾಗಿ".


ಆ ಅವಧಿಯ ತರುವಾಯ ನಾನು ಬಾಬಿಲೋನನ್ನೂ ಅದರ ಅರಸನನ್ನೂ ದಂಡಿಸುವೆನು. ಅದರ ದ್ರೋಹದ ನಿಮಿತ್ತ ಆ ಬಾಬಿಲೋನಿನ ನಾಡನ್ನು ನಿತ್ಯ ವಿನಾಶಕ್ಕೆ ಗುರಿಪಡಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು